Darshan fans : ದರ್ಶನ್ ಅಡಿಯೋ ಕ್ಲಿಪ್ ಚುನಾವಣಾ ಪ್ರಚಾರಕ್ಕೆ ಬಳಸಿದ ಜೆಡಿಎಸ್ – ಅಭಿಮಾನಿಗಳು ಗರಂ
ದರ್ಶನ್ ಅವರ ಅಡಿಯೋ ಕ್ಲಿಪ್ ಅನ್ನು ಜೆಡಿಎಸ್ ಚುನಾವಣಾ ಪ್ರಚಾರಕ್ಕೆ ಬಳಸಿಕೊಂಡಿರುವ ಬಗ್ಗೆ ಡಿಬಾಸ್ ಅಭಿಮಾನಿಗಳು ಗರಂ ಆಗಿದ್ದಾರೆ.
ಇತ್ತೀಚೆಗೆ ಖಾಸಗಿ ಚಾನಲ್ ಸಂದರ್ಶನವೊಂದರಲ್ಲಿ ಟ್ಯಾಕ್ಸ್ ಪಾವತಿ ಬಗ್ಗೆ ದರ್ಶನ್ ಮಾತನಾಡಿದ್ದರು. ಬೇರೆ ದೇಶಗಳಿಗಿಂತ ಹೆಚ್ಚಿನ ಟ್ಯಾಕ್ಸ್ ಅನ್ನು ನಾವು ಕಟ್ಟುತ್ತೇವೆ. ಆದರೆ ನಮಗೆ ಇಲ್ಲಿ ಅವಶ್ಯಕತೆ ಇರುವ ಸೌಲಭ್ಯ ಮಾತ್ರ ಸಿಗುತ್ತಿಲ್ಲ ಎಂದು ಆ ಸಂದರ್ಶನದಲ್ಲಿ ಡಿಬಾಸ್ ಹೇಳಿದ್ದರು.
ಇದೀಗ ಜೆಡಿಎಸ್ ಪಕ್ಷವು ದರ್ಶನ್ ಮಾತನಾಡಿರುವ ಆ ಅಡಿಯೋ ಕ್ಲಿಪ್ ಅನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ಬೇರೆ ದೇಶಗಳಿಗಿಂತ ಹೆಚ್ಚಿನ ಟ್ಯಾಕ್ಸ್ ಕಟ್ಟುತ್ತೇವೆ. ಆದರೆ ನಮಗೆ ಸಿಗಬೇಕಾದ ಸೌಲಭ್ಯ ಸಿಗುತ್ತಿಲ್ಲ ಎಂದು ಡಿಬಾಸ್ ಹೇಳಿದ್ದಾರೆ ಎಂದು ಬರೆದುಕೊಂಡಿದೆ.
ಜೊತೆಗೆ ಪಂಚರತ್ನ ರಥಯಾತ್ರೆಯಲ್ಲಿರುವ ಹೆಚ್.ಡಿ.ಕುಮಾರಸ್ವಾಮಿ ಮಾತನಾಡಿರುವ ಚುನಾವಣಾ ಪ್ರಚಾರದ ವಿಡಿಯೋವನ್ನು ಹಂಚಿಕೊಂಡಿದೆ.
ಇದೀಗ ದರ್ಶನ್ ಮಾತನ್ನು ಜೆಡಿಎಸ್ ಚುನಾವಣಾ ಪ್ರಚಾರಕ್ಕೆ ಬಳಸಿಕೊಂಡಿರುವುದಕ್ಕೆ ಡಿಬಾಸ್ ಅಭಿಮಾನಿಗಳು ಜೆಡಿಎಸ್ ಪಕ್ಷದ ಮೇಲೆ ಗರಂ ಆಗಿದ್ದಾರೆ.
darshan-fans-jds-used-darshan-audio-clip-for-election-campaign-fans-are-furious