ಡಿ ಬಾಸ್ ನಟನೆಯ ಕ್ರಾಂತಿ ಸಿನಿಮಾದ ಕ್ರಾಂತಿ ಈಗಾಗಲೇ ರಾಜ್ಯದಲ್ಲಿ ಶುರುವಾಗಿಬಿಟ್ಟಿದೆ.. ಒಂದೆಡೆ ಮಾಧ್ಯಮದವರು ಡಿ ಬಾಸ್ ಸಿನಿಮಾವನ್ನ ಬಾಯ್ಕಾಟ್ ಮಾಡುವ ಪ್ಲಾನ್ ನಲ್ಲಿದ್ರೆ ,, ಮತ್ತೊಂದ್ ಕಡೆ ದಾಸನ ಅಭಿಮಾನಿಗಳು ಮೀಡಿಯಾದವರ ಎದುರು ತೊಡೆ ತೊಟ್ಟು ಅದ್ಧೂರಿಯಾಗಿ ಸಿನಿಮಾವನ್ನ ಪ್ರಮೋಷನ್ ಮಾಡ್ತಾ ಇದ್ದಾರೆ..
ಫ್ಯಾನ್ಸ್ ದಚ್ಚು ಸಿನಿಮಾವನ್ನ ರಾಜ್ಯಾದ್ಯಂತ ಸಖತ್ ಅದ್ಧೂರಿಯಾಗಿಯೇ ರಾಜಾರೋಷವಾಗಿ ಪ್ರಚಾರ ಮಾಡ್ತಾ ಇದ್ದಾರೆ.. ಈಗಿನಿಂದಲೇ ರಾಜ್ಯದಲ್ಲಿ ಕ್ರಾಂತಿ ಜಾತ್ರೆ ಶುರುವಾಗಿಬಿಟ್ಟಿದೆ.. ಈಗಾಗಲೇ ಸಿನಿಮಾದ ಥೀಮ್ ಪೋಸ್ಟರ್, ಫಸ್ಟ್ ಲುಕ್ ಟೀಸರ್ ರಿಲೀಸ್ ಆಗಿ ಕುತೂಹಲ ಹೆಚ್ಚಿಸಿದೆ..
ರಾಬರ್ಟ್ ನಂತರ ಡಿ ಬಾಸ್ ನಟನೆಯ ಮತ್ಯಾವುದೇ ಸಿನಿಮಾ ತೆರೆಕಂಡಿಲ್ಲ… ಕ್ರಾಂತಿ ಥಿಯೇಟರ್ ಗಳಲ್ಲಿ ಅಬ್ಬರಿಸಲಿದೆ.. ಈ ಸಿನಿಮಾ ದರ್ಶನ್ ನಟನೆಯ ಮೋಸ್ಟ್ ಆಂಟಿಸಿಪೇಟೆಡ್ ಸಿನಿಮಾವಾಗಿದೆ.. ಸೋಷಿಯಲ್ ಮೀಡಿಯಾದಲ್ಲೂ ಕ್ರಾಂತಿಯದ್ದೇ ಹವಾ… ಎಲ್ಲಿ ನೋಡಿದ್ರೆ ದಚ್ಚು ಅಭಿಮಾನಿಗಳು ನಡೆಸುತ್ತಿರುವ ರೋಡ್ ಶೋ ಜೊತೆಗೆ ಇತರೇ ಪ್ರಚಾರ ಕ್ರಾಯಗಳನ್ನ ನಡೆಸುತ್ತಿದ್ದಾರೆ.. ಡಿ ಬಾಸ್ ಫ್ಯಾನ್ಸ್ ಪವರ್ ಮತ್ತೊಮ್ಮೆ ರಾಜ್ಯದ ಜನರಿಗೆ ಗೊತ್ತಾಗಿದೆ..
ಅಭಿಮಾನಿಗಳಂತೂ ಸೋಷಿಯಲ್ ಮೀಡಿಯಾಗಳಲ್ಲಿ ಮಾಧ್ಯಮದವರ ವಿರುದ್ಧ ತೊಡೆ ತಟ್ಟಿ ಪೋಸ್ಟ್ ಗಳನ್ನ ಹಾಕುತ್ತಿದ್ದಾರೆ.. ಮಾಧ್ಯಮದವರ ಸಪೋರ್ಟ್ ಇಲ್ಲ ಅಂದ್ರೇನಂತೆ , ದಾಸನಿಗೆ ಅಭಿಮಾನಿಗಳಿದ್ದೀವಿ ಎಂದು ಸವಾಲೆಸೆದಿದ್ದಾರೆ..
https://twitter.com/i/status/1542755993158705152
ಅದು ಕೂಡ ನಿಜವೇ ,,, ಕರ್ನಾಟಕದಲ್ಲಿ ದರ್ಶನ್ ಗೆ ದೊಡ್ಡ ಫ್ಯಾಂಡಮ್ ಇದೆ.. ಇವರೆಲ್ಲರೂ ಒಟ್ಟಾಗಿ ಖುದ್ದು ಪ್ರಚಾರಕ್ಕೆ ಇಳಿದರೆ ,, ದಾಸನ ಸಿನಿಮಾಗೆ ಪ್ರತ್ಯೇಕ ಪ್ರಚಾರದ ಅವಶ್ಯಕತೆಯೇ ಇಲ್ಲ..
