D K Shivakumar : ಯಾರು ಸ್ಟ್ರಾಂಗ್ ಇರ್ತಾರೋ ಅವರ ಮೇಲೆ ಇಡಿ ಪ್ರಯೋಗ
ಕೊಪ್ಪಳ : ಬಿಜೆಪಿ ಸರ್ಕಾರ ಏನು ಇದೆ ಅಲ್ವಾ..? ಯಾರು ಸ್ಟ್ರಾಂಗ್ ಇರ್ತಾರೆ..? ಯಾರಿಂದ ತೊಂದರೆ ಆಗುತ್ತೆ..? ಅವರ ಮೇಲೆ ಈ ಇಡಿ ಪ್ರಯೋಗ ನಡೆಯುತ್ತೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆರೋಪಿಸಿದ್ದಾರೆ.
ಕೊಪ್ಪಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ.ಶಿವಕುಮಾರ್, ಬಿಜೆಪಿ ಸರ್ಕಾರ ಏನು ಇದೆ ಅಲ್ವಾ..? ಯಾರು ಸ್ಟ್ರಾಂಗ್ ಇರ್ತಾರೆ..? ಯಾರಿಂದ ತೊಂದರೆ ಆಗುತ್ತೆ..? ಅವರ ಮೇಲೆ ಈ ಇಡಿ ಪ್ರಯೋಗ ನಡೆಯುತ್ತೆ. ಇಡಿ, ಸಿಬಿಐ ಉಪಯೋಗಿಸಿಕೊಂಡು ದಿನ ಕೊಡಬಾರದ ಕಿರುಕುಳ ಕೊಡುತ್ತಾರೆ. ನ್ಯಾಯಾಲಯದ ಬಗ್ಗೆ ನಮಗೆ ನಂಬಿಕೆ ಇದೆ. ಅರೆಸ್ಟ್ ಮಾಡಿ 60 ದಿನಗಳಲ್ಲಿ ಚಾರ್ಜ್ ಶೀಟ್ ಹಾಕ್ತಾರೆ. ಆದರೆ ಹಾಕಿರಲಿಲ್ಲ. 50 ದಿನ ಮುಂಚಿತವಾಗಿ ನನಗೆ ಹೈಕೋರ್ಟ್ ಲ್ಲಿ ಬೇಲ್ ಸಿಕ್ತು. ಈಗ ಚಾರ್ಜ್ ಶೀಟ್ ಫೈಲ್ ಮಾಡಿದ್ದಾರೆ. 1 ನೇ ತಾರೀಖು ಕರೆದಿದ್ದಾರೆ, ಹೈಕೋರ್ಟ್ ಲ್ಲಿ ಬೇಲ್ ಆಗಿದೆ. ಸುಪ್ರೀಂಕೋರ್ಟ್ ರಲ್ಲಿ ಸ್ಟ್ಯಾಂಪ್ ಕೊಟ್ಟಾಯ್ತು. ರಾಜಕೀಯ ಉದ್ದೇಶದಿಂದ ಆದ ಕೇಸ್ ಗಳನ್ನು ಎದುರಿಸಲೇ ಬೇಕು ಎದುರಿಸುತ್ತೇವೆ ಎಂದು ಡಿಕೆಶಿ ಹೇಳಿದ್ದಾರೆ.

ಮೂರು ವರ್ಷದ ಹಿಂದೇನೆ ಚಾರ್ಜ್ ಶೀಟ್ ಹಾಕಬಹುದಾಗಿತ್ತು. ಈಗ ಹಾಕುವಂತದ್ದು ಏನಿದೆ? ನನ್ನ ಟೈಮ್ ಬ್ಯುಸಿ ಇಡಬೇಕಂತ ಇದೆಲ್ಲ ಮಾಡುತ್ತಿದ್ದಾರೆ. ತೊಂದರೆ ಕೊಡಬೇಕು, ಕಿರುಕುಳ ಕೊಡಬೇಕು. ದಿನ ಸಿಬಿಐ ನೋಟಿಸ್ ಗಳು ಬರುತ್ತಿವೆ. ನಮ್ಮ ಕುಟುಂಬಕ್ಕೆ ನನ್ನ ಸ್ನೇಹಿತರಿಗೆ ಎಲ್ಲರಿಗೂ ಬರುತ್ತಿವೆ. ಈ ದೇಶದಲ್ಲಿ ಯಾರಮೇಲು ಡಿಸ್ ಅಪಿಯರ್ ಕೇಸ್ ಇಲ್ಲ, ನನ್ನೊಬ್ಬನ ಮೇಲೆ ಕೊಟ್ಟಿದ್ದಾರೆ ಎಂದು ಕಿಡಿಕಾರಿದ್ದಾರೆ.
ಅಗ್ನಿಪಥ ವಿಚಾರವಾಗಿ ಮಾತನಾಡಿ, ಅಗ್ನಿಪಥ ಯೋಜನೆ ಬಗ್ಗೆ ಈಗಾಗಲೇ ಹೊತ್ತಿ ಉರಿಯುತ್ತಿದೆ. ಯುವಕರನ್ನು ಬಾಡಿಗಾಡ್, ಬಿಜೆಪಿ ಕಚೇರಿಗೆ ಸೆಕ್ಯುರಿಟಿ ಮಾಡೋಕೆ ಮಾಡುತ್ತಿದ್ದಾರೆ. ಬೇಕಾದರೆ ಮಂತ್ರಿಗಳ ಮಕ್ಕಳನ್ನು ಕಳುಹಿಸಲಿ. ನಮ್ಮ ಮಕ್ಕಳಿಗೆ ಇಂಜಿನಿಯರ್ ಡಾಕ್ಟರ್ಸ್ ಆಗೋದಕ್ಕೆ ವಿದ್ಯಾಭ್ಯಾಸ ಕೊಡಲಿ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.








