ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಅಚರಣೆಗೆ ಮುಹೂರ್ತ ಫಿಕ್ಸ್ ಆಗಿದೆ. ಅಕ್ಟೋಬರ್ 17ರ ಬೆಳಿಗ್ಗೆ 7.45ರಿಂದ 8.15ರೊಳಗೆ ದಸರಾ ಉದ್ಘಾಟನೆ ನಡೆಯಲಿದೆ.
https://www.youtube.com/watch?v=GJSVKg3I1YM
ಮೈಸೂರು ದಸರಾ ಆಚರಣೆ ಸಂಬಂಧ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್ ಅಧ್ಯಕ್ಷತೆಯಲ್ಲಿ ನಡೆದ ದಸರಾ ಕಾರ್ಯಕಾರಣಿ ಸಭೆಯಲ್ಲಿ ದಿನಾಂಕ ನಿಗಧಿ ಮಾಡಲಾಗಿದೆ.
ಅಕ್ಟೋಬರ್ 2ರಂದು ಮಧ್ಯಾಹ್ನ 12.18ಕ್ಕೆ ಮೈಸೂರಿನಲ್ಲಿ ಗಜಪಡೆಯನ್ನು ಸ್ವಾಗತಿಸಲಾಗುತ್ತದೆ. ಅ.17ರಂದು ಚಾಮುಂಡಿ ಬೆಟ್ಟದಲ್ಲಿ ದಸರಾ ಉದ್ಘಾಟನೆಗೆ ಐದು ಮಂದಿ ಹೆಸರಿಸಲಾಗಿದೆ. ಉದ್ಘಾಟಕರ ಆಯ್ಕೆಯನ್ನು ಆಯಾ ಇಲಾಖೆಗಳಿಗೆ ಸೂಚಿಸಲಾಗಿದೆ. ಕೊರೊನಾ ವಾರಿಯರ್ಸ್‍ಗಳಿಂದ ಈ ಬಾರಿ ದಸರಾ ಉದ್ಘಾಟನೆಗೆ ಸರ್ಕಾರ ನಿರ್ಧಾರಿಸಿದೆ. ಈ ಹಿನ್ನೆಲೆಯಲ್ಲಿ ಕೊರೊನಾ ವಾರಿಯರ್ಸ್ ಯಾರೆಂದು ಆಯಾ ಇಲಾಖೆಗಳೇ ನಿರ್ಧಾರ ಮಾಡಬೇಕು.
ಕೊರೊನಾ ಆತಂಕ ಇದ್ದರೂ ಈ ಬಾರಿಯೂ ಮೈಸೂರು ಅರಮನೆ ಹಾಗೂ ನಗರಕ್ಕೆ ಪ್ರತಿವರ್ಷದಂತೆ ದೀಪಾಲಂಕಾರ ಇರಲಿದೆ. ಒಂಭತ್ತು ದಿನಗಳ ಕಾರ್ಯಕ್ರಮಗಳು ಇರಲಿದ್ದು, ಯಾವುದೇ ಬದಲಾವಣೆ ಇರುವುದಿಲ್ಲ. ವಿಜಯದಶಮಿ ದಿನದಂದು ನಡೆಯುವ ಜಂಬೂ ಸವಾರಿಯಲ್ಲಿ ಐದು ಆನೆಗಳು ಮಾತ್ರ ಜಂಬೂ ಸವಾರಿ ಮೆರವಣಿಗೆಯಲ್ಲಿ ಭಾಗಿಯಾಗಲಿದ್ದು, ಅಭಿಮನ್ಯು ಆನೆ ಈ ಬಾರಿ ಅಂಬಾರಿ ಹೊರಲಿದ್ದಾನೆ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್ ತಿಳಿಸಿದ್ದಾರೆ.
ದಸರಾ ಮಹೋತ್ಸವದ ಕಾರ್ಯಕ್ರಮಗಳ ಪಟ್ಟಿ…
* ಅಕ್ಟೋಬರ್ 2: ಮಧ್ಯಾಹ್ನ 12.18ಕ್ಕೆ ಗಜಪಡೆಗೆ ಸ್ವಾಗತ
* ಕೊರೊನಾ ವಾರಿಯರ್ಸ್‍ಗಳಿಂದ ದಸರಾ ಉದ್ಘಾಟನೆ, ಐವರ ಹೆಸರು ಶಿಫಾರಸಿಗೆ ಇಲಾಖೆಗಳಿಗೆ ಜವಾಬ್ದಾರಿ
* ಕೊರೊನಾ ವಾರಿಯರ್ಸ್ ಹಾಗೂ ಕೊರೊನಾ ಮೃತದೇಹ ಸಂಸ್ಕಾರ ಮಾಡಿದವರಿಗೆ ಸನ್ಮಾನ
* ಅಕ್ಟೋಬರ್ 17: ಬೆಳಿಗ್ಗೆ 7.45ರಿಂದ 8 ಗಂಟೆಗೆ ದಸರಾ ಉದ್ಘಾಟನೆ, ಚಾಮುಂಡಿ ಬೆಟ್ಟದಲ್ಲಿ ಪೂಜೆ
* ಪ್ರತಿ ವರ್ಷದಂತೆ ಈ ವರ್ಷವೂ ದೀಪಾಲಂಕಾರ ಮಾಡಲಾಗುತ್ತದೆ
* 9 ದಿನಗಳ ಕಾರ್ಯಕ್ರಮಗಳು ಯಥಾಸ್ಥಿತಿ ಇರಲಿದ್ದು, ಯಾವುದೇ ಬದಲಾವಣೆ ಇಲ್ಲ
* ಒಂದೊಂದು ದಿನ ರಾಷ್ಟ್ರೀಯ, ಅಂತಾರಾಷ್ಟ್ರೀಯ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ
* ದಿನಕ್ಕೆ ಒಂದೇ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜನೆಗೆ ನಿರ್ಧಾರ
* ಅರಮನೆ ಆವರಣದೊಳಗೆ ಮಾತ್ರ ಜಂಬೂ ಸವಾರಿ ಮೆರವಣಿಗೆ
* ಐದು ಆನೆಗಳು ಮಾತ್ರ ಜಂಬೂ ಸವಾರಿ ಮೆರವಣಿಗೆಯಲ್ಲಿ ಭಾಗಿ
* ಅಭಿಮನ್ಯು ಆನೆ ಈ ಬಾರಿ ಅಂಬಾರಿ ಹೊರಡಲಿದ್ದು, ಈಗಾಗಲೇ ಟ್ರೇನಿಂಗ್ ಕೊಡಲಾಗುತ್ತಿದೆ
* ಕೇಂದ್ರ ಸರ್ಕಾರದ ಮಾರ್ಗಸೂಚಿಗಳನ್ವಯ ಸೀಮಿತ ಗಣ್ಯರಿಗೆ ಪಾಸ್ ವಿತರಣೆ
* ನಂದಿಧ್ವಜ ಮತ್ತು ಚಾಮುಂಡೇಶ್ವರಿ ಪೂಜೆ ಸಿಎಂ ಬಿಎಸ್‍ವೈ ನೇತೃತ್ವದಲ್ಲಿ ನಡೆಯಲಿದೆ.
* 9 ದಿನಗಳ ಕಾಲ ಚಾಮುಂಡೇಶ್ವರಿ ದೇವಿಗೆ ವಿಶೇಷ ಪೂಜಾ ಕೈಂಕರ್ಯ ನಡೆಯಲಿವೆ
* ನೇರ ಪ್ರಸಾರದ ಮೂಲಕ ಜಂಬೂ ಸವಾರಿ, ಸಾಂಸ್ಕೃತಿಕ ಕಾರ್ಯಕ್ರಮ ವೀಕ್ಷಣೆಗೆ ವ್ಯವಸ್ಥೆ








