0.1 ದೇಶದಲ್ಲಿ 3 ಲಕ್ಷ ಕೋವಿಡ್ ಕೇಸ್ ಪತ್ತೆ…
ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿನ ಪ್ರಮಾಣ ಏರುತ್ತಿದ್ದು ಕಳೆದ 24 ಗಂಟೆಗಯಲ್ಲಿ 3.17 ಲಕ್ಷಕ್ಕೂ ಹೆಚ್ಚು (3,17,532) ಹೊಸ ಕೊರೊನಾ ಪ್ರಕರಣಗಳು ವರದಿಯಾಗಿದೆ.
ದೇಶದಲ್ಲಿ ಸಕ್ರಿಯ ಕೊರೊನಾ ಪ್ರಕರಣಗಳು 19,24,051 ರಷ್ಟಿದ್ದರೆ, ಚೇತರಿಕೆ ದರವು ಶೇಕಡಾ 93.69 ಪ್ರತಿಶತದಷ್ಟಿದೆ.
ಕಳೆದ 24 ಗಂಟೆಯಲ್ಲಿ 2,23,990 ಜನ ಚೇತರಿಸಿಕೊಂಡಿದ್ದಾರೆ. ಒಟ್ಟಾರೆ ಚೇತರಿಸಿಕೊಂಡವರ ಸಂಖ್ಯೆ 3,58,07,029 ಕ್ಕೆ ತಲುಪಿದೆ. ಕಳೆದ 24 ಗಂಟೆಯಲ್ಲಿ 491 ಜನ ಸಾವನಪ್ಪಿದ್ದಾರೆ. ಕಳೆದ 24 ಗಂಟೆಯಲ್ಲಿ 9,287 ಓಮಿಕ್ರಾನ್ ಪ್ರಕರಣಗಳು ವರದಿಯಾಗಿದೆ.
0.2 ಕೊರೊನಾ ಮೂರನೇ ಅಲೆಯಲ್ಲಿ ವಿದ್ಯಾರ್ಥಿಗಳೇ ಟಾರ್ಗೆಟ್..!
ಮಂಡ್ಯ : ಸಕ್ಕರೆ ನಾಡು ಮಂಡ್ಯದಲ್ಲಿ ಕೊರೊನಾ ಮೂರನೇ ಅಬ್ಬರ ಜೋರಾಗಿದ್ದು, ವಿದ್ಯಾರ್ಥಿಗಳಲ್ಲಿಯೇ ಹೆಚ್ಚಾಗಿ ಸೋಂಕು ಕಾಣಿಸಿಕೊಳ್ಳುತ್ತಿದೆ. ಮದ್ದೂರು ಸರ್ಕಾರಿ ಪಿಯು ಕಾಲೇಜಿನ 25 ಹಾಗೂ ಸೋಮನಹಳ್ಳಿ GTDC ಕಾಲೇಜಿನ 18 ವಿದ್ಯಾರ್ಥಿಗಳಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಇದರಿಂದ ಉಳಿದ ವಿದ್ಯಾರ್ಥಿಗಳಲ್ಲಿ ಆತಂಕ ಹೆಚ್ಚಾಗಿದೆ. ಸಾಮೂಹಿಕ ಕೋವಿಡ್ ಟೆಸ್ಟ್ ವೇಳೆ ವಿದ್ಯಾರ್ಥಿಗಳಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ.
0.3 ಶಾಲೆಗಳನ್ನು ಪುನರಾರಂಭಿಸಬಹುದು : ಬಿ.ಸಿ ನಾಗೇಶ
ಬೆಂಗಳೂರು: ತಾಂತ್ರಿಕ ಸಲಹಾ ಸಮಿತಿ ಒಪ್ಪಿದರೆ ಬಂದ್ ಆದ ಮಹಾನಗರಗಳಲ್ಲಿನ ಶಾಲೆಗಳನ್ನ ಪುನಾರಂಭಿಸಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ,ಸಿ ನಾಗೇಶ ಹೇಳಿದ್ದಾರೆ.
ವಿಧಾಸೌಧದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು ಶಿಕ್ಷಣದ ದೃಷ್ಟಿಯಿಂದ ನೋಡಿದರೆ ಶಾಲೆಗಳನ್ನು ತೆರೆಯಬಹುದು ಎಂದೆನಿಸುತ್ತದೆ ಎಂದು ಹೇಳಿದ್ದಾರೆ.
0.4 ಬಿಜೆಪಿ – ಕಾಂಗ್ರೆಸ್ ಟ್ವೀಟ್ ವಾರ್..!!
ಬೆಂಗಳೂರು : ಕರ್ನಾಟಕವನ್ನು ಕಾಂಗ್ರೆಸ್ ಪಕ್ಷ ಗೂಂಡಾ ರಾಜ್ಯ ಮಾಡಲು ಹೊರಟಂತಿದೆ ಎಂದು ರಾಜ್ಯ ಕಾಂಗ್ರೆಸ್ ವಿರುದ್ಧ ರಾಜ್ಯ ಬಿಜೆಪಿ ಕಿಡಿಕಾರಿದೆ. ರಕ್ಷಾ ರಾಮಯ್ಯ ಬೆಂಬಲಿಗನ ಮೇಲೆ ನಲಪಾಡ್ ಹಲ್ಲೆ ನಡೆಸಿದ್ದಾರೆ ಎಂಬ ಆರೋಪದ ಬಗ್ಗೆ ಟ್ವೀಟ್ ಮಾಡಿರುವ ಬಿಜೆಪಿ, ಕಾಂಗ್ರೆಸ್ ಪಕ್ಷದ ನಾಯಕರ ಗೂಂಡಾಗಿರಿ ಮತ್ತೆ ಆರಂಭಗೊಂಡಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಶಿಷ್ಯ ಮಹಮ್ಮದ್ ನಲಪಾಡ್ ಬೆಂಬಲಿಗರು ಕಾಂಗ್ರೆಸ್ ಕಾರ್ಯಕರ್ತರ ಮೇಲೆಯೇ ಹಲ್ಲೆ ನಡೆಸಿದ್ದಾರೆ. ಕರ್ನಾಟಕವನ್ನು ಕಾಂಗ್ರೆಸ್ ಪಕ್ಷ ಗೂಂಡಾ ರಾಜ್ಯ ಮಾಡಲು ಹೊರಟಂತಿದೆ ಎಂದು ಟೀಕಿಸಿದೆ.
0.5 ಯುಪಿ ಚುನಾವಣೆ : BJP ಅಭ್ಯರ್ಥಿಗಳ ಪಟ್ಟಿ ರಿಲೀಸ್
ಉತ್ತರಾಖಂಡ್ ವಿಧಾನಸಭಾ ಚುನಾವಣಾ ಪ್ರಯುಕ್ತ ಆಡಳಿತಾರೂಢ ಭಾರತೀಯ ಜನತಾ ಪಕ್ಷ (ಬಿಜೆಪಿ) ಗುರುವಾರ ದೆಹಲಿಯಲ್ಲಿರುವ ಪಕ್ಷದ ರಾಷ್ಟ್ರೀಯ ಕೇಂದ್ರ ಕಚೇರಿಯಲ್ಲಿ ಚುನಾವಣಾ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಪ್ರಕಟಿಸಿದೆ. ಉತ್ತರಾಖಂಡ್ ರಾಜ್ಯದ 70 ವಿಧಾನಸಭಾ ಸ್ಥಾನಗಳ ಪೈಕಿ 59 ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ಘೋಷಿಸಿದೆ, ಹಾಲಿ 10 ಎಂ ಎಲ್ ಎ ಗಳಿಗೆ ಟಿಕೆಟ್ ನೀಡದೆ ಶಾಕ್ ನೀಡಿದೆ.
