ಅಂಚೆ ಇಲಾಖೆಯ ನೂತನ ಡಾಕ್‌ಪೇ ಪೇಮೆಂಟ್ ಅಪ್ಲಿಕೇಶನ್ ಬಿಡುಗಡೆ – ಡೌನ್‌ಲೋಡ್ ಮಾಡುವುದು ಹೇಗೆ – ಇಲ್ಲಿದೆ ಮಾಹಿತಿ DakPay digital payments
ಹೊಸದಿಲ್ಲಿ, ಡಿಸೆಂಬರ್18: ಭಾರತೀಯ ಅಂಚೆ ಇಲಾಖೆಯು (ಇಂಡಿಯಾ ಪೋಸ್ಟ್) ತನ್ನ ಬ್ಯಾಂಕಿಂಗ್ ಆರ್ಮ್ ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ (ಐಪಿಪಿಬಿ) ಸಹಯೋಗದೊಂದಿಗೆ ಭಾರತದಲ್ಲಿ ಡಾಕ್ ಪೇ ಪಾವತಿ ಅಪ್ಲಿಕೇಶನ್ ಅನ್ನು ಪ್ರಾರಂಭಿಸುವುದಾಗಿ ಪ್ರಕಟಿಸಿದೆ. DakPay digital payments
ಹೊಸ ಪ್ಲಾಟ್‌ಫಾರ್ಮ್, ಬಳಕೆದಾರರಿಗೆ ಡೋರ್-ಸ್ಟೆಪ್ ಬ್ಯಾಂಕಿಂಗ್ ಸೇರಿದಂತೆ ವ್ಯಾಪಕ ಶ್ರೇಣಿಯ ಸೇವೆಗಳನ್ನು ನೀಡಲು ಉದ್ದೇಶಿಸಿದೆ. ಡಾಕ್ ಪೇ ದೇಶಾದ್ಯಂತ ಅಂಚೆ ಜಾಲದ ಮೂಲಕ ಇಂಡಿಯಾ ಪೋಸ್ಟ್ ಮತ್ತು ಐಪಿಪಿಬಿ ಒದಗಿಸುವ ಡಿಜಿಟಲ್ ಹಣಕಾಸು ಮತ್ತು ನೆರವಿನ ಬ್ಯಾಂಕಿಂಗ್ ಸೇವೆಗಳನ್ನು ಒದಗಿಸುತ್ತದೆ.
ಡಾಕ್ ಪೇ ಅಪ್ಲಿಕೇಶನ್ ಬಳಸಿ, ಬಳಕೆದಾರರು ಹಣವನ್ನು ಕಳುಹಿಸುವುದು, ಕ್ಯೂಆರ್ ಕೋಡ್‌ಗಳನ್ನು ಸ್ಕ್ಯಾನ್ ಮಾಡುವುದು ಮತ್ತು ಡಿಜಿಟಲ್ ರೂಪದಲ್ಲಿ ಪಾವತಿಗಳನ್ನು ಮಾಡುವಂತಹ ಸೇವೆಗಳನ್ನು ಸುಗಮಗೊಳಿಸಲು ಸಾಧ್ಯವಾಗುತ್ತದೆ. ಇದಲ್ಲದೆ, ಈ ಅಪ್ಲಿಕೇಶನ್ ದೇಶದ ಯಾವುದೇ ಬ್ಯಾಂಕಿನೊಂದಿಗೆ ಗ್ರಾಹಕರಿಗೆ ಇಂಟರ್ಪೋರೆಬಲ್ ಬ್ಯಾಂಕಿಂಗ್ ಸೇವೆಗಳನ್ನು ಸಹ ಒದಗಿಸುತ್ತದೆ.
ಹೊಸ ಆ್ಯಪ್ ಬಿಡುಗಡೆ ಕುರಿತು ಸಚಿವ ರವಿಶಂಕರ್ ಪ್ರಸಾದ್ ಅವರು, ಡಾಕ್ ಪೇ ಲಾಂಚ್ ಇಂಡಿಯಾ ಪೋಸ್ಟ್ ನ ಪರಂಪರೆಯನ್ನು ಹೆಚ್ಚಿಸುತ್ತದೆ. ಇದು ಪ್ರತಿ ಮನೆ ಮನೆಗೂ ತಲುಪಲಿದೆ ಎಂದು ಹೇಳಿದ್ದಾರೆ
ಡಾಕ್‌ಪೇ ಅಪ್ಲಿಕೇಶನ್ ಡೌನ್‌ಲೋಡ್ ಮಾಡುವುದು ಹೇಗೆ?
