ಟೋಕಿಯೋ: ಕೊರೊನಾ ವೈರಸ್ ಭೀತಿಯಿಂದ ಮುಂದೂಲ್ಪಟ್ಟಿರುವ ಟೋಕಿಯೋ ಒಲಿಂಪಿಕ್ಸ್ ಆರಂಭಕ್ಕೆ ಕೊನೆಗೂ ಮುಹೂರ್ತ ಫಿಕ್ಸ್ ಆಗಿದೆ. ಈ ಬಗ್ಗೆ ಮಾಹಿತಿ ನೀಡಿರುವ ಟೋಕಿಯೋ ಒಲಿಂಪಿಕ್ಸ್ ಸಂಘಟನಾಸಮಿತಿಯ ಅಧ್ಯಕ್ಷ ಯೋಶಿರೋ ಮೋರಿ ಮತ್ತು ಸಿಇಒ ಟೋಶಿರೋ ಮೊಟೋ 2021ರ ಜುಲೈ 23ರಿಂದ ಆಗಸ್ಟ್ 8ವರೆಗೆ ಕ್ರೀಡಾಕೂಟ ನಡೆಯಲಿದೆ ಎಂದು ಹೇಳಿದ್ದಾರೆ.
ಈ ಹಿಂದೆ ನಿಗದಿಯಂತೆ ಟೋಕಿಯೋ ಒಲಿಂಪಿಕ್ಸ್ 2020ರ ಜುಲೈ 24ಕ್ಕೆ ಆರಂಭವಾಗಿ ಆಗಸ್ಟ್ 9ಕ್ಕೆ ಮುಕ್ತಾಯವಾಗಬೇಕಿತ್ತು. ಆದರೆ ಕೊರೊನಾ
ಭೀತಿ ಹಬ್ಬಿರುವ ಹಿನ್ನೆಲೆಯಲ್ಲಿ ಕ್ರೀಡಾಕೂಟವನ್ನು ಅನಿವಾರ್ಯವಾಗಿ ಮುಂದೂಡಬೇಕಾಗಿ ಬಂದಿತ್ತು.








