ವಂಚನೆ ಪ್ರಕರಣ – ಆರೋಪಿ ಮಹಿಳೆ ಜೊತೆ ಉಮಾಪತಿ ನಿರಂತರ ಚಾಟ್..?
ದರ್ಶನ್ ಹೆಸರಲ್ಲಿ 25 ಕೋಟಿ ರೂಪಾಯಿ ವಂಚನೆ ಪ್ರಕರಣ ಸಂಬಂಧ ಉಮಾಪತಿ ಹಾಗೂ ಹಾಗೂ ಡಿ ಬಾಸ್ ಪ್ರತ್ಯೇಕವಾಗಿ ಸುದ್ದಿಗೋಷ್ಠಿ ನಡೆಸಿ ತಮ್ಮ ತಮ್ಮ ಸ್ಪಷ್ಟನೆಗಳನ್ನ ನೀಡಿದ್ದಾರೆ. ಭಿನ್ನವಾದ ಹೇಳಿಕೆಗಳನ್ನ ನೀಡದ್ದಾರೆ. ದರ್ಶನ್ ಅವರು ವಂಚನೆ ಮಾಡಿರೋರೂ ಯಾರೇ ಇದ್ರು ಬಿಡುವುದಿಲ್ಲ ಎಂದು ಗುಡುಗಿದ್ದಾರೆ… ಮತ್ತೊಂದೆಡೆ ದರ್ಶನ್ ಹೆಸರಲ್ಲಿ ವಂಚನೆ ನಡೆದಿರೋದು ಡಿ ಬಾಸ್ ಅಭಿಮಾನಿಗಳನ್ನ ಕೆರಳಿಸಿದೆ.
ಈ ಪ್ರಕರಣ ಸಂಬಂಧ ಸ್ಪೋಟಕ ಮಾಹಿತಿ ಲಭ್ಯವಾಗಿದ್ದು, ಆರೋಪಿ ಮಹಿಳೆ ಅರುಣಾಕುಮಾರಿ ಎಪ್ರಿಲ್ 8 ರಿಂದ ನಿರ್ಮಾಪಕ ಉಮಾಪತಿಗೆ ಚಾಟ್ ಮಾಡಿದ್ದಾರೆ ಎನ್ನಲಾಗಿದೆ. ಉಮಾಪತಿ ದರ್ಶನ್ ರ ಆಧಾರ್ ಕಾರ್ಡ್, ಅಡ್ರಸ್ ಗಳನ್ನ ವಾಟ್ಸಾಪ್ನಲ್ಲಿ ಶೇರ್ ಮಾಡಿರುವ ಬಗ್ಗೆ ತಿಇಳಿದುಬಂದಿದೆ..
ನಂತರ ವಂಚಿವಸುವ ಬಗ್ಗೆಯೂ ಅರುಣಾಕುಮಾರಿಯೊಟ್ಟಿಗೆ ವಾಟ್ಸಾಪ್ ನಲ್ಲಿ ಚಾಟಿಂಗ್ ಮಾಡಿದ್ದಾರೆ ಎನ್ನಲಾಗ್ತಿದೆ. ಸಿನಿಮಾ ಶೂಟಿಂಗ್ಗಾಗಿ ವಿದೇಶಕ್ಕೆ ತೆರಳಲು ನಿರ್ಮಾಪಕರಿಗೆ ದರ್ಶನ್ ಆಧಾರ್ ಡಾಕ್ಯುಮೆಂಟ್ ನೀಡಿದ್ದರು ಎನ್ನಲಾಗಿದೆ. ಇದೀಗ ದರ್ಶನ್ ನೀಡಿದ್ದ ಡಾಕ್ಯುಮೆಂಟ್ಗಳನ್ನ ದುರ್ಬಳಕೆ ಮಾಡಿಕೊಂಡ್ರಾ ಎನ್ನುವ ಅನುಮಾನಗಳು ವ್ಯಕ್ತವಾಗ್ತಿದೆ.
ಅದು ಅಲ್ಲದೇ ವಾಟ್ಸ್ಪ್ ಚಾಟ್, ನಿರ್ಮಾಪಕ ಉಮಾಪತಿಯೊಂದಿಗೆ ಮಾತ್ನಾಡಿದ್ದಾರೆ ಎನ್ನಾಲಾದ ಆಡಿಯೋ ಬಹಿರಂಗವಾಗಿದೆ. ಸದ್ಯ ಹೆಬ್ಬಾಳ ಸ್ಟೇಷನ್ನಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. ಈ ನಡುವೆ ದರ್ಶನ್ ಸುದ್ದಿಗೋಷ್ಟಿ ನಡೆಸಿ ಉಮಾಪತಿ ಬಗ್ಗೆ ಮಾಹಿತಿ ನೀಡಿದ್ದು, ಪ್ರಕರಣದ ಬಗ್ಗೆ ವಿವರಣೆ ನೀಡಲು ಎರಡು ದಿನಗಳ ಡೆಡ್ಲೈನ್ ನೀಡಿದ್ದಾರೆ.