ದರ್ಶನ್ ಅವರು ಸಹ ಇತ್ತೀಚೆಗೆ ತಮ್ಮ ಅಭಿಮಾನಿಗಳ ಈ ಬೆಂಬಲಕ್ಕೆ ಧನ್ಯವಾದ ತಿಳಿಸಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದ್ದರು..
ಅಂದ್ಹಾಗೆ ಸಿನಿಮಾದ ಅಪ್ ಡೇಟ್ ಗಳ ಬಗ್ಗೆ ಮಾತನಾಡೋದಾದ್ರೆ,, ಈಗಾಗಲೇ ಬಹುತೇಕ ಟಾಕಿ ಪೋರ್ಷನ್ ಶೂಟಿಂಗ್ ಮುಕ್ತಾಯವಾಗಿದೆ. ಕ್ರಾಂತಿ ಸಿನಿಮಾ ಸಾಂಗ್ ಶೂಟಿಂಗ್ಗೆ ತಯಾರಿ ಶುರುವಾಗಿದೆ.
https://twitter.com/SpreadBossism2/status/1542735513135656961?ref_src=twsrc%5Egoogle%7Ctwcamp%5Eserp%7Ctwgr%5Etweet
ಸಿನಿಮಾದಲ್ಲಿ ದರ್ಶನ್ ಜೊತೆಗೆ ರಚಿತಾ ರಾಮ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ..
ಕ್ರಾಂತಿ ಚಿತ್ರದ ಬಹುತೇಕ ಶೂಟಿಂಗ್ ಕಂಪ್ಲೀಟ್ ಮಾಡಿದೆ.. ಕ್ರಾಂತಿ ಚಿತ್ರದಲ್ಲಿ ಕ್ರೇಜಿಸ್ಟಾರ್ ವಿ. ರವಿಚಂದ್ರನ್, ಸುಮಲತಾ ಅಂಬರೀಶ್, ಮುಖ್ಯಮಂತ್ರಿ ಚಂದ್ರು ಕೂಡ ಮುಖ್ಯ ಪಾತ್ರಗಳಲ್ಲಿ ಬಣ್ಣ ಹಚ್ಚಿದ್ದಾರೆ.. ಈಗಾಗಲೇ ಬೆಂಗಳೂರು, ಹೈದರಾಬಾದ್ನಲ್ಲಿ ಸಿನಿಮಾ ಚಿತ್ರೀಕರಣ ನಡೆದಿದೆ. ಚಿತ್ರದಲ್ಲಿ ಅಕ್ಷರ ಕ್ರಾಂತಿಯ ಕಥೆ ಹೇಳ್ತಿದ್ದು, ಪ್ಯಾನ್ ಇಂಡಿಯಾ ಲೆವೆಲ್ನಲ್ಲಿ ಸಿನಿಮಾ ನಿರ್ಮಾಣ ಆಗ್ತಿದೆ.. ವಿ. ಹರಿಕೃಷ್ಣ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳೋದರ ಜೊತೆಗೆ ಮ್ಯೂಸಿಕ್ ಕಂಪೋಸ್ ಮಾಡ್ತಿದ್ದಾರೆ.
ಇನ್ನೂ ಇದೀಗ ಸಿನಿಮಾ ತಂಡ ವಿದೇಶಕ್ಕೆ ಹೊರಟು ನಿಂತಿದೆ.. 15 ದಿನಗಳ ಕಾಲ ವಿದೇಶದಲ್ಲಿ ಬೀಡುಬಿಟ್ಟು ಕೊನೆ ಹಂತದ ಶೂಟಿಂಗ್ ಮುಗಿಸಿಕೊಳ್ಳಲಿದೆ ಎನ್ನಲಾಗ್ತಿದೆ..
ಅಂದ್ಹಾಗೆ ಈ ಸಿನಿಮಾದಲ್ಲಿ ದರ್ಶನ್ ಅವರು NRI ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗ್ತಿದೆ..
ರಾಬರ್ಟ್ ನಂತರ ದರ್ಶನ್ ನಟಿಸ್ತಿರೋ ಸಿನಿಮಾ ಕ್ರಾಂತಿ. ಇನ್ನು 15 ದಿನ ಶೂಟಿಂಗ್ ಮುಗಿದ್ರೆ, ಕುಂಬಳಕಾಯಿ ಒಡೆಯಲಿದೆ ಚಿತ್ರತಂಡ. ಸಿನಿಮಾವನ್ನ ನವೆಂಬರ್ ನಲ್ಲಿ ಗಣರಾಜ್ಯೋತ್ಸವದ ಸಮಯದಲ್ಲಿ ರಿಲೀಸ್ ಮಾಡುವ ಪ್ಲಾನ್ ನಲ್ಲಿ ಸಿನಿಮಾ ತಂಡವಿದೆ ಎನ್ನಲಾಗ್ತಿದೆ..