ದರ್ಶನ್ ರೌಡಿಗಳ ಬೆದರಿಕೆಗೆ ನಾನು ಬಗ್ಗಲ್ಲ : ಇಂದ್ರಜಿತ್
ಬೆಂಗಳೂರು : ನಟ ದರ್ಶನ್ ಹಿಂಬಾಲಕರಿಂದ ಬೆದರಿಕೆ ಕರೆಗಳು ಬರುತ್ತಿರುವುದಾಗಿ ನಿರ್ದೇಶಕ ಇಂದ್ರಜಿತ್ ಲಂಕೇಶ್ ಆರೋಪಿಸಿದ್ದಾರೆ.
ಇಂದು ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಳೆದ 24 ಗಂಟೆಗಳಿಂದ ಫೋನ್ ಕರೆಗಳು ನಿರಂತರವಾಗಿ ಬರುತ್ತಿವೆ.
ಈ ಮೂಲಕ ದರ್ಶನ್ ಹಿಂಬಾಲಕರು ದುರ್ವರ್ತನೆ ತೋರುತ್ತಿದ್ದಾರೆ. 30 ರಿಂದ 35 ಜನರಿಂದ ರಾತ್ರಿ ಹಗಲು ಫೋನ್ ಮಾಡ್ತಿದ್ದಾರೆ. ಬೆದರಿಕೆ ಕರೆಗಳು ಬರುತ್ತಿದೆ ಎಂದು ದೂರಿದ್ದಾರೆ.
ಇನ್ನು ಒಂದು ಮಾಧ್ಯಮದಲ್ಲಿ ನಾವು ಹೇಗೆ ಕೆಲಸ ಮಾಡಿದ್ದಾರೆ ಅನ್ನೋದು ಎಲ್ಲರಿಗೂ ತಿಳಿದಿದೆ. ಅದೇ 30 ಜನ ಪದೇಪದೇ ಫೋನ್ ಮಾಡುತ್ತಾರೆ.
ಹೀಗಾಗಿ ನಂಬರ್ ಸಮೇತ ಸೈಬರ್ ಕ್ರೈಂಗೆ ದೂರು ನೀಡಲು ನಿರ್ಧಾರ ಮಾಡಿದ್ದೇವೆ. ನಟ ದರ್ಶನ್ ಹಿಂದೆ ರೌಡಿಗಳಿದ್ದಾರೆ. ಈ ಬೆದರಿಕೆಗಳಿಗೆ ನಾನು ಬಗ್ಗಲ್ಲ ಎಂದು ಹೇಳಿದರು.
30 ಸೆಕೆಂಡಿಗೊಮ್ಮೆ ದರ್ಶನ್ ಹಿಂಬಾಲಕರಿಂದ ಕರೆಗಳು ಬರುತ್ತಿವೆ. ವಾಟ್ಸಪ್ ಮೂಲಕ ಅಶ್ಲೀಲ ಪೋಸ್ಟರ್ ಗಳು ಬರುತ್ತಿವೆ. ಅಲ್ಲದೆ ಪ್ರಸಾರ ಮಾಡಲು ಯೋಗ್ಯವಲ್ಲದ ಪದಗಳು ಬರುತ್ತಿವೆ ಎಂದು ಇಂದ್ರಜಿತ್ ಆರೋಪಿಸಿದ್ದಾರೆ.









