ಚಿತ್ರದುರ್ಗ: ಜೈಲಿನಲ್ಲಿ ನಟ ದರ್ಶನ್ ಐಷಾರಾಮಿ ಬದುಕು ನಡೆಸುತ್ತಾರೆಂಬ ಸುದ್ದಿಗೆ ಪುಷ್ಠಿ ಸಿಕ್ಕಿದ್ದು, ಸಾಮಾಜಿಕ ಜಾಲತಾಣದಲ್ಲಿ ಫೋಟೋವೊಂದು ವೈರಲ್ ಆಗಿದೆ. ಈ ಸುದ್ದಿ ಕೇಳಿ ಕೊಲೆಯಾಗಿರುವ ರೇಣುಕಾಸ್ವಾಮಿ ತಂದೆ ಕಣ್ಣೀರು ಸುರಿಸಿದ್ದಾರೆ.
ನಾವಿಲ್ಲ ಮಗನನ್ನು ಕಳೆದುಕೊಂಡು ನೋವು, ಸಂಕಟ ಪಡುತ್ತಿದ್ದೇವೆ. ಆದರೆ, ದರ್ಶನ್ ಗೆ ಆ ಭಾವನೆಯೇ ಇದ್ದಂತೆ ಇಲ್ಲ. ಅವರೇನು ಜೈಲಿನಲ್ಲಿದ್ದಾರೋ ರೆಸಾರ್ಟ್ ನಲ್ಲಿ ಇದ್ದಾರೋ ಅನ್ನಿಸುತ್ತಿದೆ. ದರ್ಶನ್ (Drshan) ಸಾಮಾನ್ಯ ಕೈದಿಯಂತೆಯೇ ಇರಬೇಕು. ರೆಸಾರ್ಟ್ ನಲ್ಲಿ ಕುಳಿತಂತೆ ನಟ ದರ್ಶನ್ ಕುಳಿತಿರುವುದು ಕಂಡು ಗಾಬರಿ ಆಗಿದೆ. ಈ ಪ್ರಕರಣವನ್ನು ಸಿಬಿಐ (CBI) ತನಿಖೆಗೆ ವಹಿಸಬೇಕು ಎಂದು ಮನವಿ ಮಾಡಿದ್ದಾರೆ.
ಜೈಲಿನಲ್ಲಿ ಸಾಮಾನ್ಯ ಕೈದಿಯಂತೆ ನಟ ದರ್ಶನ್ ಸಹ ಇರಬೇಕು. ಆದರೆ, ರೆಸಾರ್ಟ್ ನಲ್ಲಿ ಕುಳಿತಂತೆ ನಟ ದರ್ಶನ್ ಕುಳಿತಿರುವುದು ಕಂಡು ಗಾಬರಿ ಆಯಿತು. ಪೊಲೀಸ್ ತನಿಖೆ, ನ್ಯಾಯಾಂಗ ಬಗ್ಗೆ ನಮಗೆ ಇನ್ನೂ ನಂಬಿಕೆ ಇದೆ. ಒಟ್ಟಿನಲ್ಲಿ ತಪ್ಪಿತಸ್ಥರಿಗೆ ತಕ್ಕ ಶಿಕ್ಷೆ ಆಗಬೇಕು. ಸಿಎಂ (Siddaramaiah), ಗೃಹ ಮಂತ್ರಿಗಳು ಈ ಕುರಿತು ಗಮನ ಹರಿಬಸೇಕು ಎಂದು ಭಾವುಕರಾಗಿ ಹೇಳಿದ್ದಾರೆ.
ನಮಗಿಲ್ಲಿ ನೋವು, ಸಂಕಟ ಆಗ್ತಿದೆ. ತಪ್ಪು ಮಾಡಿದ ಭಾವನೆ ದರ್ಶನ್‌ಗೆ ಇದ್ದಂತೆ ಕಾಣುತ್ತಿಲ್ಲ. ಆರೋಪಿಗಳು ಜೈಲಿನಲ್ಲಿ ಎಂಜಾಯ್ ಮಾಡುತ್ತಿದ್ದಾರೆ. ಸರಿಯಾದ ತನಿಖೆ ಮಾಡಿ ಸೂಕ್ತ ಕ್ರಮ ಕೈಗೊಳ್ಳಬೇಕು. ಹೀಗಾದರೆ ಸಿಬಿಐ ತನಿಖೆಗೆ ವಹಸಿಬೇಕೆಂದು ಅನಿಸುತ್ತದೆ. ಇಲ್ಲಿಯವರೆಗೆ ಉತ್ತಮ ರೀತಿಯಲ್ಲಿ ತನಿಖೆ ನಡೆದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.








