ವಂಚನೆ ಪ್ರಕರಣ : ದರ್ಶನ್ ಪರ ನಿಂತ ಸಂಸದೆ ಸುಮಲತಾ
ಬೆಂಗಳೂರು: ಸ್ಯಾಂಡವುಡ್ ನಲ್ಲಿ ಸಂಚನಲ ಸೃಷ್ಟಿ ಮಾಡಿರುವ 25 ಕೋಟಿ ರೂಪಾಯಿ ವಂಚನೆ ಪ್ರಕರಣದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್, ನಿರ್ಮಾಪಕ ಉಮಾಪತಿ , ಆರೋಪಿ ಅರುಣಕುಮಾರಿ ಸ್ಪೋಟಕ ಮಾಹಿತಿಗಳನ್ನ ಹೊರ ಹಾಕ್ತಲೇ ಇದ್ದು, ಕೆಲ ಆಡಿಯೋಗಳು ರಿಲೀಸ್ ಆಗಿವೆ.. ಪ್ರಕರಣಕ್ಕೆ ಟಿಸ್ಟ್ ಮೇಲೆ ಟ್ವಿಸ್ಟ್ ಸಿಗುತ್ತಿದೆ. ಇದೀಗ ಮಗನಂತೆ ಕಾಣುವ ದರ್ಶನ್ ಪರ ಮಂಡ್ಯ ಸಂಸದೆ ಸುಮಲತಾ ನಿಂತಿದ್ದಾರೆ.
ದರ್ಶನ ಹೆಸರಲ್ಲಿ 25 ಕೋಟಿ ಲೋನ್ ದೋಖಾ ವಿಚಾರಕ್ಕೆ ಸಂಬಂಧಿಸಿದಂತೆ ಸುದ್ದಿಗಾರರೊಂದಿಗೆ ಮಾತನಾಡಿದ ಸುಮಲತಾ, ಕಳೆದ ವಾರ ದರ್ಶನ್ ನಮ್ಮ ಮನೆಗೆ ಬಂದಿದ್ದರು. ಈ ವಿಚಾರವನ್ನು ನನ್ನ ಗಮನಕ್ಕೆ ತಂದಿದ್ದರು. ಯಾರೋ ಮೋಸ ಮಾಡ್ತಿದ್ದಾರೆ ಅಂತ ನನಗೆ ಹೇಳಿದ್ರು. ಮೋಸ ನಡೆದಿದ್ದರೆ ಖಂಡಿತ ನ್ಯಾಯ ಸಿಗಬೇಕು ಎಂದಿದ್ದಾರೆ. ಅಲ್ಲದೇ ನ್ಯಾಯ ದರ್ಶನ್ ಪರ ಇದೆ. ನಾನು ದರ್ಶನ್ ಪರವೇ ಇರುತ್ತೇನೆ. ಉಮಾಪತಿ ಯಾರು ಅಂತ ನನಗೆ ಗೊತ್ತಿಲ್ಲ. ನಾನು ಯಾವತ್ತು ಅವ್ರನ್ನ ಮೀಟ್ ಮಾಡಿಲ್ಲ. ಅ ಬಗ್ಗೆ ನಾನು ಮಾತಾಡೋಕೆ ಇಷ್ಟ ಪಡಲ್ಲ. ಪ್ರಕರಣದ ಸಂಪೂರ್ಣ ವಿವರ ದರ್ಶನ್ ಹೇಳಿರಲಿಲ್ಲ. ಆದರೆ ಮೋಸ ಆಗಿದೆ ಅಂತ ನನ್ನ ಬಳಿ ಹೇಳಿದ್ರು ಎಂದು ತಿಳಿಸಿದ್ದಾರೆ.
