ಉಕ್ರೇನ್ ಮೇಲೆ ಫಾದರ್ ಆಫ್ ಆಲ್ ಬಾಂಬ್ಸ್ “ಥರ್ಮೋಬಾರಿಕ್” ಬಳಸಿದ ರಷ್ಯಾ
ರಷ್ಯಾ ಈಗ ಉಕ್ರೇನ್‌ನಲ್ಲಿ ವಿಧ್ವಂಸಕತೆಯನ್ನು ಸೃಷ್ಟಿಸಲು ಅಪಾಯಕಾರಿ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಉಕ್ರೇನ್ ನಲ್ಲಿರುವ ಯುಎಸ್ ರಾಯಭಾರ ಕಚೇರಿಯ ಮೇಲೆ ರಷ್ಯಾ ನಿರ್ವಾತ (ವಾಕ್ಯೂಂ) ಬಾಂಬ್‌ಗಳನ್ನು ಬೀಳಿಸುವ ಮೂಲಕ ವಿನಾಶವನ್ನು ಉಂಟುಮಾಡುತ್ತಿದೆ ಎಂದು ಉಕ್ರೇನ್ ಆರೋಪಿಸಿದೆ.
ಈ ಬಾಂಬ್ ಉಕ್ರೇನ್‌ನ ಅನೇಕ ನಗರಗಳಲ್ಲಿ ಅಪಾಯಕಾರಿ ಶಾಖವನ್ನು ಹರಡುತ್ತಿದೆ. ಜನ ಉಸಿರಾಟದಿಂದ ತೊಂದರೆ ಅನುಭವಿಸುತ್ತಿದ್ದಾರೆ. ಇದನ್ನು ಫಾದರ್ ಆಫ್ ಆಲ್ ಬಾಂಬ್ಸ್ ಎಂದೂ ಕರೆಯುತ್ತಾರೆ, 7100 ಕೆಜಿ ತೂಗುವ ಇದು ಸುಮಾರು 44 ಟನ್ ಟಿಎನ್‌ಟಿಯ ಶಕ್ತಿಯನ್ನು ಒಂದೇ ಬಾರಿಗೆ ಸ್ಫೋಟಿಸುತ್ತದೆ. ಸುಮಾರು 300 ಮೀಟರ್ ಪ್ರದೇಶದ ವರೆಗೆ ಬಾಂಬ್ ನ ಪ್ರಭಾವವಿರುತ್ತದೆ.
ಇದು ಹೇಗೆ ಕೆಲಸ ಮಾಡುತ್ತದೆ?
ಎಲ್ಲಾ ಬಾಂಬ್ ಗಳ ತಂದೆ ಎನ್ನುವ ಇದರ ಹೆಸರು ಥರ್ಮೋಬಾರಿಕ್. ಇದನ್ನು ನಿರ್ವಾತ ಬಾಂಬ್ ಎಂದೂ ಕರೆಯುತ್ತಾರೆ. ಇದರ ದೊಡ್ಡ ವೈಶಿಷ್ಟ್ಯವೆಂದರೆ ಅದು ವಾತಾವರಣದಿಂದ ಆಮ್ಲಜನಕವನ್ನು ಹೀರಿಕೊಳ್ಳುತ್ತದೆ ಮತ್ತು ತನ್ನನ್ನು ತಾನು ಹೆಚ್ಚು ಶಕ್ತಿಯುತವಾಗಿಸುತ್ತದೆ.. ಈ ಸ್ಫೋಟವು ಸಾಮಾನ್ಯ (ಕಡಿಮೆ ಶಕ್ತಿ) ಪರಮಾಣು ಬಾಂಬ್‌ನಂತೆಯೇ ಶಾಖವನ್ನು ಉತ್ಪಾದಿಸುತ್ತದೆ. ಇದರ ಜೊತೆಗೆ, ಸ್ಫೋಟವು ಅಲ್ಟ್ರಾಸಾನಿಕ್ ಆಘಾತ ತರಂಗವನ್ನು ಹೊರಸೂಸುತ್ತದೆ. ಇದು ಹೆಚ್ಚು ವಿನಾಶವನ್ನು ತರುತ್ತದೆ. ಈ ಕಾರಣಕ್ಕಾಗಿಯೇ ಈ ಆಯುಧವನ್ನು ಇತರ ಸಾಂಪ್ರದಾಯಿಕ ಆಯುಧಗಳಿಗಿಂತ ಹೆಚ್ಚು ಶಕ್ತಿಶಾಲಿ ಎಂದು ಪರಿಗಣಿಸಲಾಗಿದೆ.
ಅದನ್ನು ಯಾವಾಗ ಬಳಸಲಾಯಿತು?
2017 ರಲ್ಲಿ, ಆಗಿನ ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆದೇಶದ ಮೇರೆಗೆ, ಯುಎಸ್ ಸೈನ್ಯವು ಅಫ್ಘಾನಿಸ್ತಾನದಲ್ಲಿ ಮದರ್ ಆಫ್ ಆಲ್ ಬಾಂಬ್‌ಗಳನ್ನು ಬಳಸಿತು. 2017 ರಲ್ಲಿಯೇ ರಷ್ಯಾ ಸಿರಿಯಾದಲ್ಲಿ ಫಾದರ್ ಆಫ್ ಆಲ್ ಬಾಂಬ್ಸ್ ಥರ್ಮೋಬಾರಿಕ್ ಆಯುಧವನ್ನು ಬಳಸಿದೆ ಎಂದು ಹಲವು ಮಾಧ್ಯಮ ವರದಿಗಳು ಸೂಚಿಸುತ್ತವೆ.