ಮಂಗಳೂರು : ಒಂದೇ ದಿನ ಎರಡು ಕೊರೊನಾ ಸೋಂಕು ಪ್ರಕರಣಗಳು ದೃಢಪಟ್ಟ ಹಿನ್ನೆಲೆ ಜಿಲ್ಲಾಡಳಿತದ ಸೂಚನೆಯ ಮೇರೆಗೆ ದಕ್ಷಿಣ ಕನ್ನಡ ಜಿಲ್ಲೆ ಇಂದು ಸಂಪೂರ್ಣ ಬಂದ್ ಆಗಿದೆ.
ಲಾಕ್ ಡೌನ್ ಸೂಚನೆಯ ಬಳಿಕವೂ ಕಳೆದ ಮೂರು ದಿನದಲ್ಲಿ ಕೆಲ ಖಾಸಗಿ ವಾಹನಗಳ ಓಡಾಟಕ್ಕೆ ಪೊಲೀಸರು ಅವಕಾಶ ಮಾಡಿಕೊಟ್ಟಿದ್ದರು. ನಿನ್ನೆ ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳು ದೃಢಪಟ್ಟ ಹಿನ್ನೆಲೆ ಇಂದು ತುರ್ತು ಸೇವೆಯ ವಾಹನಗಳ ಮತ್ತು ಸಿಬ್ಬಂದಿ ವರ್ಗದ ಓಡಾಟ ಹೊರತುಪಡಿಸಿ ಬೇರೆ ಎಲ್ಲಾ ವಾಹನ ಮತ್ತು ಜನ ಸಂಚಾರಕ್ಕೆ ನಿರ್ಬಂಧ ಹೇರಿದ್ದಾರೆ. ನಗರ ಮತ್ತು ಹೊರ ವಲಯದ ಕೆಲವೇ ಮೆಡಿಕಲ್‌ಗಳು ತೆರೆದಿದ್ದು, ದಿನಸಿ ಸಹಿತ ಯಾವುದೇ ತರಕಾರಿ, ಹಣ್ಣುಹಂಪಲುಗಳ ಅಂಗಡಿ ಓಪನ್ ಆಗಿಲ್ಲ.








