ಸಡನ್ ಆಗಿ ಪೊಲೀಸ್ ಠಾಣೆಗೆ ಭೇಟಿ ನೀಡಿದ್ಯಾಕೆ ಡಿ ಬಾಸ್..?
ಮೈಸೂರು : ನಟ ದರ್ಶನ್ ಹೆಸರಲ್ಲಿ ನಕಲಿ ದಾಖಲೆ ಸೃಷ್ಠಿಸಿ 25 ಕೋಟಿ ರೂ. ಸಾಲ ಪಡೆದು ವಂಚನೆಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಮೈಸೂರು ಎಸಿಪಿಗೆ ಕಚೇರಿಗೆ ದರ್ಶನ್ ಆಗಮಿಸಿದ್ದರು. ಈ ವೇಳೆ ಪೊಲೀಸ್ ಅಧಿಕಾರಿಗಳಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಹಿತಿ ನೀಡಿದ್ದಾರೆ.
ಈ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದೊಂದು ಸಣ್ಣ ವಿಚಾರ, ಬ್ಲಾಕ್ ಮೇಲ್ ಅಲ್ಲ. ನಮ್ಮದೊಂದು ಡಾಕ್ಯುಮೆಂಟ್ ಪೋರ್ಜರಿ ಆಗಿದೆ. ಪೊಲೀಸರಿಗೆ ಮಾಹಿತಿ ನೀಡಲಾಗಿದೆ ಎಂದು ಸ್ಪಷ್ಟಪಡಿಸಿದರು.
ಅಲ್ಲದೆ ನೀವೇ ಎಲ್ಲ ಊಹಾಪೋಹ ಮಾಡಬೇಡಿ. ಪೊಲೀಸರಿಗೆ ತನಿಖೆ ಮಾಡಲಿ. ನಾನೊಂದು ಹೇಳುವುದು, ಅದು ಬೇರೆಯಾಗಿ ತಪ್ಪಾಗುವುದು ಬೇಡ ಎಂದು ಮನವಿ ಮಾಡಿಕೊಂಡರು.
ಇನ್ನು ನಕಲಿ ಬ್ಯಾಂಕ್ ಮ್ಯಾನೇಜರ್ ನಿರ್ಮಾಪಕ ಉಮಾಪತಿ ಹೆಸರು ಹೇಳಿದ್ದಾರೆ ಎನ್ನಲಾಗುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ದಚ್ಚು, ಉಮಾಪತಿ ನಾವೆಲ್ಲರೂ ಚೆನ್ನಾಗಿದ್ದೇವೆ. ಕಳೆದ ತಿಂಗಳು ನಡೆದ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಬಾಯಿ ಬಿಡಿಸುತ್ತಾರೆ. ನಮಗೆ ಇದೊಂದು ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ. ಇದರ ಹೊರತಾಗಿ ನನಗೇನೂ ಗೊತ್ತಿಲ್ಲ. ತನಿಖೆ ಬಳಿಕ ಸತ್ಯಾಂಶ ಹೊರ ಬರಲಿದೆ ಎಂದು ತಿಳಿಸಿದ್ದಾರೆ.