ದರ್ಶನ್ ಹೆಸರಲ್ಲಿ ವಂಚನೆ : “ಯಾರೇ ಆಗಿದ್ರೂ ಬಿಡಲ್ಲ, ರಕ್ಕೆ-ಪುಕ್ಕ ಅಲ್ಲ ತಲೆಯನ್ನೇ ತೆಗಿಯೋನು ನಾನು” – ಡಿ ಬಾಸ್..!
ಸ್ಯಾಂಡಲ್ ವುಡ್ ನ ಸ್ಟಾರ್ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಹೆಸರಲ್ಲಿ ಮಹಿಳೆಯೊಬ್ಬರು 25 ಕೋಟಿ ರೂ. ವಂಚನೆಗೆ ಯತ್ನಿಸಿರುವ ಪ್ರಕರಣ ಸಂಬಂಧ ಡಿ ಬಾಸ್ ಪ್ರತಿಕ್ರಿಯಿಸಿ ಆಕ್ರೋಶ ಹೊರಹಾಕಿದ್ದಾರೆ. ಎಸಿಪಿ ಕಚೇರಿಗೆ ಹಾಜರಾಗಿ ಬಳಿಕ ಮಾಧ್ಯಮದವರ ಜೊತೆ ಮಾತನಾಡಿದ ದರ್ಶನ್ ಅವರು ಈ ಪ್ರಕರಣದಲ್ಲಿ ಯಾರೆ ಇದ್ದರೂ ಸರಿ ಅವರನ್ನು ನಾನು ಬಿಡಲ್ಲ, ರಕ್ಕೆ-ಪುಕ್ಕ ಅಲ್ಲ ತಲೆಯನ್ನೇ ತೆಗಿಯೋನು ನಾನು ಎಂದು ಆಕ್ರೋಶಭರಿತ ಸಂದೇಶ ರವಾನೆ ಮಾಡಿದ್ದಾರೆ.
ಅಲ್ಲದೇ ನನಗೂ ಕೂಡ ಇದು ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ. ಪೊಲೀಸರ ಬಳಿ ಮಾತನಾಡಿದ್ದೇನೆ. ವಿಚಾರಣೆ ನಡೆಯುತ್ತಿದೆ. ಈ ಬಗ್ಗೆ ಮಾತನಾಡಲು ಸ್ವಲ್ಪ ಟೈಂ ಕೊಡಿ ಎಂದಿದ್ದಾರೆ. ಇದೇ ವೇಳೆ ಸುಮ್ಮನೆ ಗೂಬೆ ಕೂರಿಸುವ ಪ್ರಯತ್ನ ಆಗುತ್ತಿದೆ. ವಿಚಾರಣೆ ಬಳಿಕ ಸಂಪೂರ್ಣ ಮಾಹಿತಿ ನಾನೆ ನೀಡುತ್ತೇನೆ ಎಂದಿದ್ದಾರೆ.
ಇನ್ನು ಇದೇ ಸಮಯದಲ್ಲಿ ವಂಚನೆ ಪ್ರಕರಣದ ಬಗ್ಗೆ ಪ್ರತಿಕ್ರಿಯೆ ನೀಡಿದ ನಿರ್ಮಾಪಕ ಉಮಾಪತಿ ಅವರು ಈ ಪ್ರಕರಣ ಸುಮಾರು 2 ತಿಂಗಳಿಂದ ನಡೆಯುತ್ತಿದೆ. ಮಹಿಳೆ ಫೋನ್ ಮಾಡಿ ನೀವು ಮತ್ತು ದರ್ಶನ್ ಸರ್ ಲೋನ್ ತೆಗೆದುಕೊಳ್ಳುತ್ತಿದ್ದೀರಾ ಅಥವಾ ಶೂರಿಟಿ ಹಾಕಿದ್ದೀರಾ ಎಂದು ಕೇಳಿದರು. ಬಳಿಕ ವಿಚಾರಿಸಿದಾಗ ಯಾರು ಲೋನ್ ಪಡೆದಿಲ್ಲ ಎನ್ನುವುದು ಗೊತ್ತಾಯಿತು. ಎಲ್ಲರೂ ಮಾತನಾಡಿ ಬಳಿಕ ಜೂನ್ 16ರಂದು ಬೆಂಗಳೂರಿನ ಜಯನಗರದಲ್ಲಿ ದೂರು ನೀಡಿದೆವು ಎಂದಿದ್ದಾರೆ.
