Darshan
ಕ್ರಿಸ್ ಮಸ್ ಕೇಕ್ ತಯಾರಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್..!
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಸದ್ಯ ಕೆಲಸಕಾರ್ಯಗಳಿಂದ ಬಿಡುವು ಪಡೆದುಕೊಂಡು, ಸ್ನೇಹಿತರ ಜೊತೆಗೆ ಪ್ರವಾಸ, ಬೈಕ್ ರೈಡಿಂಗ್, ಅಂತ ರಿಲ್ಯಾಕ್ಸ್ ಮೂಡ್ ನಲ್ಲಿದ್ದಾರೆ. ಹೀಗೆ ಪ್ರವಾಸದಲ್ಲಿರುವ ದರ್ಶನ್ ಅವರ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ರಾರಾಜಿಸುತ್ತಿವೆ. ಇದೀಗ ಕ್ರಿಸ್‌ಮಸ್ ಕೇಕ್ ತಯಾರಿಸಿ ಸುದ್ದಿಯಲ್ಲಿದ್ದಾರೆ ಡಿ ಬಾಸ್.
ಹೌದು ಕ್ರಿಸ್ ಮಸ್ ಹಬ್ಬಕ್ಕೆ ಇನ್ನೂ ಒಂದು ತಿಂಗಳು ಬಾಕಿಯಿರುವಾಗಲೇ ನಟ ದರ್ಶನ್ ಅವರು ಕೇಕ್ ತಯಾರಿಸಿದ್ದಾರೆ. ಕೇಕ್ ತಯಾರಿಸುತ್ತಿರುವ ದಚ್ಚು ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಏಪ್ರನ್ ಧರಿಸಿ ಕೇಕ್ ತಯಾರಿಸುತ್ತಿರುವ ‘ದಾಸ’ ನ ಫೋಟೋಗಳಿಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.
ಅಂದ್ಹಾಗೆ ಮೈಸೂರಿನ ಸಂದೇಶ್ ಪ್ರಿನ್ಸ್ ಹೋಟೆಲ್‌ನಲ್ಲಿ ಈಗಿಂದಲೇ ಕ್ರಿಸ್‌ಮಸ್ ಗೆ ತಯಾರಿಗಳು ಆರಂಭವಾಗಿದೆ. ಕ್ರಿಸ್‌ಮಸ್ ಆರಂಭಕ್ಕೆಂದು ಅತಿಥಿಯನ್ನು ಆಹ್ವಾನಿಸಿ ಕೇಕ್ ತಯಾರಿಸಲಾಗಿದೆ. ಹೀಗಾಗಿ ದರ್ಶನ್ ಅವರನ್ನ ಆಹ್ವಾನಿಸಲಾಗಿದ್ದು, ಡಿ ಬಾಸ್ ಸಡಗರದಿಂದ ಕೇಕ್ ತಯಾರಿಸಿದ್ದಾರೆ.
ಸಂದೇಶ್ ಹೋಟೆಲ್ ನ ಸಿಬ್ಬಂದಿ, ವ್ಯವಸ್ಥಾಪಕರೊಂದಿಗೆ ಸೇರಿ ದರ್ಶನ್ ಕೇಕ್ ತಯಾರಿಸಿದ್ದಾರೆ. ದರ್ಶನ್, ಏಪ್ರನ್, ಗ್ಲೌಸ್ ಧರಿಸಿ, ವೈನ್ ಸುರಿದು ಕೇಕ್ ತಯಾರಿಸಿದ್ದಾರೆ. ದರ್ಶನ್ ಕೇಕ್ ತಯಾರಿಸಿದ ಚಿತ್ರಗಳನ್ನು ಸಂದೇಶ್ ಪ್ರಿನ್ಸ್ ಹೋಟೆಲ್ ಹಂಚಿಕೊಂಡಿದ್ದು, ಡಿ ಬಾಸ್ ಅಭಿಮಾನಿಗಳ ಗಮನ ಸೆಳೆಯುತ್ತಿದೆ.
ಸದ್ಯ ರಾಬರ್ಟ್ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದ ದರ್ಶನ್ ಅವರು ಚಿತ್ರೀಕರಣ ಮುಗಿಯುತ್ತಿದ್ದಂತೆ ಬೈಕ್ ರೈಡ್, ಪ್ರವಾಸ ಅಂತ ವಿರಾಮದಲ್ಲಿ ಆತ್ಮೀಯರ ಜೊತೆಗೆ ಟೈಮ್ ಸ್ಪೆಂಡ್ ಮಾಡುತ್ತಾ ರೆಸ್ಟ್ ಮಾಡ್ತಾಯಿದ್ದಾರೆ. ಸದ್ಯ ಅವರ ಅಭಿನಯದ ಬಹುನಿರೀಕ್ಷೆಯ ರಾಬರ್ಟ್ ಚಿತ್ರ ರಿಲೀಸ್ ಗೆ ಅಭಿಮಾನಿಗಳು ಕಾಯುತ್ತಿದ್ದಾರೆ. ಶೀಘ್ರವೇ ಚಿತ್ರ ರಿಲೀಸ್ ಆಗಲಿದೆ.
Darshan
ಸಂಗೀತ, ನೃತ್ಯ ಶಾಲೆಗೆ ಎಸ್ ಪಿಬಿ ಹೆಸರು : ಆಂಧ್ರ ಸರ್ಕಾರದಿಂದ ಮಹತ್ವದ ನಿರ್ಧಾರ..!
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel