ಆತ್ಮೀಯ ಗೆಳೆಯ ಹಾಗೂ ಬುಲೆಟ್ ಪ್ರಕಾಶ್ ನಿಧನಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಂತಾಪ ಸೂಚಿಸಿದ್ದಾರೆ. ಹಾಸ್ಯ ಕಲಾವಿದರಾದ ಬುಲೆಟ್ ಪ್ರಕಾಶ್ ಇಂದು ನಮ್ಮಿಂದ ದೈಹಿಕವಾಗಿ ದೂರವಾಗಿದ್ದಾರೆ. ಈ ನಷ್ಟವನ್ನು ಸಹಿಸಿಕೊಳ್ಳುವ ಶಕ್ತಿ ದೇವರು ಅವರ ಕುಟುಂಬಕ್ಕೆ ನೀಡಲಿ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದಾರೆ. ಇದಲ್ಲದೆ ಗೆಳೆಯನ ಕುಟುಂಬಕ್ಕೆ ನೆರವಾಗಿರುವ ತೂಗುದೀಪ, ಬುಲೆಟ್ ಪ್ರಕಾಶ್ ಮಗಳ ಮದುವೆ ಜವಾಬ್ದಾರಿ ನನ್ನದು ಎಂದಿದ್ದಾರೆ.
ಇನ್ನು ನಟ ದರ್ಶನ್ ಮತ್ತು ಬುಲೆಟ್ ಪ್ರಕಾಶ್ ಅತ್ಯಾಪ್ತ ಸ್ನೇಹಿತರಾಗಿದ್ದವರು. ಭಗವಾನ್, ಧ್ರುವ, ಬಾಸ್, ಶೌರ್ಯ, ಮಿಸ್ಟರ್ ಐರಾವತ, ಕಲಾಸಿಪಾಳ್ಯ, ದತ್ತ, ಸಾರಥಿ, ಜಗ್ಗುದಾದ, ಅಂಬರೀಷ ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ಜೊತೆಯಾಗಿ ನಟಿಸಿದ್ರು. ಆದ್ರೆ ಇತ್ತೀಚೆಗೆ ಇಬ್ಬರ ನಡುವೆ ಸಣ್ಣ ಮನಸ್ತಾಪ ಆಗಿದ್ರೂ ಆನಂತರದಲ್ಲಿ ಎಲ್ಲವೂ ಸರಿ ಹೋಗಿತ್ತು.








