ಮತಕ್ಕಾಗಿ `ಗಜ’ ಸಂಚಾರ : ಸಾಮಾಜಿಕ ಅಂತರ ಇಲ್ಲವೇ ಇಲ್ಲ ( Darshan Campaign)
ಬೆಂಗಳೂರು : ಆರ್ ಆರ್ ನಗರ ಮಿನಿ ಕುರುಕ್ಷೇತ್ರದಲ್ಲಿ ಸುಯೋಧನನ ಮಾಸ್ ಎಂಟ್ರಿ ಆಗಿದೆ. ಯಶವಂತಪುರದಿಂದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತಬೇಟೆ ಶುರು ಮಾಡಿದ್ದಾರೆ.
ಇವರಿಗೆ ಕಂದಾಯ ಸಚಿವ ಆರ್.ಅಶೋಕ್, ಬಿಜೆಪಿ ಅಭ್ಯರ್ಥಿ ಮುನಿರತ್ನ ಸೇರಿದಂತೆ ಬಿಜೆಪಿ ನಾಯಕರು ಸಾಥ್ ನೀಡಿದ್ದಾರೆ.
ದರ್ಶನ್ ಪ್ರಚಾರಕ್ಕಾಗಿಯೇ ಬಿಜೆಪಿ ವಿಶೇಷ ವಾಹನವನ್ನು ಸಿದ್ಧ ಮಾಡಿತ್ತು. ಈ ವಾಹನ ಹೇರಿ ಸಾರಥಿ ಮುನಿರತ್ನ ಪರ ಪ್ರಚಾರ ಮಾಡುತ್ತಿದ್ದಾರೆ.
ಸದ್ಯ ಯಶವಂತಪುರ ದಚ್ಚುಮಯವಾಗಿದ್ದು, ದಾಸನ ಅಭಿಮಾನಿಗಳು, ಬಿಜೆಪಿ ಕಾರ್ಯಕರ್ತರು ಸಾವಿರಾರು ಸಂಖ್ಯೆಯಲ್ಲಿ ಜಮಾಯಿಸಿದ್ದಾರೆ.
ದರ್ಶನ್ ರೋಡ್ ಶೋ ಆರಂಭಿಸುತ್ತಿದ್ದಂತೆ ಅಲ್ಲಿದ್ದ ಕೇಸರಿ ಪಡೆ ಕಾರ್ಯಕರ್ತರು ಜೋರಾಗಿ ಬಿಜೆಪಿ ಪರ ಘೋಷಣೆಗಳನ್ನು ಕೂಗಿದರು. ಇತ್ತ ದಚ್ಚು ಅಭಿಮಾನಿಗಳು ಕೂಡ ನೆಚ್ಚಿನ ನಟನ ಪರ ಘೋಷಣೆಗಳನ್ನು ಕೂಗಿದರು.
ಮಾಸ್ಕ್ ತೆಗೆದ ದಾಸ
ಹೌದು..! ವಿಶೇಷ ವಾಹನ ಹೇರಿ ದರ್ಶನ್ ಮುನಿರತ್ನ ಪರ ಪ್ರಚಾರ ಮಾಡುತ್ತಿದ್ದು, ಈ ವೇಳೆ ಒಮ್ಮೆ ಮಾಸ್ಕ್ ತೆಗೆದರು.
ದರ್ಶನ್ ಯಶವಂತಪುರದಿಂದ ಮುನಿರತ್ನ ಪರ ಪ್ರಚಾರ ಆರಂಭಿಸುತ್ತಾರೆ ಎಂಬ ಮಾಹಿತಿ ತಿಳಿಯುತ್ತಿದ್ದಂತೆ ಸಾವಿರಾರು ಸಂಖ್ಯೆಯಲ್ಲಿ ದರ್ಶನ್ ಅಭಿಮಾನಿಗಳು ಅಲ್ಲಿಗೆ ಆಗಮಿಸಿದ್ದರು.
ಇದನ್ನೂ ಓದಿ : ಮಾನವೀಯತೆ ನೋಡಿ ಪ್ರಚಾರ : ನಟ ದರ್ಶನ್
10 ಗಂಟೆಗೆ ದರ್ಶನ್ ಯಶವಂತಪುರಕ್ಕೆ ಬರುತ್ತಾರೆ ಎಂದು 9 ಗಂಟೆಯಿಂದಲೇ ದಾಸ ಅಭಿಮಾನಿಗಳು ಕಾಯುತ್ತಿದ್ದರು.
ಆದ್ರೆ ದರ್ಶನ್ 11 ಗಂಟೆಗೆ ಯಶವಂತಪುರಕ್ಕೆ ಆಗಮಿಸಿ ಪ್ರಚಾರ ಶುರು ಮಾಡಿದರು. ಈ ವೇಳೆ ದರ್ಶನ್ ರನ್ನು ನೋಡಲು ಅಭಿಮಾನಿಗಳು ಮುಗಿಬಿದ್ದರು. ಇದನ್ನ ಗಮನಿಸಿದ ದರ್ಶನ್, ಮಾಸ್ಕ್ ತೆಗೆದು ಅಭಿಮಾನಿಗಳಿಗೆ ದರ್ಶನ ಕೊಟ್ಟರು.
ಟ್ರಾಫಿಕ್ ಜಾಮ್
ದರ್ಶನ್ ರೋಡ್ ಹಿನ್ನೆಲೆ ಯಶವಂತಪುರ ಸುತ್ತಮುತ್ತ ಫುಲ್ ಟ್ರಾಫಿಕ್ ಜಾಮ್ ಉಂಟಾಗಿದೆ. ವಾಹನ ಸವಾರರು ಟ್ರಾಫಿಕ್ ಜಾಮ್ ನಲ್ಲಿ ಸಿಲುಕಿಕೊಂಡು ಪರದಾಡುತ್ತಿದ್ದಾರೆ.