ಬಳಿಕ ಮೈಸೂರಿನಲ್ಲಿ ದೂರು ದಾಖಲಿಸಿದೆವು. ಆ ಮಹಿಳೆಯ ಹಿಂದೆ ಯಾರು ಇದ್ದಾರೆ, ಇದರ ಉದ್ದೇಶ ಏನು ಎನ್ನುವ ಬಗ್ಗೆ ವಿಚಾರಣೆ ನಡೆಯುತ್ತಿದೆ. ಬೆಂಗಳೂರು ಮತ್ತು ಮೈಸೂರು ಎರಡು ಕಡೆ ವಿಚಾರಣೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.
ಸಡನ್ ಆಗಿ ಪೊಲೀಸ್ ಠಾಣೆಗೆ ಭೇಟಿ ನೀಡಿದ್ಯಾಕೆ ಡಿ ಬಾಸ್..?
ಈ ಘಟನೆ ನಡೆದು ಒಂದು ತಿಂಗಳು ಆಗಿದೆ. ಸತ್ಯ ಏನು ಎನ್ನುವುದು ಹೊರಗೆ ಬರಲಿ. ನಾನು ಆಗ ಈ ಕುರಿತಾಗಿ ಮಾತನಾಡುತ್ತೇನೆ. ಬ್ಲ್ಯಾಕ್ ಮೇಲ್ ಏನೂ ಆಗಿಲ್ಲ. ಪೊರ್ಜರಿಯಾಗಿದೆ. ಈ ಕುರಿತಾಗಿ ಪೊಲೀಸರು ತನಿಖೆ ಮಡುತ್ತಿದ್ದಾರೆ. ಈ ವಿಚಾರಕ್ಕೆ ಬೇರೆ ರಕ್ಕೆ ಪುಕ್ಕಾ ಬಂದಾಗ ನಾನು ತಲೆಯನ್ನು ಕಟ್ಟ್ ಮಾಡುತ್ತೇನೆ ಎಂದು ದರ್ಶನ್ ಹೇಳಿದ್ದಾರೆ.
ತಮ್ಮ ಹೆಸರಿನಲ್ಲಿ ವಂಚನೆಗೆ ಮುಂದಾಗಿದ್ದ ಮಹಿಳೆ ವಿರುದ್ಧ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮೈಸೂರಿನ ಎಸಿಪಿ ಕಚೇರಿಗೆ ತೆರಳಿ ದೂರು ಸಲ್ಲಿಸಿದ್ದಾರೆ. 15 ದಿನಗಳ ಹಿಂದೆ ದರ್ಶನ್ ಬಳಿ ಓರ್ವ ಮಹಿಳೆ ಬಂದು, ನಿಮ್ಮ ಹೆಸರಿನಲ್ಲಿ ಶ್ಯೂರಿಟಿ ಹಾಕಿಕೊಂಡು 25 ಕೋಟಿ ರೂ. ಸಾಲ ಪಡೆದುಕೊಳ್ಳುತ್ತಿದ್ದಾರೆ. ದರ್ಶನ್ ಆಪ್ತ ರಾಬರ್ಟ್ ನಿರ್ಮಾಪಕರಾದ ಉಮಾಪತಿ ಮಹಿಳೆಯನ್ನ ದರ್ಶನ್ ಬಳಿ ಕರೆದುಕೊಂಡು ಬಂದಿರುವ ಬಗ್ಗೆ ತಿಳಿದು ಬಂದಿದೆ. ಇನ್ನೂ ತಮ್ಮ ಹೆಸರಿನಲ್ಲಿ ಶ್ಯೂರಿಟಿ ಹಾಕಿದ್ದಾರೆ ಎನ್ನಲಾದ ಎಲ್ಲ ಗೆಳೆಯರನ್ನು ದರ್ಶನ್ ವಿಚಾರಿಸಿದಾಗ ಮಹಿಳೆಯೇ ನಕಲಿ ಬ್ಯಾಂಕ್ ಮ್ಯಾನೇಜರ್ ಎಂಬುವುದು ತಿಳಿದು ಬಂದಿದೆ.
ಹೀರೋ ಘೋಷಣೆ ಮಾಡಿದ ಹೊಂಬಾಳೆ ನಿರೀಕ್ಷೆಯಂತೆ ಬಂದ ‘ರಿಚರ್ಡ್ ಆಂಟನಿ’
ಸದ್ಯ ಪೊಲೀಸರು ಮಹಿಳೆಯನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಮಹಿಳೆ ನಿರ್ಮಾಪಕ ಉಮಾಪತಿಯೇ ಹೀಗೆ ಹೇಳುವಂತೆ ಹೇಳಿದ್ದರು. ಹಾಗಾಗಿ ಸುಳ್ಳು ಮಾಹಿತಿಯನ್ನು ನೀಡುವಂತೆ ಸೂಚಿಸಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.