dari yavudayya vaikuntakke
ವಿಭಿನ್ನ ಟೈಟಲ್ ಹಾಗೂ ಪೋಸ್ಟರ್ ನಿಂದಲೇ ಗಮನ ಸೆಳೆಯುತ್ತಿರುವ “ದಾರಿ ಯಾವುದಯ್ಯ ವೈಕುಂಠಕ್ಕೆ” ಚಿತ್ರ ಸದ್ಯದಲ್ಲೇ ಬೆಳ್ಳಿ ತೆರಗಪ್ಪಳಿಸಲು ಸಜ್ಜಾಗಿದೆ.
ಸ್ಯಾಂಡಲ್ ವುಡ್ ನ ಹಲವಾರು ಸಿನಿಮಾಗಳಲ್ಲಿ ಖ್ಯಾತಿ ಪಡೆದಿರುವ ವರ್ಧನ್ ಈ ಚಿತ್ರದಲ್ಲಿ ನಾಯಕನಾಗಿ ಮಿಂಚುತ್ತಿದ್ದಾರೆ
ಇನ್ನೂ ಹಫ್ತಾ ಸಿನಿಮಾದಲ್ಲಿ ನಾಯಕನಾಗಿ ಕಾಣಿಸಿಕೊಂಡಿರುವ ವರ್ಧನ್ ಅವರು ಈ ಚಿತ್ರದಲ್ಲಿ ವಿಭಿನ್ನ ಲುಕ್ ನಲ್ಲಿ ಕಾಣಿಸಿಕೊಂಡಿದ್ದು, ಅಭಿಮಾನಿಗಳನ್ನ ರಂಜಿಸಲಿದ್ದಾರೆ.
ಈಗಾಗಲೇ ಚಿತ್ರದ ಶೂಟಿಂಗ್ ಕಂಪ್ಲೀಟ್ ಆಗಿದ್ದು, ಸಿನಿಮಾ ಬಿಡುಗಡೆಗೆ ಶೀಘ್ರದಲ್ಲೇ ಡೇಟ್ ಅನೌನ್ಸ್ ಆಗಲಿದೆ.
ಟೈಟಲ್ ನಷ್ಟೇ ವಿಭಿನ್ನವಾಗಿದೆ ಕಥಾ ಹಂದರ. ಈ ಚಿತ್ರದಲ್ಲಿ ನಾಯಕಿಯರಾಗಿ ತಿಥಿ ಸಿನಿಮಾ ಖ್ಯಾತಿಯ ಪೂಜಾ ಹಾಗೂ ಅನುಷಾ ಅವರು ವರ್ಧನ್ ಜೊತೆಗೆ ಸ್ಕ್ರೀನ್ ಶೇರ್ ಮಾಡಿಕೊಳ್ತಾಯಿದ್ದಾರೆ.
ಚಿತ್ರಕ್ಕೆ ಶರಣಪ್ಪ ಎಂ. ಕೊಟಗಿ ಬಂಡವಾಳ ಹೂಡಿದ್ರೆ, ಸಿದ್ದು ಪೂರ್ಣ ಚಂದ್ರ ಅವರು ಆಕ್ಷನ್ ಹೇಳಿದ್ದಾರೆ. ಜೊತೆಗೆ ಕಥೆ – ಚಿತ್ರಕಥೆ ಸಹ ರಚಿಸಿದ್ದಾರೆ.

ಇನ್ನೂ ಉಳಿದಂತೆ ಸ್ಪಂದನ, ಅರುಣ ಮೂರ್ತಿ, ಪ್ರಣಯ್ ಮೂರ್ತಿ, ಬಲರಾಜವಾಡಿ, ಸಿದ್ದಾರ್ಥ್ , ಶಿವು, ಶಿಂಬ, ಹೆಚ್.ಎಂ.ಟಿ ವಿಜಿ ಸೇರಿದಂತೆ ಅನೇಕರ ತಾರಾಬಳಗ ಚಿತ್ರದಲ್ಲಿದೆ. 
dari yavudayya vaikuntakke








