ರಾಯಚೂರು: ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎನ್.ಆರ್ ಸಂತೋಷ್ ಆತ್ಮಹತ್ಯೆ ಯತ್ನ ಪ್ರಕರಣಕ್ಕೆ `ಆ ವಿಡಿಯೋ’ ಕಾರಣ ಎಂದಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ತಮ್ಮ ಬಳಿ ಇರುವ ವಿಡಿಯೋ ಇದ್ರೆ ಕೊಡಲಿ, ತನಿಖೆ ನಡೆಸಲಾಗುವುದು ಎಂದು ಗೃಹಸಚಿವ ಬಸವರಾಜ ಬೋಮ್ಮಾಯಿ ಹೇಳಿದ್ದಾರೆ.

ರಾಯಚೂರಿನಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಮೊಮ್ಮಾಯಿ, ಆತ್ಮಹತ್ಯೆಗೆ ಯತ್ನಿಸಿದ ಸಿಎಂ ಕಾರ್ಯದರ್ಶಿ ಸಂತೋಷ್ ಚೇತರಿಸಿಕೊಳ್ಳುತ್ತಿದ್ದಾರೆ. ಅವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧ ತನಿಖೆ ನಡೆಯುತ್ತಿದೆ. ಡಿ.ಕೆ ಶಿವಕುಮಾರ ಬಳಿ ವಿಡಿಯೋಗಳಿದ್ದರೆ ಅವುಗಳನ್ನು ನೀಡಿದರೆ ತನಿಖೆ ಮಾಡಲಾಗುವುದು ಎಂದರು.

ಬರುವ ವರ್ಷದಲ್ಲಿ 100 ಕೋಟಿ ಯೋಜನೆಯಲ್ಲಿ ಪೊಲೀಸ್ ಠಾಣೆ ಆಧುನೀರಣ ಮಾಡಲಾಗುವುದು. ವಿಧಿವಿಜ್ಞಾನ ಕೇಂದ್ರ ಸಾಮರ್ಥ್ಯ ಹೆಚ್ಚಿಸುವುದು, ವಿಧಿವಿಜ್ಞಾನ ಆಧುನೀಕರಣ ಮಾಡಲಾಗುವುದು, ಮಾನವ ಕಳ್ಳಸಾಕಾಣಿಕೆಯನ್ನು ಈಗ ಮಹಿಳಾ ಠಾಣೆಗೆ ವಹಿಸಲಾಗಿದೆ. ಮುಂದಿನ ದಿನಗಳಲ್ಲಿ ಮಾನವ ಕಳ್ಳಸಾಗಣೆ ತಡೆಗೆ ವಿಶೇಷ ಕಾರ್ಯಪಡೆ ರಚಿಸಲಾಗುವುದು ಎಂದು ಬಸವರಾಜ ಬೋಮ್ಮಾಯಿ ತಿಳಿಸಿದರು.
ಮನವ ಕಳ್ಳಸಾಗಣೆ ಅಂತಾರಾಷ್ಟ್ರೀಯ ಮಟ್ಟದ ದೊಡ್ಡ ಜಾಲವಾಗಿದೆ. ಡಾರ್ಕ್ನೆಟ್ ಮೂಲಕ ಮಾನವ ಕಳ್ಳಸಾಗಣೆ ನಡೆಯುತ್ತಿದೆ. ಡಾರ್ಕ್ನೆಟ್ ಮೂಲಕ ಡ್ರಗ್ಸ್, ಶಸ್ತ್ರಾಸ್ತ್ರ, ಮಾನವ ಕಳ್ಳಸಾಗಣೆ ದಂಧೆ ನಡೆಯುತ್ತಿದೆ. ಇವುಗಳನ್ನು ಬೇರು ಸಮೇತ ಕಿತ್ತುಹಾಕಲು ಕಾರ್ಯಪಡೆ ರಚಿಸಲು ಹಾಗೂ ಅದಕ್ಕೆ ಬೇಕಾಗಿರುವ ವ್ಯವಸ್ಥೆ ಮಾಡಿಕೊಡಲು ತೀರ್ಮಾನ ಮಾಡಲಾಗಿದೆ. ಇದರಿಂದ ಡಾರ್ಕ್ನೆಂಟ್ ಲಿಂಕ್ ಕತ್ತರಿಸಲು ಸಾಧ್ಯವಾಗಲಿದೆ ಎಂದು ಗೃಹ ಸಚಿವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