0.6 ಭಾರತೀಯನ ಅಪರಿಸಿದ ಚೀನಾ ಸೈನಿಕರು
ಅರುಣಾಚಲ ಪ್ರದೇಶದ ಸಿಯಾಂಗ್ ಜಿಲ್ಲೆಯಲ್ಲಿ ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್ಎ) 17 ವರ್ಷದ ಬಾಲಕನನ್ನು ಅಪಹರಿಸಿದೆ. ಅರುಣಾಚಲ ರಾಜ್ಯದ ಸಂಸದ ತಪಿರ್ ಗಾವೊ ಬುಧವಾರ ಈ ಮಾಹಿತಿ ನೀಡಿದ್ದಾರೆ. ಅಪಹರಣಕ್ಕೊಳಗಾದ ಬಾಲಕನ ಹೆಸರು ಮಿರಾಮ್ ಟ್ಯಾರೋನ್ ಎಂದು ಗುರುತಿಸಲಾಗಿದೆ.
0.7 ಮುಂದೆ ವೇಗವಾಗಿ ಹರಡಲಿದೆ ಒಮಿಕ್ರಾನ್ : WHO
ರಜಾದಿನಗಳಲ್ಲಿ ಹೆಚ್ಚಿದ ಸಾಮಾಜಿಕ ಚಟುವಟಿಕೆಗಳು ಮತ್ತು ಜನರ ನಿರ್ಲಕ್ಷ್ಯದಿಂದಾಗಿ ಮುಂಬರುವ ವಾರಗಳಲ್ಲಿ ಒಮಿಕ್ರಾನ್ ಪ್ರಕರಣಗಳಲ್ಲಿ ಏರಿಕೆ ಉಂಟಾಗಬಹುದು. ಆಸ್ಪತ್ರೆಗಳ ಮೇಲೆ ಉತ್ತಡ ಹೆಚ್ಚಾಗುವ ಸಾಧ್ಯತೆಗಳಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿದೆ. ಈ ಹಿಂದೆ ಅಂದ್ರೆ ಒಮಿಕ್ರಾನ್ ಹರಡುತ್ತಿದ್ದ ಆರಂಭದಲ್ಲಿ , ಒಮಿಕ್ರಾನ್ ಗಿಂತಲೂ ಡೆಲ್ಟಾ ತೀವ್ರತೆ ಹೆಚ್ಚಿದೆ ಎಂದು WHO ತಿಳಿಸಿತ್ತು.. ಆದರೆ 2021ರ ಆಗಸ್ಟ್ 21ರಲ್ಲಿ ಏರುಗತಿ ಕಂಡಿದ್ದ ಕೋವಿಡ್ ಸಾವಿನ ಪ್ರಕರಣಗಳಲ್ಲಿ ಸದ್ಯ ಇಳಿಕೆ ಕಂಡುಬಂದಿದೆ ಎಂದು ತಿಳಿಸಿದೆ.
0.8 ‘OTT’ಗೆ ಬರುತ್ತಿದ್ದಾನೆ ‘ಬಡವ ರಾಸ್ಕಲ್’
ಬೆಂಗಳೂರು: ಸ್ಯಾಂಡಲ್ ವುಡ್ ನ ನಟ ರಾಕ್ಷಸ ಡಾಲಿ ಧನಂಜಯ ಮೊದಲ ಬಾರಿಗೆ ನಿರ್ಮಾಪಕನಾಗಿ ಗೆದ್ದಿದ್ದಾರೆ. ಈಗ ಅವರೇ ನಿರ್ಮಿಸಿ , ಅಭಿನಯಿಸಿರುವ ‘ಬಡವ ರಾಸ್ಕಲ್’ ಚಿತ್ರವು ಗಣರಾಜ್ಯೋತ್ಸವ (ಜನವರಿ 26) ಕ್ಕೆ ವೂಟ್ ಸೆಲೆಕ್ಟ್ ನಲ್ಲಿ ಪ್ರಸಾರವಾಗಲಿದೆ.
