Davanagere : ನೀರು ತುಂಬಿದ ಬಕೆಟ್ ನೊಳಗೆ ಬಿದ್ದು ಮಗು ಸಾವು…
ನೀರು ತುಂಬಿದ ಬಕೆಟ್ ನೊಳಗೆ ಬಿದ್ದು 10 ತಿಂಗಳ ಹೆಣ್ಣು ಮಗು ಸಾವನ್ನಪ್ಪಿರುವ ಧಾರುಣ ಘಟನೆ ದಾವಣಗೆರೆ ಜಿಲ್ಲೆ ಜಗಳೂರು ತಾಲ್ಲೂಕಿನ ಬಿಸ್ತುವಳ್ಳಿಯಲ್ಲಿ ನಡೆದಿದೆ.
ಬಿಸ್ತುವಳ್ಳಿಯಲ್ಲಿ ಗ್ರಾಮದ ಮಂಜುನಾಥ್ ಹಾಗೂ ತಾರ ಎಂಬುವರ ದಂಪತಿಗಳ ಪುತ್ರಿ 10 ತಿಂಗಳ ಅನುಸಾವ್ಯ ಮೃತ ಮಗು ಎನ್ನಲಾಗಿದೆ. ಮನೆ ಮುಂದೆ ಆಟವಾಡುತಿದ್ದಾಗ ನೀರು ತುಂಬಿದ ಬಕೆಟ್ ಬಳಿ ಹೋಗಿ ಮುಗುಚಿ ಬಿದ್ದಿದೆ.
ಮಗು ಉಸಿರುಕಟ್ಟಿ ಸಾವು ಬದುಕಿನ ಮಧ್ಯೆ ಹೋರಾಡುವಾಗ ಪೋಷಕರು ಗಾಬರಿಗೊಂಡು ಮಗುವನ್ನು ಎತ್ತಿ ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಮಗು ಉಸಿರು ನಿಂತಿದೆ. ಪೋಷಕರು ಜಗಳೂರು ಸಾರ್ವಜನಿಕ ಆಸ್ಪತ್ರೆಗೆ ಕರೆತರುವಾಗ ರಸ್ತೆ ಮಾರ್ಗ ಮಧ್ಯೆ ಅಸುನೀಗಿದ್ದಾರೆ.
ಕೇವಲ ಹತ್ತು ತಿಂಗಳ ಮುದ್ದಾದ ಹೆಣ್ಣು ಮಗುವನ್ನ ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. Davanagere: Child dies after falling into bucket full of water…