ಪ್ರಕರಣದಲ್ಲಿ ನನ್ನನ್ನ ಉಮಾಪತಿ ಬಳಸಿಕೊಂಡಿದ್ದಾರೆ : ಅರುಣಾ ಕುಮಾರಿ
ಈ ಹಿಂದೆ ದರ್ಶನ್ ಪ್ರಕರಣದ ಬಗ್ಗೆ ಮಾಹಿತಿ ನೀಡಿ, ಏಪ್ರಿಲ್ 9ರಂದು ನಿರ್ಮಾಪಕ ಉಮಾಪತಿ ಕರೆ ಮಾಡಿ, ಹರ್ಷ ಮೇಲಂಟಾ ಬ್ಯಾಂಕ್ ಲೋನ್ ಗೆ ಅಪ್ಲೈ ಮಾಡಿದ್ದಾರೆ. ನಿಮ್ಮ ಆಸ್ತಿ ದಾಖಲೆಗಳ ಶ್ಯೂರಿಟಿ ಕೊಟ್ಟಿದ್ದಾರೆ ಅಂತ ತಿಳಿಸಿದ್ರು. ಒಂದಲ್ಲ, ಎರಡಲ್ಲ 25 ಕೋಟಿ ರೂ. ವ್ಯವಹಾರ ಅನ್ನುತ್ತಿದ್ದಂತೆಯೇ ನಾನು ಅಲರ್ಟ್ ಆದೆ. ನಾವೆಲ್ಲರೂ ಸ್ನೇಹಿತರು. ಯಾರ ಮೇಲೆ ಅನುಮಾನ ಪಡಬೇಕು ಅಂತಾನೇ ಗೊತ್ತಾಗುತ್ತಿಲ್ಲ ಎಂದು ಹೇಳಿದ್ದರು. ನಿರ್ಮಾಪಕ ಉಮಾಪತಿ ನಡೆಯ ಬಗ್ಗೆ ದರ್ಶನ್ ಅನುಮಾನ ವ್ಯಕ್ತಪಡಿಸಿದ್ರು. ಅದಕ್ಕೆ ಪೂರಕವಾದ ಒಂದಷ್ಟು ವಾಟ್ಸಪ್ ಚಾಟ್ ಸ್ಕ್ರೀನ್ ಶಾಟ್, ಹರ್ಷ ಮೇಲಂಟಾ ಅವರೊಂದಿಗೆ ಅರುಣಾ ಕುಮಾರಿ ಮಾತನಾಡಿರುವ ಫೋನ್ ಕಾಲ್ ಆಡಿಯೋ, ಅರುಣಾಕುಮಾರಿ ಕಳುಹಿಸಿರುವ ತಮಗೆ ಕಳುಹಿಸಿದ ವಾಯ್ಸ್ ಮೆಸೇಜ್ ಗಳನ್ನು ಮಾಧ್ಯಮಗಳ ಮುಂದೆ ಬಹಿರಂಗಪಡಿಸಿದ್ದರು.
ಒಟ್ಟಾರೆ ಪ್ರಕರಣಕ್ಕೆ ಹಲವು ಟ್ವಿಸ್ಟ್ ಗಳು ಸಸಿಗುತ್ತಲೇ ಇದ್ದು, ಉಮಾಪತಿ ಅವರ ಮೇಲೆ ಸಾಕಷ್ಟು ಅನುಮಾನಗಳು ಮೂಡುವಂತಹ ಚಾಟ್ ಗಳು ಹಾಗೂ ಆಡಿಯೋಗಳು ಸಹ ಬಹಿರಂಗವಾಗಿದೆ.. ಮತ್ತೊಂದೆಡೆ ದಾಸನ ಹೆಸರಲ್ಲಿ ವಂಚಿಸಿರುವುದು ಡಿ ಬಾಸ್ ಅಭಿಮಾನಿಗಳನ್ನೂ ಕೆರಳಿಸಿದೆ.
ನನ್ನ ಹಣೆಬರಹ ಯಾರೂ ಕಿತ್ಕೊಳೋಕಾಗೊಲ್ಲ : ಉಮಾಪತಿ