Davanagere | ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ಆರೋಪ : ಶಿಕ್ಷಕ ಅಮಾನತು
ದಾವಣಗೆರೆ : ಜಿಲ್ಲೆಯ ಚನ್ನಗಿರಿ ತಾಲೂಕಿನ ಗ್ರಾಮದಲ್ಲಿ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಶಿಕ್ಷಕನಿಗೆ ಪೋಷಕರು ಸಖತ್ ಗೂಸಾ ಕಟ್ಟಿದ್ದಾರೆ.
ಲೋಕೇಶ್ ಹೊದಿಗೆರೆ ಎಂಬ ಸರ್ಕಾರಿ ಶಾಲೆಯ ಶಿಕ್ಷಕ ತರಗತಿ ಮುಗಿದ ನಂತರ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದರಂತೆ.
ಇದನ್ನೆ ಬಾಲಕಿ ತನ್ನ ಪೋಷಕರಿಗೆ ತಿಳಿಸಿದ್ದಾಳೆ. ವಿಷಯ ತಿಳಿದು ಪೋಷಕರು ಶಾಲೆಗೆ ಬಂದ ಶಿಕ್ಷಕನ ಬಟ್ಟೆ ಬಿಚ್ಚಿಸಿ ಹಲ್ಲೆ ನಡೆಸಿದ್ದಾರೆ.
ಸ್ಥಳಕ್ಕೆ ಚನ್ನಗಿರಿ ಬಿಇಒ ಮಂಜುನಾಥ್ ಭೇಟಿ ನೀಡಿ ಘಟನೆ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ.
ಅಲ್ಲದೆ ಶಿಕ್ಷಕ ಲೋಕೇಶ್ ಹೊದಿಗೆರೆ ಅವರನ್ನು ಅಮಾನತು ಮಾಡಿದ್ದಾರೆ.