Dasara 2022 – ಬಂಪರ್ ಆಫರ್ ಘೋಷಿಸಿದ KSRTC
ದಸರಾ ದರ್ಶನಕ್ಕಾಗಿ ಪ್ಯಾಕೇಜ್ ಟೂರ್
ನವರಾತ್ರಿಯ ಒಂದು ದಿನ ಪ್ರವಾಸ ಪ್ಯಾಕೇಜ್
ಪ್ಯಾಕೇಜ್ ನಲ್ಲಿ 9 ಪ್ರಮುಖ ದೇಗುಲ ದರ್ಶನ
ವಿಭಾಗೀಯ ನಿಯಂತ್ರಣಾಧಿಕಾರಿ ರಾಜೇಶ್ ಶೆಟ್ಟಿ ಮಾಹಿತಿ
ಬೆಂಗಳೂರು : ಇಂದಿನಿಂದ ನವರಾತ್ರಿ ಆರಂಭವಾಗಿದ್ದು, ಕೆಎಸ್ ಆರ್ ಟಿಸಿ ಬಂಪರ್ ಆಫರ್ ಘೋಷಿಸಿದೆ.
ಪ್ರವಾಸಿಗರು ಮತ್ತು ಭಕ್ತರ ಅನುಕೂಲಕ್ಕಾಗಿ ಕೆಎಸ್ ಆರ್ ಟಿಸಿ ಇದೇ ಮೊದಲ ಬಾರಿಗೆ ವಿಶೇಷ ಪ್ಯಾಕೇಜ್ ಪರಿಚಯಿಸಿದೆ.
ಮಂಗಳೂರು ವಿಭಾಗವು ಮಂಗಳೂರು ದಸರಾ ದರ್ಶನಕ್ಕಾಗಿ ವಿಶೇಷ ಟೂರ್ ಪ್ಯಾಕೇಜ್ ಅನ್ನು ಆಯೋಜಿಸಿದೆ.
ಸೆಪ್ಟೆಂಬರ್ 26 ರಿಂದ ಅಕ್ಟೊಬರ್ 5 ರವರೆಗೆ ನವರಾತ್ರಿ ಹಬ್ಬದ ಎಲ್ಲಾ ದಿನಗಳಲ್ಲಿ ಒಂದು ದಿನದ ಪ್ರವಾಸ ಪ್ಯಾಕೇಜ್ ಘೋಷಿಸಿದೆ.

ಈ ಬಗ್ಗೆ ವಿಭಾಗೀಯ ನಿಯಂತ್ರಣಾಧಿಕಾರಿ ರಾಜೇಶ್ ಶೆಟ್ಟಿ ಮಾಹಿತಿ ನೀಡಿದ್ದು, ಪ್ರವಾಸಿಗರು ಮತ್ತು ಯಾತ್ರಾರ್ಥಿಗಳು ಟಿಕೆಟ್ ಕಾಯ್ದಿರಿಸಿ ನವರಾತ್ರಿಯ ಸಮಯದಲ್ಲಿ ಕರಾವಳಿ ಜಿಲ್ಲೆಯ ಪ್ರಮುಖ ದೇವಾಲಯಗಳಿಗೆ ಭೇಟಿ ನೀಡಬಹುದಾಗಿದೆ.
ಪ್ಯಾಕೇಜ್ ನಲ್ಲಿ ಮಂಗಳಾದೇವಿ ದೇವಸ್ಥಾನ, ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನ, ಗುರುಪುರದ ಸುಂಕದಕಟ್ಟೆ ಶ್ರೀ ಅಂಬಿಕಾ ಅನ್ನಪೂರ್ಣೇಶ್ವರಿ ದೇವಸ್ಥಾನ, ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಶ್ರೀ ಭಗವತಿ ದೇವಸ್ಥಾನ ಮತ್ತು ಕಡಲತೀರಗಳಿಗೆ ಭೇಟಿ ನೀಡಬಹುದು.