0.8 ಐಸಿಸಿ ಟೆಸ್ಟ್ ರ್ಯಾಂಕಿಂಗ್ ನಲ್ಲಿ 3ನೇ ಸ್ಥಾನಕ್ಕೆ ಕುಸಿದ ಭಾರತ
ಐಸಿಸಿ ಟೆಸ್ಟ್ ರ್ಯಾಂಕಿಂಗ್ ನಲ್ಲಿ ಟೀಂ ಇಂಡಿಯಾ ಮೂರನೇ ಸ್ಥಾನಕ್ಕೆ ಕುಸಿತ ಕಂಡಿದೆ. ಐಸಿಸಿ ಟೆಸ್ಟ್ ರ್ಯಾಂಕಿಂಗ್ ಪಟ್ಟಿ ಇಂದು ಬಿಡುಗಡೆಯಾಗಿದ್ದು, ಆ್ಯಶಸ್ನಲ್ಲಿ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿದ ಆಸ್ಟ್ರೇಲಿಯಾ ತಂಡ ಮೊದಲ ಸ್ಥಾನದಲ್ಲಿದೆ. ದಕ್ಷಿಣ ಆಫ್ರಿಕಾ ನೆಲದಲ್ಲಿ ಟೆಸ್ಟ್ ಸರಣಿ ಸೋತಿರುವ ಭಾರತ ಟೆಸ್ಟ್ ರ್ಯಾಂಕಿಂಗ್ ನಲ್ಲಿ ಮೂರನೇ ಸ್ಥಾನಕ್ಕೆ ಕುಸಿದಿದೆ. ಎರಡನೇ ಸ್ಥಾನದಲ್ಲಿ ನ್ಯೂಜಿಲೆಂಡ್ ತಂಡವಿದೆ.
0.9 ವಿರಾಟ್ ಕೊಹ್ಲಿ ಹೊಸ ದಾಖಲೆ
ಟೀಮ್ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಹೊಸ ದಾಖಲೆಯೊಂದನ್ನು ಬರೆದಿದ್ದಾರೆ. ವಿರಾಟ್ ಕೊಹ್ಲಿ ವಿದೇಶಿ ನೆಲದಲ್ಲಿ ಗರಿಷ್ಠ ರನ್ ದಾಖಲಿಸಿದ್ದ ಭಾರತೀಯ ಆಟಗಾರ ಎಂಬ ದಾಖಲೆಯನ್ನು ತನ್ನ ಹೆಸರಿಗೆ ಬರೆದುಕೊಂಡಿದ್ದಾರೆ. ಈ ಹಿಂದೆ ಈ ದಾಖಲೆ ಸಚಿನ್ ತೆಂಡುಲ್ಕರ್ ಅವರ ಹೆಸರಿನಲ್ಲಿತ್ತು. ವಿರಾಟ್ ಕೊಹ್ಲಿ 5068 ರನ್ ದಾಖಲಿಸಿದ್ರೆ, ಸಚಿನ್ ತೆಂಡುಲ್ಕರ್ 5065 ರನ್ ಗಳಿಸಿದ್ದರು.
10. ಅವನಿಗೆ XUV-700 ಕಾರ್ ಉಡುಗೊರೆ
ಟೋಕಿಯೊ ಪ್ಯಾರಾಲಿಂಪಿಕ್ಸ್ನಲ್ಲಿ ಚಿನ್ನದ ಪದಕ ಗೆದ್ದು ದೇಶಕ್ಕೆ ಕೀರ್ತಿ ತಂದ ಅವನಿ ಲೆಖರಾ ಅವರಿಗೆ ವಿಶೇಷ ಕಾರನ್ನು ಉಡುಗೊರೆಯಾಗಿ ನೀಡುವುದಾಗಿ ಆನಂದ್ ಮಹೀಂದ್ರಾ ಭರವಸೆ ನೀಡಿದ್ದರು. ಅದೇ ರೀತಿ ಬುಧವಾರ ಆನಂದ್ ಮಹೀಂದ್ರಾ, ತಮ್ಮ ಭರವಸೆಯನ್ನು ಈಡೇರಿಸಿದ್ದಾರೆ. ಅವನಿ ಲೇಖರಾ ಅವರಿಗಾಗಿ ವಿಶೇಷ ಕಸ್ಟಮೈಸ್ ಮಾಡಿದ XUV-700 ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ. ಇದರಲ್ಲಿ ವಿಶೇಷ ಹೈಡ್ರಾಲಿಕ್ ಸೀಟ್ ಅಳವಡಿಸಲಾಗಿದ್ದು, ಅವನಿ ಸುಲಭವಾಗಿ ಕಾರಿನಲ್ಲಿ ಹತ್ತಬಹುದು ಮತ್ತು ಇಳಿಯಬಹುದು