ದಕ್ಷಿಣ ಕನ್ನಡ – ಕೊರೊನಾಕ್ಕೆ ಮೂವರು ಬಲಿ
ಮಂಗಳವಾರ, ಜುಲೈ 8: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬುಧವಾರ ಕೊರೊನಾದಿಂದ ಮೂವರು ಮೃತಪಟ್ಟಿದ್ದು ಮೃತರ ಸಂಖ್ಯೆ 29ಕ್ಕೆ ಏರಿಕೆಯಾಗಿದೆ. ಪುತ್ತೂರು ಮೂಲದ 32 ವರ್ಷದ ಮಹಿಳೆ, ಉಳ್ಳಾಲ ನಿವಾಸಿಯಾಗಿದ್ದ 62 ವರ್ಷದ ವೃದ್ದೆ, ಭಟ್ಕಳ ಮೂಲದ 60 ವರ್ಷದ ವ್ಯಕ್ತಿ ಇಂದು ಕೊರೊನಾಗೆ ಬಲಿಯಾದವರು.

ವಿವಿಧ ಖಾಯಿಲೆಗಳಿಂದ ಮೂವರು ಬಳಲುತ್ತಿದ್ದು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇಬ್ಬರು ಮಹಿಳೆಯರು ನಗರದ ಕೋವಿಡ್ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, 60 ವರ್ಷದ ವೃದ್ಧ ಖಾಸಗಿ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೊನಾ ಹಾವಳಿ ವ್ಯಾಪಕವಾಗಿ ಏರಿಕೆ ಕಾಣುತ್ತಿದ್ದು, ಮಂಗಳವಾರದ ವರೆಗೆ ಒಟ್ಟು 1359 ಪ್ರಕರಣ ದೃಢಪಟ್ಟಿದೆ. ಅದರಲ್ಲಿ 683 ಮಂದಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದರೆ, 650 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.








