ಐಪಿಎಲ್ ಮೆಗಾ ಹರಾಜಿಗೆ ಮುಹೂರ್ತ ಫಿಕ್ಸ್..! IPL mega auction saaksha tv
ಕ್ರಿಕೆಟ್ ಅಭಿಮಾನಿಗಳು ಅತ್ಯಂತ ಕಾತರದಿಂದ ಎದುರು ನೋಡುತ್ತಿರುವ ಇಂಡಿಯಲ್ ಪ್ರಿಮಿಯರ್ ಲೀಗ್ ನ ಮೆಗಾ ಹರಾಜು ಪ್ರಕ್ರಿಯೆಗೆ ಮುಹೂರ್ತ ಫಿಕ್ಸ್ ಆಗಿದೆ. ಐಪಿಎಲ್ 15ನೇ ಆವೃತ್ತಿಗಾಗಿ ಮುಂದಿನ ವರ್ಷ ಫೆಬ್ರವರಿಯಲ್ಲಿ ಮೆಗಾ ಹರಾಜು ನಡೆಯಲಿದೆ ಎಂದು ವರದಿಯಾಗಿದೆ.
ಈ ಬಾರಿಯ ಮೆಗಾ ಹರಾಜು ಪ್ರಕ್ರಿಯೆ ಮುಂಬೈನಲ್ಲಿ ಅಲ್ಲದೇ ದಕ್ಷಿಣ ಭಾರತದ ಬೆಂಗಳೂರು, ಹೈದರಾಬಾದ್ ನಗರಗಳಲ್ಲಿ ನಡೆಸಲು ಬಿಸಿಸಿಐ ಚಿಂತನೆ ನಡೆಸಿದೆ ಎಂದು ತಿಳಿದು ಬಂದಿದೆ.
ಈ ಮೊದಲು ಐಪಿಎಲ್ ಹರಾಜನ್ನ ಜನವರಿಯಲ್ಲಿ ನಡೆಸಲು ಬಿಸಿಸಿಐ ನಿರ್ಧರಿಸಿತ್ತು. ಆದ್ರೆ ಅಹಮದಾಬಾದ್ ಪ್ರಾಂಚೈಸಿಗೆ ಸಂಬಂಧಿಸಿದ ಸಮಸ್ಯೆಗಳು ಪರಿಹಾರ ಆಗದ ಕಾರಣ ಹರಾಜನ್ನ ಮುಂದೂಡಲಾಗಿದೆ.
ಇದು ಹೀಗಿದ್ದರೇ 15 ನೇ ಆವೃತ್ತಿಯ ಇಂಡಿಯಲ್ ಪ್ರಿಮಿಯರ್ ಲೀಗ್ ಈ ಮೊದಲಿಗಿಂತಲೂ ರಸವತ್ತಾಗಿರಲಿದೆ. ಇದಕ್ಕೆ ಕಾರಣ ಈ ಬಾರಿ ಐಪಿ ಎಲ್ ಅಖಾಡಕ್ಕೆ ಹೊಸ ಎರಡು ತಂಡಗಳು ಧುಮುಕಳಿವೆ.
ಸದ್ಯ ಮೆಗಾ ಹರಾಜಿಗಾಗಿ ಐಪಿಎಲ್ ನ ಎಂಟು ತಂಡಗಳು ಜಾತಕ ಪಕ್ಷಿಗಳಂತೆ ಕಾದುಕುಳಿತಿವೆ. ಈಗಾಗಲೇ ತಮಗೆ ಬೇಕಾದ ಆಟಗಾರರನ್ನು ರಿಟೈನ್ಡ್ ಮಾಡಿಕೊಂಡಿರುವ ಫ್ರಾಂಚೈಸಿಗಳು ಬಲಿಷ್ಠ ತಂಡವನ್ನು ಕಟ್ಟಿ ಪ್ರಶಸ್ತಿ ಗೆಲ್ಲಲು ರಣತಂತ್ರ ರೂಪಿಸುತ್ತಿವೆ. ಹೀಗಾಗಿ ಮೆಗಾ ಹರಾಜಿನಲ್ಲಿ ಸ್ಟಾರ್ ಆಟಗಾರರ ಖರೀದಿಗೆ ತಂಡಗಳು ಮುಗಿಬೀಳಲಿವೆ.
ಇತ್ತ ಹೊಸ ಫ್ರಾಂಚೈಸಿಗಳಾದ ಲಕ್ನೋ ಮತ್ತು ಅಹಮಾದಾಬಾದ್ ತಂಡಗಳು, ಡಿಸೆಂಬರ್ 25ರ ಒಳಗೆ ತಲಾ ಮೂವರು ಆಟಗಾರರನ್ನು ಖರೀದಿಸಬೇಕಿದೆ. ನಾನ್ ರಿಟೈನ್ಡ್ ಆಟಗಾರರಲ್ಲಿ ಈ ಎರಡು ತಂಡಗಳು ಮೂವರನ್ನು ಖರೀದಿಸಿ ಐಪಿಎಲ್ ಸಮಿತಿ ನೀಡಬೇಕಾಗಿದೆ. ಇದಾದ ಬಳಿಕ ಮೆಗಾ ಹರಾಜಿನಲ್ಲಿ ಈ ಫ್ರಾಂಚೈಸಿಗಳು ಭಾಗಿಯಾಗಬಹುದು.
ಒಟ್ಟಾರೆ ಮೆಗಾ ಹರಾಜಿಗೆ ಮುಹೂರ್ತ ಫಿಕ್ಸ್ ಆಗಿದ್ದು, ಯಾವ ಆಟಗಾರ ಯಾವ ತಂಡದ ಪಾಲಾಗುತ್ತಾರೆ. ಈ ಬಾರಿಯ ಮಿಲಿಯನ್ ಡಾಲರ್ ಬೇಬಿ ಯಾರಾಗುತ್ತಾರೆ ಅನ್ನೋ ಕುತೂಹಲ ಎಲ್ಲರಲ್ಲೂ ಮೂಡಿದೆ.









