ಎಲ್ಲಾ ಮಾದರಿಯ ಕ್ರಿಕೆಟ್ ಗೆ ಡೇಲ್ ಸ್ಟೈನ್ ವಿದಾಯ
ನವದೆಹಲಿ : ಎಲ್ಲಾ ಮಾದರಿಯ ಕ್ರಿಕೆಟ್ ಗೆ ದಕ್ಷಿಣ ಆಫ್ರಿಕಾದ ವೇಗಿ ಡೇಲ್ ಸ್ಟೈನ್ ನಿವೃತ್ತಿ ಘೋಷಿಸಿದ್ದಾರೆ.
ಸೌತ್ ಆಫ್ರೀಕಾ ಪರ ಡೇಲ್ ಸ್ಟೈನ್ ಅವರು 125 ಏಕದಿನ ಪಂದ್ಯವನ್ನಾಡಿದ್ದು, 196 ವಿಕೆಟ್ ಪಡೆದಿದ್ದಾರೆ. ಟೆಸ್ಟ್ ಕ್ರಿಕೆಟ್ ನಲ್ಲಿ 93 ಪಂದ್ಯಗಳಲ್ಲಿ 439 ವಿಕೆಟ್ ಕಬಳಿಸಿದ್ದಾರೆ. 47 ಟಿ20 ಪಂದ್ಯಗಳಿಂದ 64 ವಿಕೆಟ್ ಪಡೆದಿದ್ದಾರೆ.
ಇದಲ್ಲದೆ ಐಪಿಎಲ್ ನಲ್ಲೂ ಮಿಂಚಿದ್ದ ಸ್ಟೈನ್ ಮೊದಲು ಆರ್ ಸಿಬಿ ನಲ್ಲಿ ಕಾಣಿಸಿಕೊಂಡಿದ್ದರು. ಬಳಿಕ ಹೈದ್ರಾಬಾದ್ ತಂಡದ ಪರ ಆಡಿದ್ದರು.
ಈ ದಿನ ನಾನು ಪ್ರೀತಿಸಿದ ಆಟಕ್ಕೆ ಅಧಿಕೃತವಾಗಿ ವಿದಾಯ ಘೋಷಿಸುತ್ತಿದ್ದೇನೆ. ಇದು ಕಹಿ ಸತ್ಯವಾಗಿದೆ, ಆದರೆ ಒಪ್ಪಿಕೊಳ್ಳಲೇಬೇಕು.
ಈ ನನ್ನ ಕ್ರಿಕೆಟ್ ಪಯಣದಲ್ಲಿ ನನಗೆ ಬೆಂಬಲಿಸಿದ ಕುಟುಂಬ, ತಂಡದ ಸಹ ಆಟಗಾರರು, ಪತ್ರಕರ್ತರು ಮತ್ತು ಅಭಿಮಾನಿಗಳಿಗೆ ಧನ್ಯವಾದ ಎಂದು ಭಾವನಾತ್ಮಕ ಬರಹದೊಂದಿಗೆ ಸ್ಟೇನ್ ನಿವೃತ್ತಿ ಘೋಷಿಸಿದ್ದಾರೆ.
ಅಂದಹಾಗೆ ಡೇಲ್ ಸ್ಟೈನ್ ವಿಶ್ವ ಕ್ರಿಕೆಟ್ ಕಂಡ ಅತ್ಯುತ್ತಮ ವೇಗದ ಬೌಲರ್ ಗಳಲ್ಲಿ ಒಬ್ಬರು. ಅವರು ಸಾಕಷ್ಟು ಪಂದ್ಯಗಳನ್ನು ತಮ್ಮ ಬೆಂಕಿ ಬೌಲಿಂಗ್ ಮೂಲಕ ಗೆಲ್ಲಿಸಿಕೊಟ್ಟಿದ್ದಾರೆ. ಅಲ್ಲದೆ ಸ್ಟೈನ್ ಗೆ ವಿಶ್ವದಾದ್ಯಂತ ಸಾಕಷ್ಟು ಅಭಿಮಾನಿಗಳಿದ್ದಾರೆ.









