ಕೊಲೆ ಪ್ರಕರಣದ ಆರೋಪಿ ದರ್ಶನ್ ಪರಪ್ಪನ ಅಗ್ರಹಾರದಲ್ಲಿ ರೌಡಿಗಳೊಂದಿಗೆ ಸೇರಿ ಐಷಾರಾಮಿ ಬದುಕು ನಡೆಸುತ್ತಿರುವುದು ಬೆಳಕಿಗೆ ಬರುತ್ತಿದ್ದಂತೆ ಬಳ್ಳಾರಿ ಜೈಲಿಗೆ ಶಿಫ್ಟ್ ಆಗಿದ್ದಾರೆ. ಅಲ್ಲಿ ನಿಜವಾದ ಜೈಲಿನ ದರ್ಶನ ಅವರಿಗೆ ಆಗುತ್ತಿದೆ. ಬಳ್ಳಾರಿ ಜೈಲು ಸೇರಿದ ದಿನದಿಂದಲೂ ಅವರು ಕುರ್ಚಿಗೆ ಬೇಡಿಕೆ ಇಟ್ಟಿದ್ದಾರೆ. ಆದರೆ, ಅದಕ್ಕೆ ಜೈಲು ಅಧಿಕಾರಿಗಳು ಮಾತ್ರ ಸೊಪ್ಪು ಹಾಕುತ್ತಿಲ್ಲ.
ಇದರಿಂದ ದರ್ಶನ್ ಗರಂ ಆಗಿದ್ದಾರೆ. ಈ ವಿಚಾರವನ್ನು ಅವರು ಕೋರ್ಟ್ ಎದುರು ಪ್ರಸ್ತಾಪ ಮಾಡಿದ್ದರು. ಈ ಸಂದರ್ಭದಲ್ಲಿ ಜಡ್ಜ್ ಕುರ್ಚಿ ನೀಡಲು ಸೂಚನೆ ಕೊಟ್ಟಿದ್ದರು. ಆದರೂ ಚೇರ್ ಏಕೆ ಕೊಟ್ಟಿಲ್ಲ ಎಂದು ಜೈಲಧಿಕಾರಿಗಳ ವಿರುದ್ಧ ದರ್ಶನ್ ಗರಂ ಆಗಿದ್ದಾರೆ. ದರ್ಶನ್ ಮಾತಿಗೆ ಖಡಕ್ಕಾಗಿ ಜೈಲಾಧಿಕಾರಿಗಳು ತೀರುಗೇಟು ನೀಡಿದ್ದು, ದರ್ಶನ್ ಸೈಲೆಂಟ್ ಆಗಿದ್ದಾರೆ ಎನ್ನಲಾಗಿದೆ.
ಕೋರ್ಟ್ ನಿಂದ ಅಧಿಕೃತ ಆದೇಶ ಬಂದ ನಂತರವೇ ಚೇರ್ ನೀಡಲಾಗುತ್ತದೆ ಎಂದು ಅಧಿಕಾರಿಗಳು ದರ್ಶನ್ ಗೆ ಹೇಳಿದ್ದಾರೆ. ದರ್ಶನ್ ಗೆ ಬಳ್ಳಾರಿ ಜೈಲಿನಲ್ಲಿ ಕಷ್ಟಗಳ ಸರಮಾಲೆಯೇ ಎದುರಾಗುತ್ತಿವೆ ಎನ್ನಲಾಗಿದೆ.
ವಿಚಾರಣಾದೀನ ಕೈದಿಗಳಿಗೆ ಕೆಲ ಅವಶ್ಯಕ ವಸ್ತುಗಳನ್ನು ಕೊಡಬುದಾದ ನಿಯಮಗಳಿವೆ. ಆದರೆ ಎಲ್ಲದಕ್ಕೂ ಕೋರ್ಟ್ ಆದೇಶ ಬೇಕು ಎಂದು ಬಳ್ಳಾರಿ ಸೆಂಟ್ರಲ್ ಜೈಲಾಧಿಕಾರಿಗಳು ಹೇಳುತ್ತಿದ್ದಾರೆ.