Darshan
ಸಚಿವ ಬಿಸಿ ಪಾಟೀಲ್ ಅವರು ರಾಜಕೀಯಕ್ಕೆ ಎಂಟ್ರಿ ಆಗುವುದಕ್ಕೂ ಮುನ್ನ ನಟನೆಯಲ್ಲಿ ಚಿರಪರಿಚಿತರಾದವರು. ಕೌರವ ಅಂತಲೇ ಫೇಮಸ್ ಆದವರು. ಇಂದು ಅವರನ್ನ ಸ್ಯಾಂಡಲ್ ವುಡ್ “ಕುರುಕ್ಷೇತ್ರದ” ‘ಕೌರವ’ ಅಂದ್ರೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಭೇಟಿ ಮಾಡಿದ್ದಾರೆ. ಇಬ್ಬರ ನಡುವಿನ ಭೇಟಿ ತೀವ್ರ ಕುತೂಹಲ ಮೂಡಿಸಿದೆ.
ಬಿಸಿ ಪಾಟೀಲ್ ಅವರ ಕಚೇರಿಗೆ ತೆರಳಿದ್ದ ಡಿ ಬಾಸ್ ಕೆಲ ಹೊತ್ತು ಅವರ ಜೊತೆ ಮಾತುಕತೆ ನಡೆಸಿದ್ದಾರೆ. ಸದ್ಯ ಇಬ್ಬರ ಭೇಟಿಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಚರ್ಚೆಗೆ ಗ್ರಾಸವಾಗಿದೆ.
ಇನ್ನೂ ಆರ್ ಆರ್ ನಗರ ಚುನಾವಣೆಯ ನಂತರದ ಭೇಟಿ ಆಗಿರೋದ್ರಿಂದ ನಾನಾ ಚರ್ಚೆಗಳಿಗೆ ಕಾರಣವಾಗಿರಬಹುದು. ಇನ್ನೂ ಬಿ.ಸಿ ಪಾಟೀಲ್ ಹಾಗೂ ಡಿ ಬಾಸ್ ಭೇಟಿ ವೇಳೆ ಸಚಿವ ಎಸ್ ಟಿ ಸೋಮಶೇಖರ್ ಸಹ ಉಪಸ್ಥಿತರಿದ್ದರು. ಇತ್ತೀಚಿಗಷ್ಟೆ ನಡೆದ ರಾಜರಾಜೇಶ್ವರಿ ನಗರದ ಉಪಚುನಾವಣೆಯಲ್ಲಿ ನಟ ದರ್ಶನ್ ಅವರು ಬಿಜೆಪಿ ಅಭ್ಯರ್ಥಿ ಮುನಿರತ್ನ ಪರ ಭರ್ಜರಿ ರೋಡ್ ಶೋ ಮೂಲಕ ಪ್ರಚಾರ ಮಾಡಿದ್ದರು. ಈ ವೇಳೆ ಬಿಸಿ ಪಾಟೀಲ್ ಸಹ ದರ್ಶನ್ ಜೊತೆ ಪ್ರಚಾರದಲ್ಲಿ ಭಾಗಿಯಾಗಿದ್ದರು.
ಸೋಲು ಸಹಜ : ಮತ್ತೆ ಮಂಡ್ಯ ರಾಜಕೀಯಕ್ಕೆ ನಿಖಿಲ್ ಎಂಟ್ರಿ
Darshan
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel