Darshan Tattoo : ಅಭಿಮಾನಿಗಳ ಟ್ಯಾಟೂ ಹಾಕಿಸಿಕೊಂಡ ದಾಸ..!!
ಸಾಮಾನ್ಯವಾಗಿ ಅಭಿಮಾನಿಗಳು ತಮ್ಮ ನೆಚ್ಚಿನ ಸ್ಟಾರ್ ಸೆಲೆಬ್ರಿಟಿಗಳ ಟ್ಯಾಟೂ ಹಾಕಿಸಿಕೊಳ್ಳೋದನ್ನ ನೊಡಿದ್ದೇವೆ..
ಆದ್ರೀಗ ಕೋಟ್ಯಾಂತರ ಅಭಿಮಾನಿಗಳನ್ನ ಹೊಂದಿರುವ ಕರುನಾಡಿನ ಡಿ ಬಾಸ್ “ ಸೆಲೆಬ್ರಿಟಿಗಳ” ಟ್ಯಾಟೂವನ್ನ ತಮ್ಮ ಎದೆ ಮೇಲೆ ಹಾಕಿಸಿಕೊಂಡಿದ್ದಾರೆ..
ಹೌದು..!!
ಸೆಲೆಬ್ರಿಟಿಗಳ ಟ್ಯಾಟೂ ಅಂದ್ರೆ ಡಿ ಬಾಸ್ ತಮ್ಮ ಅಭಿಮಾನಿಗಳ ಟ್ಯಾಟೂ ಹಾಕಿಸಿಕೊಂಡು ಮತ್ತೆ ಫ್ಯಾನ್ಸ್ ಗಳ ಹೃದಯ ಗೆದ್ದಿದ್ದಾರೆ..
ಅವರು “ ನನ್ನ ಸೆಲೆಬ್ರಿಟಿಗಳು” ಎಂದು ಎದೆ ಮೇಲೆ ಟ್ಯಾಟೂ ಹಾಕಿಸಿಕೊಂಡಿದ್ದು , ಈ ಫೋಟೋ ವಿಡಿಯೋ ಜಾಲತಾಣದಲ್ಲಿ ಸಖತ್ ವೈರಲ್ ಆಗ್ತಿದೆ..
ಅಂದ್ಹಾಗೆ ಇದು ಎಡಿಟೆಡ್ ಫೋಟೋ.. ಅಥವ ತಾತ್ಕಾಲಿಕ ಟ್ಯಾಟೂ ಎಂದು ಹಲವರು ಅನುಮಾನ ವ್ಯಕ್ತಪಡಿಸಿದ್ದರು..
ಆದ್ರೆ ಡಿ ಬಾಸ್ ಇನ್ಸ್ಟಾದಲ್ಲಿ ಟ್ಯಾಟೂ ಹಾಕಿಸಿಕೊಳ್ತಿರುವ ವಿಡಿಯೋ ಹಂಚಿಕೊಂಡಿದ್ದು ಇದು ನಿಜವಾದ ಟ್ಯಾಟೂ ಎಂದು ತೋರಿಸಿದ್ದಾರೆ..
ಅಭಿಮಾನಿಗಳು ದಾಸನ ಪ್ರೀತಿಗೆ ಶರಣಾಗಿದ್ದಾರೆ.. ಈಗಾಗಲೇ ಗೆದ್ದಾಗಿರುವ ಹೃದಯವನ್ನ ಇನ್ನೆಷ್ಟು ಬಾರಿ ಗೆಲ್ಲುತ್ತೀರಾ..?? ಎಂದೆಲ್ಲಾ ಕೇಳುತ್ತಿದ್ದಾರೆ..
ಅಂದ್ಹಾಗೆ ಈ ಹೊತ್ತಲ್ಲೇ ಅಪ್ಪು ಅವರನ್ನೂ ಕೂಡ ಫ್ಯಾನ್ಸ್ ನೆನಪುಮಾಡಿಕೊಳ್ತಿದ್ದಾರೆ..
ಜೇಮ್ಸ್ ಸಿನಿಮಾ ಮುಗಿದ ಕೂಡಲೇ ಪುನೀತ್ ರಾಜ್ ಕುಮಾರ್ ಅಭಿಮಾನಿ ದೇವರುಗಳು ಎಂದು ಟ್ಯಾಟೂ ಹಾಕಿಸಿಕೊಳ್ಬೇಕು ಎಂದಿದ್ದರು ಎಂದು ಈ ಹಿಂದೆ ನಿರ್ದೇಶಕರು ತಿಳಿಸಿದ್ದರು..
ಹೀಗಾಗಿ ಈ ಸಂದರ್ಭದಲ್ಲಿ ಪುನೀತ್ ಅವರನ್ನೂ ನೆನಪುಮಾಡಿಕೊಳ್ಳಲಾಗ್ತಿದೆ..
Darshan Tattoo on his chest of his fans ,photo viral