ರಸ್ತೆ ತುಂಬೆಲ್ಲಾ ಬಿಜೆಪಿ ಕಾರ್ಯಕರ್ತರು, ದಚ್ಚು ಅಭಿಮಾನಿಗಳು ತುಂಬಿರುವ ಕಾರಣ ವಾಹನ ಸಂಚಾರದಲ್ಲಿ ಅಸ್ತವ್ಯಸ್ತಗೊಂಡಿದೆ.
ಸಾಮಾಜಿಕ ಅಂತರ ಎಲ್ಲಿ ‘ಸ್ವಾಮಿ’..?
ದೇಶದಲ್ಲಿ ಕೊರೊನಾ ಸಂಕಷ್ಟ ಇನ್ನು ದೂರವಾಗಿಲ್ಲ. ಈಗಲೂ ಎಷ್ಟೊ ಮಂದಿ ಹೆಮ್ಮಾರಿ ವೈರಸ್ ಗೆ ತುತ್ತಾಗಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ.
ಸರ್ಕಾರ ಕಟ್ಟು ನಿಟ್ಟಾಗಿ ಕೊರೊನಾ ನಿಯಮಗಳನ್ನು ಪಾಲಿಸಬೇಕೆಂದು ಸೂಚನೆಗಳನ್ನು ಹೊರಡಿಸಿದೆ. ಆದ್ರೆ ದರ್ಶನ್ ರ ಇಂದಿನ ಪ್ರಚಾರದಲ್ಲಿ ಯಾವುದೇ ಕೊರೊನಾ ನಿಯಮಾವಳಿಗಳನ್ನು ಗಾಳಿಗೆ ತೂರಲಾಗಿದೆ.
ಇದನ್ನೂ ಓದಿ : ಆರ್.ಆರ್ ನಗರಕ್ಕೆ ಚಕ್ರವರ್ತಿ `ಸುಂಟರಗಾಳಿ’
ಬಿಜೆಪಿ ಕಾರ್ಯಕರ್ತರು, ದಚ್ಚು ಅಭಿಮಾನಿಗಳು ಸಾಮಾಜಿಕ ಅಂತರವನ್ನು ಮರೆತು ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ. ಇನ್ನು ಮಾಸ್ಕ್ ವಿಚಾರಕ್ಕೆ ಬಂದ್ರೆ ದರ್ಶನ್ ಹಿಂದೆ ನಿಂತಿರುವ ಬಿಜೆಪಿ ಮುಖಂಡರೇ ಸರಿಯಾಗಿ ಮಾಸ್ಕ್ ಹಾಕಿಕೊಂಡಿಲ್ಲ.
ದರ್ಶನ್ ರೋಡ್ ಶೋ ಎಲ್ಲೆಲ್ಲಿ?
ಯಶವಂತಪುರ ರೈಲ್ವೆ ನಿಲ್ದಾಣದ ಮುಂಭಾಗದಿಂದ ದರ್ಶನ್ ರೋಡ್ ಶೋ ಶುರು
ಬಳಿಕ ಜೆ.ಪಿ.ಪಾರ್ಕ್ ವಾರ್ಡ್ ವ್ಯಾಪ್ತಿಯಲ್ಲಿ ರೋಡ್ ಶೋ
ಮಧ್ಯಾಹ್ನ 1:15 ಗಂಟೆ ಜಾಲಹಳ್ಳಿ ವಿಲೇಜ್ ಮೂಲಕವಾಗಿ ರೋಡ್ ಶೋ
ಮಧ್ಯಾಹ್ನ 2:00 ಗಂಟೆ ಹೆಚ್ ಎಂಟಿ, ಪೀಣ್ಯಾ ಮಾರ್ಗವಾಗಿ ಗೊರಗುಂಟೆಪಾಳ್ಯದಲ್ಲಿ ಪ್ರಚಾರ
ಸಂಜೆ 4:00 ಗಂಟೆ ಲಕ್ಷ್ಮಿದೇವಿನಗರದ ಕೂಲಿನಗರ ಸೇತುವೆಯಿಂದ ರೋಡ್ ಶೋ
ಇದನ್ನೂ ಓದಿ : ಶಿರಾ ಅಖಾಡಕ್ಕೆ ಇಂದು ರಾಜಾಹುಲಿ `ಬಿಎಸ್‍ವೈ’ ಎಂಟ್ರಿ
ಸಂಜೆ 5:00 ಗಂಟೆ ಲಗ್ಗೆರೆಯ ಆಲದಮರ ಸರ್ಕಲ್, ಕೊಟ್ಟಿಗೆಪಾಳ್ಯದ ಪೈಪ್ ಲೈನ್, ಸುಂಕದಕಟ್ಟೆಗಳಲ್ಲಿ ರೋಡ್ ಶೋ
ಸಂಜೆ 6:00 ಗಂಟೆ ಕೊಟ್ಟಿಗೆಪಾಳ್ಯದ ಬಿಡಿಎ ಕಾಂಪ್ಲೆಕ್ಸ್ ವರೆಗೆ ರೋಡ್ ಶೋ
ರಾತ್ರಿ 8:15 ಗಂಟೆ ಜ್ಞಾನಭಾರತಿಯ ಕೆಂಗುಂಟೆ, ಮಲ್ಲತ್ತಹಳ್ಳಿಯಲ್ಲಿ ರೋಡ್ ಶೋ
ರಾತ್ರಿ 9:00 ಗಂಟೆ ರಾಜರಾಜೇಶ್ವರಿನಗರದ ಪ್ರಮುಖ ರಸ್ತೆಗಳಲ್ಲಿ ರೋಡ್ ಶೋ ನಡೆಸಲಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel