ಐಪಿಎಲ್ ಬಗ್ಗೆ ಮಾತಾಡಿ ಟ್ರೋಲ್ ಆದ `ಸ್ಟೇನ್ ಕ್ಷಮೆಯಾಚನೆ’
ನವದೆಹಲಿ : ಐಪಿಎಲ್ ನಲ್ಲಿ ದುಡ್ಡಿಗೆ ಕ್ರಿಕೆಟ್ ಗೆ ಮಹತ್ವವಿಲ್ಲ ಎಂದು ಹೇಳಿಕೆ ನೀಡಿ ಭಾರತೀಯ ಕ್ರಿಕೆಟ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದ ದಕ್ಷಿಣ ಆಫ್ರಿಕಾದ ವೇಗಿ ಡೇಲ್ ಸ್ಟೇನ್ ಇದೀಗ ಕ್ಷಮೆ ಕೋರಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಐಪಿಎಲ್ ನನ್ನ ವೃತ್ತಿಜೀವನದಲ್ಲಿ ಅದ್ಭುತವಾದದ್ದೇನೂ ಅಲ್ಲ, ಇತರೆ ಆಟಗಾರರಿಗೂ ಕೂಡ. ಆದರೆ ನನ್ನ ಮಾತುಗಳು ಯಾವುದೇ ಲೀಗ್ಗಳನ್ನು ಅವಮಾನಿಸುವ, ಕೀಳಾಗಿ ಬಿಂಬಿಸುವ ಉದ್ದೇಶವನ್ನು ಹೊಂದಿರಲಿಲ್ಲ. ಸಾಮಾಜಿಕ ಜಾಲತಾಣದಲ್ಲಿ ನನ್ನ ಮಾತುಗಳನ್ನು ಸಂದರ್ಭದ ಹೊರಗೆ ಬಿಂಬಿಸಲಾಗಿದೆ. ಇದರಿಂದ ಯಾರಿಗಾದರೂ ಬೇಸರವಾಗಿದ್ದರೆ ಕ್ಷಮೆಯಾಚಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.
ಐಪಿಎಲ್ ನಲ್ಲಿ 95 ಪಂದ್ಯಗಳನ್ನಾಡಿರುವ ಡೇಲ್ ಸ್ಟೇನ್ 97 ವಿಕೆಟ್ ಪಡೆದಿದ್ದು, ಐಪಿಎಲ್ ನಲ್ಲಿ ಉತ್ತಮ ಗುಣಮಟ್ಟದ ಕ್ರಿಕೆಟ್ ಮರೆಯಾಗುತ್ತಿದೆ. ಅಲ್ಲಿ ಕ್ರಿಕೆಟ್ ಗಿಂತ ದುಡ್ಡಿನ ಬಗ್ಗೆ ಹೆಚ್ಚು ಚರ್ಚೆ ನಡೆಯುತ್ತದೆ ಎಂದು ಹೇಳಿದ್ದರು. ಅಲ್ಲದೆ ಪಾಕಿಸ್ತಾನ ಮತ್ತು ಲಂಕಾ ಪ್ರೀಮಿಯರ್ ಲೀಗ್ ಗಳಲ್ಲಿ ಕ್ರಿಕೆಟ್ ಗೆ ಮಹತ್ವವಿದೆ ಅಂತಾ ಹೇಳಿ ವಿವಾದವನ್ನ ಮೈಮೇಲೆ ಎಳೆದುಕೊಂಡಿದ್ದರು.
ಸ್ಟೇನ್ ಅವರ ಈ ಹೇಳಿಕೆಗೆ ಭಾರತೀಯ ಕ್ರಿಕೆಟ್ ಅಭಿಮಾನಿಗಳು ಫುಲ್ ಗರಂ ಆಗಿದ್ದರು.