ದಾಖಲೆಗಳು ದಿಕ್ಕಾಪಾಲು.. `ಬಾಕ್ಸ್ ಆಫೀಸ್ ಸುಲ್ತಾನ’ ಅನ್ನೋದು ಇದಕ್ಕೆ..!
ಬೆಂಗಳೂರು : ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಸುನಾಮಿ ಎಬ್ಬಿಸಿದೆ. ರಾಬರ್ಟ್ ಸಿನಿಮಾದ ಬ್ಯೂಸಿನೆಸ್ ನಲ್ಲಿ ಭಾಗಿಯಾದವರ ಜೇಬು ತುಂಬಿ ತುಳುಕುತ್ತಿದೆ.
ರಾಬರ್ಟ್ ಆರ್ಭಟಕ್ಕೆ ಈ ಹಿಂದಿನ ದಾಖಲೆಗಳೆಲ್ಲಾ ದಿಕ್ಕಾಪಾಲಾಗಿದ್ದು, ದರ್ಶನ್ ಇಂದಿಗೂ ಎಂದಿಗೂ ಬಾಕ್ಸ್ ಆಫೀಸ್ ಸುಲ್ತಾನ ಅನ್ನೋದನ್ನ ರಾಬರ್ಟ್ ಸಿನಿಮಾ ಕಲೆಕ್ಷನ್ ಸಾರಿ ಹೇಳುತ್ತಿದೆ.
ಹೌದು..! ಗುರುವಾರ ತೆರಕಂಡು ಯಶಸ್ವಿ ಪ್ರದರ್ಶನ ಕಾಣುತ್ತಿರುವ ರಾಬರ್ಟ್ ಎರಡನೇ ದಿನವೂ ಗಲ್ಲಾಪೆಟ್ಟಿಗೆ ತುಂಬಿಸಿಕೊಂಡಿದೆ. ಕರ್ನಾಟಕದಲ್ಲಿ ಎರಡನೇ ದಿನ ರಾಬರ್ಟ್ 12 ಕೋಟಿ 78 ಲಕ್ಷ ರೂ. ಹಣ ಗಳಿಸಿ ದಾಖಲೆ ಬರೆದಿದೆ.
ರಾಬರ್ಟ್ ಸಿನಿಮಾ ಬಿಕೆಟಿ ಮತ್ತು ಸೌತ್ ಕೆನರಾದಲ್ಲಿ 5 ಕೋಟಿ, ಎಂಎಂಸಿಎಚ್ ಯಲ್ಲಿ 2 ಕೋಟಿ, ಚಿತ್ರದುರ್ಗ ಮತ್ತು ದಾವಣಗೆರೆಯಲ್ಲಿ 1.5 ಕೋಟಿ, ಶಿವಮೊಗ್ಗದಲ್ಲಿ 78 ಲಕ್ಷ, ಹೈದರಾಬಾದ್ ಕರ್ನಾಟಕದಲ್ಲಿ 2 ಕೋಟಿ, ಬಾಂಬೆ ಕರ್ನಾಟಕದಲ್ಲಿ 1.5 ಕೋಟಿ ಗಳಿಸಿದೆ.
ಮೊದಲ ದಿನ ರಾಬರ್ಟ್ ಸಿನಿಮಾ ಆಂಧ್ರ- ತೆಲಂಗಾಣದಲ್ಲಿ 3.12 ಕೋಟಿ ಗಳಿಕೆ ಮಾಡಿದೆ. ಈ ಮೂಲಕ ಒಟ್ಟು 20.36 ಕೋಟಿ ರೂ. ಗಳಿಕೆ ಮಾಡಿತ್ತು. ಎರಡನೇ ದಿನ 12 ಕೋಟಿ 78 ಲಕ್ಷ ರೂ. ಹಣ ಗಳಿಸಿದ್ದು, ಇಂದು ನಾಳೆ ವಿಕೆಂಡ್ ಆಗಿರುವುದರಿಂದ ರಾಬರ್ಟ್ ಗಲ್ಲಾಪೆಟ್ಟಿಗೆಯಲ್ಲಿ ಮತ್ತಷ್ಟು ಸದ್ದು ಮಾಡುವುದರಲ್ಲಿ ಡೌಟೇ ಇಲ್ಲ.










