ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ನಟ ದರ್ಶನ್ ಜೈಲಿನಲ್ಲಿ ಊಟ ಬಿಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಈಗಾಗಲೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಚಾರ್ಜ್ಶೀಟ್ ಸಲ್ಲಿಕೆ ಮಾಡಲಾಗಿದೆ. ಕೊಲೆ ಆರೋಪದಲ್ಲಿ ಎ2 ಆಗಿರುವ ದರ್ಶನ್ಗೆ ಬಳ್ಳಾರಿ ಜೈಲಿನಲ್ಲಿ ದಿನ ಕಳೆಯುವುದು ಕಷ್ಟವಾಗಿದೆ ಎನ್ನಲಾಗುತ್ತಿದೆ. ಜಾಮೀನು ಸಿಗುವುದು ಕೂಡ ಅಷ್ಟು ಸುಲಭವಲ್ಲ ಎನ್ನಲಾಗುತ್ತಿದ್ದು, ದರ್ಶನ್ ಚಿಂತಾಕ್ರಾಂತರಾಗಿದ್ದಾರೆ ಎನ್ನಲಾಗುತ್ತಿದೆ.
, ಈಗ ಅವರು ನ್ಯಾಯಾಂಗ ಬಂಧನದ ಅವಧಿ ಕೂಡ ವಿಸ್ತರಣೆ ಆಗಿರುವುದರಿಂದ ಬಳ್ಳಾರಿ ಜೈಲಿನಲ್ಲಿ ದರ್ಶನ್ ಊಟ ಬಿಟ್ಟಿದ್ದಾರೆ ಎಂದು ತಿಳಿದು ಬಂದಿದೆ. ರೇಣುಕಾಸ್ವಾಮಿ ಬರ್ಬರ ಹತ್ಯೆ ಪ್ರಕರಣದಲ್ಲಿ ದರ್ಶನ್ ಸೇರಿದಂತೆ ಎಲ್ಲ 17 ಆರೋಪಿಗಳ ನ್ಯಾಯಾಂಗ ಬಂಧನ ವಿಸ್ತರಣೆ ಮಾಡಲಾಗಿದೆ. ಹೀಗಾಗಿ ದರ್ಶನ್ ಗೆ ಚಡಪಡಿಕೆ ಹೆಚ್ಚಾಗಿದೆ.
ಬಳ್ಳಾರಿ ಸೆಂಟ್ರಲ್ ಜೈಲಿನ ಕಟ್ಟುನಿಟ್ಟಿನ ವಾತಾವರಣಕ್ಕೆ ಅವರು ಸೊರಗಿದ್ದಾರೆ. ಸದ್ಯದ ಮಾಹಿತಿಯಂತೆ, ಇಂದು ದರ್ಶನ್ ಊಟ ಮಾಡಿಲ್ಲ ಎನ್ನಲಾಗಿದೆ. ಜಾಮೀನು ಅರ್ಜಿ ಸಲ್ಲಿಕೆ ವಿಚಾರವಾಗಿ ವಕೀಲರ ಜೊತೆ ಅವರು ಚರ್ಚೆ ಮಾಡಿದ್ದಾರೆ.
ಹೈಸೆಕ್ಯೂರಿಟಿ ಸೆಲ್ನಲ್ಲಿ ದರ್ಶನ್ ಚಿಂತಾಕ್ರಾಂತರಾಗಿದ್ದಾರೆ. ವಿಡಿಯೋ ಕಾನ್ಫರೆನ್ಸ್ ಮುಗಿಯುತ್ತಿದ್ದಂತೆಯೇ ಸೆಲ್ನಲ್ಲಿ ಅತ್ತಿಂದಿತ್ತ ದರ್ಶನ್ ಓಡಾಡಿದ್ದಾರೆ.