ಪ್ರಿಯಕರನ ಜೊತೆ ಸೇರಿ ತಾಯಿಗೆ ಚಾಕುವಿನಿಂದ ಇರಿದ ಪುತ್ರಿ
ಪ್ರಿಯಕರನ ಜೊತೆ ಸೇರಿದ ಅಪ್ರಾಪ್ತೆ ಮಗಳು ಹೆತ್ತ ತಾಯಿಯನ್ನೇ ಚಾಕುವಿನಿಂದ ಇರಿದು ಪರಾರಿಯಾದ ಘಟನೆ ಧಾರವಾಡದಲ್ಲಿ ನಡೆದಿದೆ. ಕಳೆದ ರಾತ್ರಿ ಪ್ರೇಮಿ ಜೊತೆ ಸೇರಿ ತಾಯಿಗೆ ಇರಿದು ಪರಾರಿಯಾಗಿದ್ದಾಳೆ.
ಮಗಳಿಂದ ಚಾಕು ಇರಿತಕ್ಕೆ ಒಳಗಾದ ತಾಯಿ ಜೀಜಾಬಾಯಿಯನ್ನ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿದ್ದು, ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಕಳೆದ ವರ್ಷ ಇದೇ ಬಾಲಕಿ ವಿಚಾರವಾಗಿ ಪ್ರೇಮಿ ಜೈಲು ಸೇರಿದ್ದನು ಎನ್ನಲಾಗಿದೆ. ಪೋಕ್ಸೊ ಕಾಯ್ದೆ ಅಡಿ ಪರಶುರಾಮ್ ಲಮಾಣಿ ಜೈಲು ಸೇರಿದ್ದರು. ಏಪ್ರಿಲ್ನಲ್ಲಿ ಜಾಮೀನು ಮೇಲೆ ಬಿಡುಗಡೆಯಾಗಿ ಬಂದಿದ್ದನು.
ಅಪ್ರಾಪ್ತೆಯನ್ನು ಸಾಂತ್ವನ ಕೇಂದ್ರದಲ್ಲಿ ಇರಿಸಲಾಗಿತ್ತು. ಮಗಳನ್ನ ಕಾಲೇಜಿಗೆ ಕಳುಹಿಸಲೆಂದು ತಾಯಿ ವಾಪಸ್ ಕರೆ ತಂದಿದ್ದರು. ಇದೇ ವೇಳೆ, ಇಬ್ಬರು ಸೇರಿ ತಾಯಿಗೆ ಚಾಕು ಇರಿದು ಪರಾರಿಯಾಗಿದ್ದಾರೆ. ಧಾರವಾಡ ಉಪನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.








