darshan
ಅಭಿಮಾನಿ ಆಹ್ವಾನ ಸ್ವೀಕರಿಸಿ ಅವರ ಮನೆಗೆ ಭೇಟಿ ನೀಡಿದ ಡಿ ಬಾಸ್..!
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನ ನೋಡ್ಬೇಕು, ಅವರ ಜೊತೆ ಸೆಲ್ಫಿ ತೆಗೆದುಕೊಳ್ಬೇಕು ಅನ್ನೋ ಆಸೆ ಅವರ ಲಕ್ಷಾಂತರ ಅಭಿಮಾನಿಗಳಿಗಿದೆ. ಅವರ ಲಕ್ಷಾಂತರ ಅಭಿಮಾನಿಗಳ ಪೈಕಿ ಓರ್ವ ಅಭಿಮಾನಿಯ ಅದೃಷ್ಟ ಎಂದು ಕುಲಾಯಿಸಿದೆ. ಯಾಕಂದ್ರೆ ಇಂದು ಈ ಅಭಿಮಾನಿ ತಮ್ಮ ನೆಚ್ಚಿನ ನಟ ಡಿ ಬಾಸ್ ಅವರನ್ನ ನೇರವಾಗಿ ನೋಡಿದಷ್ಟೇ ಅಲ್ಲ ತಮ್ಮ ಮನೆಗೆ ಅತಿಥಿಯನ್ನಾಗಿಯೂ ಕರೆದುಕೊಂಡು ಹೋಗಿದ್ದಾರೆ.
ಹೌದು ಕಳೆದ ಎರಡು ದಿನಗಳ ಹಿಂದೆ ಸ್ನೇಹಿತರ ಜೊತೆ ಮಡಿಕೇರಿಗೆ ಬೈಕ್ ರೈಡ್ ಹೋಗಿರುವ ನಟ ದರ್ಶನ್ ಅಲ್ಲೇ ವಾಸ್ತವ್ಯ ಹೂಡಿದ್ದರು. ಸ್ನೇಹಿತನಿಗೆ ಸೇರಿದ ತೋಟದ ಮನೆಯಲ್ಲಿ ಟೈಂ ಪಾಸ್ ಮಾಡುತ್ತಾ, ಗೆಳೆಯರ ಜೊತೆ ಕ್ರಿಕೆಟ್ ಆಡುತ್ತಿರುವ ವಿಡಿಯೋ ಸಹ ವೈರಲ್ ಆಗಿತ್ತು. ದರ್ಶನ್ ರಾಬರ್ಟ್ ನಿರ್ಮಾಪಕ ಉಮಾಪತಿ ಶ್ರೀನಿವಾಸ್, ನಟ ಚಿಕ್ಕಣ್ಣ, ಪ್ರಜ್ವಲ್ ದೇವರಾಜ್, ಪ್ರಣಾಮ್ ದೇವರಾಜ್, ಪನ್ನಾಗಭರಣ, ಯಶಸ್ ಸೂರ್ಯ ಸೇರಿದಂತೆ ಅನೇಕರು ಸಾಥ್ ನೀಡಿದ್ರು.
ಇದೀಗ, ಮಡಿಕೇರಿಯಲ್ಲಿ ದಾರಿ ಮಧ್ಯೆ ಸಿಕ್ಕ ಅಭಿಮಾನಿಯೊಬ್ಬರ ಮನೆಗೆ ದರ್ಶನ್ ಭೇಟಿ ನೀಡಿ ಗಮನ ಸೆಳೆದಿದ್ದಾರೆ. ಬೆಂಗಳೂರಿನಿಂದ ಮಡಿಕೇರಿ ಕಡೆ ಹೋಗುವ ವೇಳೆ ಸೋಮವಾರಪೇಟೆಯ ತಾಲ್ಲೂಕಿನ ಬೈಚನಹಳ್ಳಿ ಬಳಿ ಹೆದ್ದಾರಿಯಲ್ಲಿ ನಟ ದರ್ಶನ್ ವಿಶ್ರಾಂತಿಗೆಂದು ಬ್ರೇಕ್ ನಿಲ್ಲಿಸಿದ್ದ ವೇಳೆ ದರ್ಶನ್ ಅವರನ್ನು ನೋಡಿದ ಅಭಿಮಾನಿಯೊಬ್ಬರು ತೀವ್ರ ಸಂತಸಗೊಂಡು, ನಮ್ಮ ಮನೆಗೆ ಬನ್ನಿ ಎಂದು ಆಹ್ವಾನಿಸಿದ್ದಾರೆ. ಅಭಿಮಾನಿಯ ಆಹ್ವಾನವನ್ನು ಸ್ವೀಕರಿಸಿದ ಸರ್ಶನ್ ಮನೆಗೆ ಹೋಗಿದ್ದಾರೆ. ಮನೆಯಲ್ಲಿದ್ದ ವೃದ್ದ ದಂಪತಿಯ ಜೊತೆ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇನ್ನೂ ದರ್ಶನ್ ಮಾನವೀಯತೆ ಗುಣ ಹೊಸದೇನಲ್ಲ. ಅವರ ಸರಳತೆ , ಸನ್ನಡತೆ ಎಲ್ಲರಿಗೂ ಗೊತ್ತಿರೋದೆ. ಇದೀಗ ಮತ್ತೊಮ್ಮೆ ಅದು ಸಾಬೀತಾಗಿದೆ. ಕರೆದ ತಕ್ಷಣ ಅಭಿಮಾನಿ ಮನೆಗೆ ಹೋದ ದಾಸನ ಸರಳತೆಗೆ ಅಭಿಮಾನಿಗಳು ಮತ್ತೆ ಮನಸೋತಿದ್ದಾರೆ.
ಲಾಕ್ ಡೌನ್ ಬಳಿಕ ತೆರೆಗಪ್ಪಳಿಸಿದ ಮೊದಲ ಸಿನಿಮಾ ‘ಆಕ್ಟ್ 1978’
darshan
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel







