ವಿಶ್ವ ಅಪ್ಪಂದಿರ ದಿನದಂದು ತಂದೆಯನ್ನು ನೆನೆದು ಭಾವುಕರಾದ ದಿವಂಗತ ಅನಂತ್ ಕುಮಾರ್ ಪುತ್ರಿ
ಬೆಂಗಳೂರು, ಜೂನ್ 21: ದಿವಂಗತ ಮಾಜಿ ಕೇಂದ್ರ ಸಚಿವ ಅನಂತ್ ಕುಮಾರ್ ಅವರ ಪುತ್ರಿ ವಿಜೇತಾ ಅನಂತ್ ಕುಮಾರ್ ಅವರು ವಿಶ್ವ ಅಪ್ಪಂದಿರ ದಿನದಂದು ತಮ್ಮ ತಂದೆಯನ್ನು ನೆನೆದು ಭಾವುಕರಾಗಿದ್ದಾರೆ. ಅವರ ಜೊತೆ ಕಳೆದ ನೆನಪುಗಳನ್ನು ಮೆಲುಕು ಹಾಕಿರುವ ಅನಂತ್ ಕುಮಾರ್ ಪುತ್ರಿ ವಿಜೇತಾ ಅನಂತ್ ಕುಮಾರ್ ತಂದೆಯ ಜೊತೆಗಿನ ಹಳೆಯ ಭಾವಚಿತ್ರಗಳನ್ನು ಹಂಚಿಕೊಂಡಿದ್ದಾರೆ.
ವಿಶ್ವ ಅಪ್ಪಂದಿರ ದಿನದಂದು ತಮ್ಮ ಮುದ್ದಿನ ತಂದೆಯ ಜೊತೆಗಿನ ನೆನಪುಗಳನ್ನು ನೆನೆಯುತ್ತಾ ತಮ್ಮ ಟ್ವಿಟರ್ ನಲ್ಲಿ
ಅಪ್ಪಾ
ನಿಮ್ಮ ಅಭಿವ್ಯಕ್ತಿಗಳು ನನ್ನಲ್ಲಿವೆ ಎಂದು ಎಲ್ಲರೂ ಹೇಳುತ್ತಾರೆ
ಮತ್ತು ಎಲ್ಲವನ್ನೂ ಮತ್ತು ಎಲ್ಲರನ್ನು ನೀವು ನೆನಪಿಡುತ್ತಿದ್ದ ಹಾಗೆ ನಾನು ನೆನಪಿಡುತ್ತೇನೆ ಎಂದು ಹೇಳುತ್ತಾರೆ
ನೀವು ಕೊಟ್ಟಿರುವ ಎಲ್ಲ ನೆನಪುಗಳು ಸದಾ ಹಸಿರಾಗಿವೆ.
ಎಲ್ಲಾ ನೆನಪುಗಳಿಗೆ ಧನ್ಯವಾದಗಳು
ಇಂದು ನಾನು ನಿಮ್ಮನ್ನು ನೆನಪಿಸಿಕೊಳ್ಳುತ್ತಿದ್ದಂತೆ, ನಾನು ನಿಮ್ಮಂತೆ ನಿಸ್ವಾರ್ಥ, ಲೌಕಿಕ, ದೇಶಭಕ್ತಿ ಮತ್ತು ಪ್ರೀತಿಯವಳಾಗಿರಲು ಪ್ರಯತ್ನಿಸುತ್ತೇನೆ ಎಂಬುದನ್ನು ನೀವು ಕೇಳಿಸಿಕೊಂಡರೆ ನಿಮಗೆ ಸಂತೋಷವಾಗುತ್ತದೆ.
ವಿಶ್ವ ಅಪ್ಪಂದಿರ ದಿನಾಚರಣೆಯ ಶುಭಾಶಯಗಳು
ಎಂದು ಟ್ವೀಟ್ ಮಾಡಿ ತಮ್ಮ ಭಾವನೆಗಳನ್ನು ವಿಜೇತಾ ಅನಂತ್ ಕುಮಾರ್ ಹಂಚಿಕೊಂಡಿದ್ದಾರೆ.
ಮಾಜಿ ಕೇಂದ್ರ ಸಚಿವ ಅನಂತ್ ಕುಮಾರ್ ಅವರು ಒಂದೂವರೆ ವರ್ಷಗಳ ಹಿಂದೆ ಕ್ಯಾನ್ಸರ್ ನಿಂದ ನಿಧನರಾಗಿದ್ದರು. ವಿಶ್ವ ಅಪ್ಪಂದಿದ ದಿನದಂದು ಅಪ್ಪನಿಲ್ಲದೆ ಒಂದೂವರೆ ವರ್ಷ ಕಳೆದಿದ್ದನ್ನು ವಿಜೇತಾ ಅನಂತಕುಮಾರ್ ಹೀಗೆ ನೆನಪಿಸಿಕೊಂಡಿದ್ದಾರೆ.