ಅಥಣಿ : ಮಹಾರಾಷ್ಟ್ರದ ಕೊಲ್ಹಾಪುರ ಮತ್ತು ಸಾಂಗ್ಲಿ ಜಿಲ್ಲೆಗಳಲ್ಲಿನ ಅಣೆಕಟ್ಟುಗಳಿಂದ ಹೆಚ್ಚು ನೀರು ಬಿಡುಗಡೆಯ ಕಾರಣ ಜಿಲ್ಲೆಯಲ್ಲಿ ಕೃಷ್ಣ ನದಿ ಮತ್ತು ಅದರ ಉಪನದಿಗಳು ಜಿಲ್ಲೆಯಲ್ಲಿ ಅಪಾಯದ ಮಟ್ಟದಲ್ಲಿ ಹರಿಯುತ್ತಿವೆ.
ಹೀಗಾಗಿ ಜಿಲ್ಲೆಯ ಅನೇಕ ಸೇತುವೆಗಳು ರಸ್ತೆಗಳು ನೀರಿನಲ್ಲಿ ಮುಳುಗಿದೆ. ನೂರಾರು ಎಕರೆ ಪ್ರದೇಶದಲ್ಲಿನ ಕಬ್ಬು ಭತ್ತದ ಬೆಳೆ ನೀರಿನಲ್ಲಿ ಮುಳುಗಿದೆ. ಹೀಗಾಗಿ ಅಥಣಿ ತಾಲೂಕಿನ ಗ್ರಾಮಗಳಲ್ಲಿ ಡಂಗೂರ ಸಾರುವ ಮೂಲಕ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಮನವಿ ಮಾಡಲಾಗುತ್ತಿದೆ.
“ಹ್ವಾದ ವರ್ಸದಾಂಗ ಮತ್ ಹೊಳಿ ಬರ್ತೈತಿ,ದನಾಕರಾ ಕಟ್ಕೊಂಡ್ ಊರ ಬಿಡಬೇಕ್ರಿಪಾ” ಎಂದು ಝುಂಜರವಾಡ ಮತ್ತು ನದಿ ಇಂಗಳಗಾಂವ್ ಗ್ರಾಮಗಳಲ್ಲಿ ಡಂಗೂರ ಬಾರಿಸಿ ಜನರನ್ನು ಎಚ್ಚರಿಸಲಾಗುತ್ತಿದೆ.








