Daali Dhananjay | ಹೆಡ್ ಬುಷ್ ಚಿತ್ರಕ್ಕೆ ಭೇಷ್ ಎಂದ ಜನ
ಧನಂಜಯ ನಟಿಸಿ ನಿರ್ಮಿಸಿರುವ ಹೆಡ್ ಬುಷ್
ಜಯರಾಜ್ ಪಾತ್ರದಲ್ಲಿ ಡಾಲಿ ಧನಂಜಯ
ಕೊತ್ವಾಲ್ ಪಾತ್ರದಲ್ಲಿ ವಸಿಷ್ಠ ಸಿಂಹ
ಶೂನ್ಯ ನಿರ್ದೇಶನಕ್ಕೆ ಪ್ರೇಕ್ಷಕರ ಮೆಚ್ಚುಗೆ
ಡಾಲಿ ಧನಂಜಯ ನಟಿಸಿ ನಿರ್ಮಿಸಿರುವ ಹೆಡ್ ಬುಷ್ ಸಿನಿಮಾ ತೆರೆಗೆ ಅಪ್ಪಳಿಸಿದೆ.
70 – 80ರ ದಶಕದಲ್ಲಿ ನಡೆದ ನೈಜ ಘಟನೆಗಳನ್ನಾಧರಿಸಿ ಅಗ್ನಿ ಶ್ರೀಧರ್ ಅವರು ಮೈ ಡೇಸ್ ಇನ್ ದ ಅಂಡರ್ ವರ್ಲ್ಡ್ ಪುಸ್ತಕವನ್ನು ಬರೆದಿದ್ದರು.
ಈ ಪುಸ್ತಕವೇ ಈಗ ಹೆಡ್ ಬುಷ್ ಸಿನಿಮಾ ಆಗಿದೆ.
ಜಯರಾಜ್ ಪಾತ್ರದಲ್ಲಿ ಧನಂಜಯ ಕಾಣಿಸಿಕೊಂಡಿದ್ದು, ಕೊತ್ವಾಲ್ ಪಾತ್ರದಲ್ಲಿ ವಸಿಷ್ಠ ಸಿಂಹ ನಟಿಸಿದ್ದಾರೆ.
ಹಾಗೆ ಗಂಗ ಅನ್ನೋ ಪಾತ್ರಕ್ಕೆ ನಟ ಲೂಸ್ ಮಾದ ಯೋಗಿ ಜೀವ ತುಂಬಿದ್ದಾರೆ.
ಈ ಸಿನಿಮಾವನ್ನು ಶೂನ್ಯ ನಿರ್ದೇಶಿಸಿದ್ದು, ಸಿನಿಮಾಗೆ ಜನ ಜೈ ಎಂದಿದ್ದಾರೆ.
ಸಿನಿಮಾ ಎಲ್ಲಾಕಡೆ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಡಾಲಿ ನಟನೆಗೆ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.