ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿ ಜೈಲು ಸೇರಿರುವ ದರ್ಶನ್ (Darshan) ಬಳ್ಳಾರಿಯಲ್ಲಿಯೂ ಮಂಕಾಗಿಲ್ಲ ಎನ್ನಲಾಗಿದೆ.
ಮಾಧ್ಯಮದವರು ಕಾಣುತ್ತಿದ್ದಂತೆ ಅಸಭ್ಯ ಕೈ ಸನ್ನೆ ಮಾಡಿದ್ದಾರೆ. ಮಾಧ್ಯಮಗಳನ್ನು ನೋಡಿ ದರ್ಶನ್ ಅಸಭ್ಯ ಸನ್ನೆ ಮಾಡಿರೋದ್ದಕ್ಕೆ ಪರ ವಿರೋಧದ ಚರ್ಚೆಗಳು ಈಗ ಶುರುವಾಗಿವೆ. ಇಂದು (ಸೆ.12) ಚಾರ್ಜ್ಶೀಟ್ ಪ್ರತಿ ಸಮೇತ ವಕೀಲರ ಜೊತೆ ವಿಜಯಲಕ್ಷ್ಮಿ ಕುಟುಂಬ ಬಳ್ಳಾರಿ ಜೈಲಿಗೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ವಕೀಲರ ಜೊತೆ ಕಾನೂನು ಸಮರದ ಬಗ್ಗೆ ಚರ್ಚಿಸಲು ಭೇಟಿ ಮಾಡುಲು ಹೋಗುವಾಗ ಈ ರೀತಿಯಾಗಿ ಅಸಭ್ಯ ಕೈ ಸನ್ನೆ ಮಾಡಿದ್ದಾರೆ ಎನ್ನಲಾಗಿದೆ.
ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿ ಐಷಾರಾಮಿ ಜೀವನ ನಡೆಸುತ್ತಿದ್ದಾರೆಂಬ ಆರೋಪದ ಹಿನ್ನೆಲೆಯಲ್ಲಿ ದರ್ಶನ್ ರನ್ನು ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲಾಗಿತ್ತು. ಆದರೂ ದರ್ಶನ್ ಬದಲಾಗಿಲ್ಲ ಎನ್ನುವುದು ಇದರಿಂದ ಸಾಬೀತಾಗುತ್ತಿದೆ.