ಡಿ ಬಾಸ್ ದರ್ಶನ್ ಅಂದ್ರೆ ಅವರ ಅಭಿಮಾನಿಗಳಿಗೆ ಅಚ್ಚುಮೆಚ್ಚು.. ಚಾಲೆಂಜಿಂಗ್ ಸ್ಟಾರ್ ಸಿನಿಮಾ ಬಿಡುಗಡೆ ಆಗ್ತಿದೆ ಅಂದ್ರೆ ಸಾಕು ಥಿಯೆಟರ್ ಮುಂದೆ ಜಾತ್ರೆಯ ವಾತಾವರಣ ನಿರ್ಮಾಣ ಆಗುತ್ತೆ.. ಅಂತದ್ರಲ್ಲಿ ಡಿಬಾಸ್ ಹುಟ್ಟುಹಬ್ಬ ಅಂದ್ರೆ ಕೇಳಬೇಕಾ ಜನಸಾಗರವೇ ಹರಿದು ಬರುತ್ತೆ..
ದರ್ಶನ್ ಹುಟ್ಟುಹಬ್ಬ ಹಿನ್ನಲೆ ಅವರ ಮನೆಮುಂದೆ ಜನಸಾಗರವೇ ಹರಿದು ಬಂದಿತ್ತು.. ನೆಚ್ಚಿನ ನಟ ಕಾಣ್ತುಂಬಿಕೊಳ್ಳುವ ನಡುವೆ ಸಣ್ಣ ಅಹಿತಕರ ಘಟನೆ ಪಡೆದಿದೆ.. ಆ ಘಟನೆಗೆ ನೊಂದುಕೊಂಡ ದರ್ಶನ್ ತನ್ನ ಜತೆಯಲ್ಲಿದ್ದ ವ್ಯಕ್ತಿಯ ತಲೆಗೆ ಮೊಟಕಿದ್ದಾರೆ..
ಹೌದು, ದರ್ಶನ್ ಹುಟ್ಟುಹಬ್ಬ ಹಿನ್ನಲೆ ಅವರ ಅಭಿಮಾನಿಯೊರ್ವ ಡಿಬಾಸ್ ನೀಡಲು ಎಣ್ಣೆ ಡಬ್ಬ ತಂದಿದ್ದಾನೆ.. ದಾಸನಿಗೆ ನೀಡಲು ಸರತಿ ಸಾಲಿನಲ್ಲಿ ನಿಂತಿದ್ದಾಗ ತಳ್ಳಾಟ ಉಂಟಾಗಿದೆ.. ಇದರಿಂದ ಸಿಟ್ಟಿಗೆದ್ದ ವ್ಯಕ್ತಿ ಆತನನ್ನ ತಳ್ಳಿದ್ದಾನೆ.. ಈ ವೇಳೆ ಅಭಿಮಾನಿ ಕೆಳಗೆ ಬಿದ್ದುದನ್ನ ಕಂಡ ದರ್ಶನ್ ತಮ್ಮ ಪಕ್ಕದಲ್ಲಿದ್ದವರನ್ನ ವ್ಯಕ್ತಿಯ ತಲೆಗೆ ಮೆಲ್ಲನೆ ಕುಟುಕಿ..ಹಾಗೆಲ್ಲ ಮಾಡಬೇಡ. ಅಭಿಮಾನಿಗಳನ್ನ ಗೌರವದಿಂದ ಕಾಣಬೇಕು ಅಂತ ತಿಳಿ ಹೇಳಿದ್ದಾರೆ.. ಇದು ಸಕತ್ ವೈರಲ್ ಆಗಿದ್ದು. ಡಿಬಾಸ್ ಅಭಿಮಾನಿಗಳ ಅಭಿಮಾನವನ್ನ ಮತ್ತಷ್ಟು ಹೆಚ್ಚಿಸಿದೆ..








