Damayanthi
ಸದ್ಯ ಥಿಯೇಟರ್ ಗಳ ಪುನರಾರಾಂಭಕ್ಕೆ ಸರ್ಕಾರದಿಂದ ಗ್ರೀನ್ ಸಿಗ್ನಲ್ ಸಿಕ್ಕ ಬೆನ್ನಲ್ಲೇ ಸ್ಯಾಂಡಲ್ ವುಡ್ ನಲ್ಲಿ ಸಿನಿಮಾಗಳ ರಿ-ರಿಲೀಸ್ ಪರ್ವ ಆರಂಭವಾಗಿದೆ.
ಆದ್ರೆ, ಹೊಸ ಸಿನಿಮಾಗಳನ್ನ ಬಿಡುಗಡೆಗೊಳಿಸಲು ನಿರ್ಮಾಪಕರು ಕೊಂಚ ಹಿಂದೇಟು ಹಾಕ್ತಿದ್ದಾರೆ. ಇದರ ಬದಲು ಈಗಾಗಲೇ ತೆರೆಕಂಡಿರುವ ಚಿತ್ರಗಳಿಗೆ ಮತ್ತೊಂದು ಅವಕಾಶ ಸಿಗುತ್ತಿದೆ. ಒಂದೊಂದೆ ಸಿನಿಮಾಗಳು ರಿಲೀಸ್ ಆಗ್ತಾಯಿವೆ.
ಇದೀಗ, ರಾಧಿಕಾ ಕುಮಾರಸ್ವಾಮಿ ನಟನೆಯ ದಮಯಂತಿ (Damayanthi) ಸಿನಿಮಾ ದಸರಾ ಹಬ್ಬದ ಪ್ರಯುಕ್ತ ಮತ್ತೆ ಚಿತ್ರಮಂದಿರಕ್ಕೆ ಬರ್ತಿದೆ. ಅಕ್ಟೋಬರ್ 23ರಂದು ದಮಯಂತಿ ಮರುಬಿಡುಗಡೆಯಾಗುತ್ತಿದೆ.
ನವರಸನ್ ನಿರ್ದೇಶಿಸಿದ್ದ ಈ ಚಿತ್ರ 2019ರ ನವೆಂಬರ್ ತಿಂಗಳಲ್ಲಿ ತೆರೆಕಂಡಿತ್ತು. ರಾಧಿಕಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದ ಈ ಚಿತ್ರದಲ್ಲಿ ಸೌರವ್ ಲೋಕೇಶ್, ಶರಣ್ ಉಲ್ಟಿ, ಸಾಧು ಕೋಕಿಲಾ, ತಬಲಾ ನಾಣಿ, ನವೀನ್ ಕೃಷ್ಣ ಸೇರಿದಂತೆ ಹಲವರು ಕಾಣಿಸಿಕೊಂಡಿದ್ದರು.
ಕನ್ನಡದ ಜೊತೆ ತಮಿಳು, ತೆಲುಗು ಹಾಗೂ ಮಲಯಾಳಂ ಭಾಷೆಗಳಲ್ಲಿ ದಮಯಂತಿ ಸಿನಿಮಾ ಬಿಡುಗಡೆಯಾಗಿತ್ತು. ಈ ಚಿತ್ರಕ್ಕೆ ಖುದ್ದು ರಾಧಿಕಾ ಕುಮಾರಸ್ವಾಮಿ ಅವರೇ ಬಂಡವಾಳ ಹೂಡಿದ್ದರು.
ಮತ್ತೆ ಥಿಯೇಟರ್ ಗೆ ಬರುತ್ತಿದೆ ”ಪಿಎಂ ನರೇಂದ್ರಮೋದಿ”..!
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








