‘ದರ್ಶನ್ ಬಹಳ ಮುಗ್ಧ, ಯಾವುದೇ ಕೆಟ್ಟ ಕೆಲಸ ಮಾಡಲ್ಲ’ : ಬಿ.ಸಿ ಪಾಟೀಲ್
ಬೆಂಗಳೂರು: ಕಳೆದ ಒಂದು ವಾರದಿಂದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಒಮ್ಮೆ 25 ಕೋಟಿ ವಂಚನೆ ಪ್ರಕರಣದಲ್ಲಿ ಸುದ್ದಿಯಾದ್ರೆ , ಮತ್ತೊಮ್ಮೆ ಸಂದೇಶ್ ರೆಸ್ಟೋರೆಂಟ್ ನ ಸಪ್ಲೈಯರ್ ಗೆ ಹೊಡೆದ ಆರೋಪದ ಪ್ರಕರಣದಲ್ಲಿ ಸುದ್ದಿಯಲ್ಲಿದ್ದಾರೆ.. ಈ ವಿಚಾರವಾಗಿ ದರ್ಶನ್ ವಿರುದ್ಧ ಇಂದ್ರಜಿತ್ ಆರೋಪ ಮಾಡಿದ್ದಾರೆ.. ಆದ್ರೆ ದರ್ಶನ್ ಬಹಳ ಮುಗ್ದ, ಕೆಳಹಂತದಿಂದ ಈ ಮಟ್ಟಕ್ಕೆ ಬೆಳೆದು ಬಂದಿರುವ ನಟ. ಅವರ ಏಳಿಗೆ ಸಹಿಸಲಾಗದವರು ದುರುದ್ದೇಶದಿಂದ ಇಂತಹ ಕೇಸ್‌ಗಳನ್ನು ಹಾಕುತ್ತಿರಬಹುದು. ದರ್ಶನ್ ಬಹಳ ಮುಗ್ಧ. ಯಾವುದೇ ಕೆಟ್ಟ ಕೆಲಸ ಮಾಡಲ್ಲ ಎಂದು ಕೃಷಿ ಸಚಿವ ಬಿಸಿ ಪಾಟೀಲ್ ಡಿ ಬಾಸ್ ಪರ ಬ್ಯಾಟ್ ಬೀಸಿದ್ದಾರೆ.
ಇದೇ ವೇಳೆ ಆರೋಪಗಳು ಬಂದಿರುವ ಹಿನ್ನೆಲೆ ಕೃಷಿ ಇಲಾಖೆಯ ರಾಯಭಾರಿ ಸ್ಥಾನದಿಂದ ದದರ್ಶನ್ ರನ್ನ ತೆಗೆದುಹಾಕುವ ಯಾವುದೇ ತೀರ್ಮಾನ ಮಾಡಿಲ್ಲ.. ಅಂತಹ ಯಾವುದೇ ಕೆಲಸ ದರ್ಶನ್ ಅವರು ಮಾಡಿಲ್ಲ ಅಂತ ನನಗೆ ಮನವರಿಕೆ ಇದೆ ಎಂದಿದ್ದಾರೆ. ಇದೇ ವೇಳೆ ಸಾರ್ವಜನಿಕವಾಗಿ ತಲೆ ತೆಗಿತೀನಿ ಎಂಬ ‘ದಾಸ’ನ ಹೇಳಿಕೆಗೆ ಪ್ರತಿಕ್ರಿಯಿಸಿದ ಬಿಸಿ ಪಾಟೀಲ್, ನಾನು ಆ ದಿನ ಹೇಳಿಕೆ ನೋಡಿದೆ, ನೀವು ಏನೇನೋ ಕೇಳಬೇಡಿ ರೆಕ್ಕ ಪುಕ್ಕ ಎಲ್ಲ ಬರುತ್ತೆ. ಮತ್ತೆ ಪ್ರಚೋದನೆ ಮಾಡಿ ಪ್ರಶ್ನೆ ಕೇಳಿದ್ದಕ್ಕೆ ಆ ಮಾತು ಬಂತೇ ಹೊರತು ದರ್ಶನ್ ಹೃದಯದಿಂದ ಆ ಮಾತು ಹೇಳಿದ್ದಲ್ಲ, ದರ್ಶನ್ ಆ ರೀತಿ ಹುಡುಗ ಅಲ್ಲ ಎಂದಿದ್ದಾರೆ.