ನಿಮ್ಮ Android ಸ್ಮಾರ್ಟ್‌ಫೋನ್‌ನಲ್ಲಿ Google Play Store ತೆರೆಯಿರಿ.
ಸರ್ಚ್ ಬಾಕ್ಸ್ ಅನ್ನು ಬಳಸಿಕೊಂಡು ‘ಡಾಕ್‌ಪೇ’ ಎಂಬ ಪದವನ್ನು ಹುಡುಕಿ.
‘ಡಾಕ್‌ಪೇ ಬೈ ಐಪಿಪಿಬಿ’ ಹೆಸರಿನ ಅಪ್ಲಿಕೇಶನ್‌ಗೆ ಟ್ಯಾಪ್ ಮಾಡಿ ಮತ್ತು ಇನ್‌ಸ್ಟಾಲ್ ಬಟನ್ ಕ್ಲಿಕ್ ಮಾಡಿ.
ಇನ್‌ಸ್ಟಾಲ್ ನಂತರ, ಅಪ್ಲಿಕೇಶನ್ ತೆರೆಯಿರಿ.
ಮುಂದಿನ ಐಕಾನ್ ಮೇಲೆ ಟ್ಯಾಪ್ ಮಾಡಿ.
ನೀವು ಡಾಕ್‌ಪೇ ಜೊತೆ ಲಿಂಕ್ ಮಾಡಲು ಬಯಸುವ ಮೊಬೈಲ್ ಸಂಖ್ಯೆಯನ್ನು ಆಯ್ಕೆ ಮಾಡಿ.
ಹೆಸರು, ಇಮೇಲ್ ಐಡಿ, ಹುಟ್ಟಿದ ದಿನಾಂಕ ಮತ್ತು ಹೆಚ್ಚಿನ ಮೂಲ ವಿವರಗಳನ್ನು ನಮೂದಿಸುವ ಮೂಲಕ ಪ್ರೊಫೈಲ್ ರಚಿಸಿ.
ಡಾಕ್‌ಪೇ ಅಪ್ಲಿಕೇಶನ್‌ನ ವೈಶಿಷ್ಟ್ಯಗಳಿಗೆ ಪ್ರವೇಶ ಪಡೆಯಲು ತೆರೆಯ ಮೇಲಿನ ಸೂಚನೆಗಳನ್ನು ಅನುಸರಿಸಿ.
ಪ್ರಸ್ತುತ, ಗೂಗಲ್ ಪ್ಲೇ ಸ್ಟೋರ್ ಮೂಲಕ ಆಂಡ್ರಾಯ್ಡ್ ಬಳಕೆದಾರರಿಗೆ ಮಾತ್ರ ಅಪ್ಲಿಕೇಶನ್ ಲಭ್ಯವಿದೆ. ಶೀಘ್ರದಲ್ಲೇ ಆಪಲ್ ಆಪ್ ಸ್ಟೋರ್ ಮೂಲಕ ಐಒಎಸ್ ಬಳಕೆದಾರರಿಗೆ ಕೂಡ ಡಾಕ್‌ಪೇ ಸಿಗಲಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel
ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ
ಟೊಮೆಟೊ ಕೆಚಪ್ ನ ಅದ್ಭುತ ಪ್ರಯೋಜನಗಳುhttps://t.co/AhldkJyvE9
— Saaksha TV (@SaakshaTv) December 17, 2020
ಅಡಿಕೆ ಬೆಳೆಗಾರರಿಗೆ ಸಿಹಿ ಸುದ್ದಿ ..ಅಡಿಕೆಯಿಂದ ಚಾಕಲೇಟ್ ಉತ್ಪಾದಿಸಲು ಕ್ಯಾಂಪ್ಕೋ ಚಿಂತನೆ !https://t.co/XGZmzEctYG
— Saaksha TV (@SaakshaTv) December 17, 2020