Darshan
ರಾಜರಾಜೇಶ್ವರಿ ನಗರ ಉಪಚುನಾವಣೆಗೆ ಮುಂಜಾನೆಯಿಂದಲೇ ಬಿರಿಸಿನಿಂದ ಮತದಾನ ನಡೆಯುತ್ತಿದೆ. ಜನರು ಹುಮ್ಮಸ್ಸಿನಿಂದ ಮತಗಟ್ಟೆಗಳತ್ತ ಬಂದು ಮತ ಚಲಾಯಿಸುತ್ತಿದ್ದಾರೆ. ತಾರಯರು ರಾಜಕಾರಣಿಗಳು ಸಹ ತಮ್ಮ ಹಕ್ಕನ್ನ ಚಲಾವಣೆ ಮಾಡಿದ್ದಾರೆ. ಅದರಂತೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಆರ್ ಆರ್ ನಗರದ ಮೌಂಟ್ ಕಾರ್ಮೆಲ್ ಮತಗಟ್ಟೆಯಲ್ಲಿ ಮತದಾನ ಮಾಡಿದ್ದಾರೆ. ಮಧ್ಯಾಹ್ನದ ವೇಳೆ ಮತಗಟ್ಟೆ ಬಳಿ ಬಂದ ದರ್ಶನ್ ಅವರು, ತಮ್ಮ ಹಕ್ಕು ಚಲಾಯಿಸಿದರು.
ಆರ್ ಆರ್ ನಗರ ವಿಧಾನಸಭೆ ಕ್ಷೇತ್ರದಲ್ಲಿರುವ ತಾರೆಯರು ಇಂದು ಬೆಳಗ್ಗೆಯಿಂದಲೂ ಮತ ಚಲಾವಣೆ ಮಾಡಿದ್ದಾರೆ. ನಟಿ ಅಮೂಲ್ಯ ಅವರು ಪತಿ ಹಾಗೂ ಅತ್ತೆ – ಮಾವನ ಜೊತೆಗೆ ಬಂದು ಮತ ಹಾಕಿದ್ರೆ, ನೆನಪಿರಲಿ ಪ್ರೇಮ್ ಹಾಗೂ ಪತ್ನಿ ಸಹ ಮತಗಟ್ಟೆಯತ್ತ ಧಾವಿಸಿ ಹಕ್ಕು ಚಲಾಯಸಿದ್ರು. ಇತ್ತ ಅವಿನಾಶ್, ಕಾರುಣ್ಯ ರಾಮ್ ಹಾಗೂ ಸಹೋದರಿ ಸಹ ಮತದಾನ ಮಾಡಿದರು.
RR ನಗರದಲ್ಲಿ ಮತದಾನ ಮಾಡಿ ಹಕ್ಕು ಚಲಾಯಿಸಿದ ನಟಿ ಅಮೂಲ್ಯ..!
ಒಂದೇ ವಿಷಯ, ಕನ್ನಡದಲ್ಲಿ 2 ಸಿನಿಮಾ ಅನೌನ್ಸ್ : ಯಾವ ಸ್ಟಾರ್ ನಟರ ಸಿನಿಮಾಗಳು..?
ಈ ಬಾರಿಯ ಚುನಾವಣಾ ಫಲಿತಾಂಶದ ಮೇಲೆ ದರ್ಶನ್ ಅಭಿಮಾನಿಗಳು ಚಿತ್ತವೂ ಇದೆ. ಯಾಕಂದ್ರೆ ಈ ಬಾರಿ ಬಿಜೆಪಿ ಅಭ್ಯರ್ಥಿ ಮುನಿರತ್ನ ಪರ ಖುದ್ದು ಡಿ ಬಾಸ್ ಪ್ರಚಾರ ಅಖಾಡಕ್ಕೆ ಇಳಿದು ಭರ್ಜರಿ ಮತಬೇಟೆ ನಡೆಸಿದ್ರು. ರೋಡ್ ಶೋ ಮೂಲಕ ಮತಯಾಚನೆ ಮಾಡಿದ್ರು. ಪ್ರಚಾರದ ವೇಳೆ ನಟಿ ಹಾಗೂ ಬಿಜೆಪಿ ಕಾರ್ಯಯಕರ್ತೆ ಅಮೂಲ್ಯ ಸಹ ಡಿ ಬಾಸ್ ಗೆ ಸಾಥ್ ನೀಡಿದ್ದರು.
Darshan
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel