ಕೆರೆ ನೀರು ಕುಡಿದು ಮೀನು, ಜಾನುವಾರು ಸಾವು – ವಿಷ ಬೆರೆಸಿರುವ ಶಂಕೆ…
ಇತ್ತೀಚೆಗೆ ಭರ್ಜರಿ ಮಳೆಯಾಗಿದ್ದರಿಂದ ದಾವಣಗೆರೆ ಜಿಲ್ಲೆ ಜಗಳೂರು ತಾಲೂಕಿನ ಹಿರೇ ಅರಕೆರೆ ಗ್ರಾಮದ ಕೆರೆ ಭರ್ತಿಯಾಗಿತ್ತು. 125 ಎಕೆರೆ ಪ್ರದೇಶದಲ್ಲಿ ಹರಡಿಕೊಂಡಿರುವ ಕೆರೆ ತುಂಬಿದ್ದರಿಂದ ಸುತ್ತಮುತ್ತಲಿನ ಗ್ರಾಮಸ್ಥರು ಖುಷಿ ಪಟ್ಟಿದ್ದರು. ಆನಂತರ ಕೆರೆಗೆ ಮೂರು ಲಕ್ಷ ಮೀನಿನ ಮರಿಗಳನ್ನ ತಂದು ಹಾಕಲಾಗಿತ್ತು.
ಆದ್ರೆ ಇತ್ತೀಚೆಗೆ ಕೆರೆಯಲ್ಲಿದ್ದ ಮೀನು ಸಾವನ್ನಪ್ಪಿದ್ದು ನೀರಿನಲ್ಲಿ ತೇಲಾಡುತ್ತಿವೆ. ಅಷ್ಟೆ ಅಲ್ಲದೇ ನೀರಿನಲ್ಲಿ ತೇಲಾಡುತ್ತಿದ್ದ ಮೀನುಗಳನ್ನ ತಿಂದು ನಾಯಿಗಳು ಕೂಡ ಸಾವನ್ನಪ್ಪಿವೆ. ಕೆರೆಯ ನೀರು ಕುಡಿದು ಜಾನುವಾರುಳ ಸಹ ಸಾವನ್ನಪ್ಪಿವೆ.
ಬಸವರಾಜ್ ಎಂಬುವವರು ಸಣ್ಣ ನೀರಾವರಿ ಇಲಾಖೆಯಿಂದ ಗುತ್ತಿಗೆ ಪಡೆದು 6 ಲಕ್ಷ ಖರ್ಚು ಮಾಡಿ ಮೂರು ಲಕ್ಷ ಮೀನಿನ ಮರಿಗಳನ್ನ ನೀರಿನಲ್ಲಿ ಬಿಟ್ಟಿದ್ದರು. ಮೀನು ಈ ರೀತಿ ಸಾವನ್ನಪ್ಪುವುದಕ್ಕೆ ದುಷ್ಕರ್ಮಿಗಳು ವಿಷ ಬೆರಸಿರುವ ಶಂಕೆ ವ್ಯಕ್ತವಾಗಿದೆ. ಇದರ ಜೊತೆಗೆ ಜಾನುವಾರುಗಳು ಸಹ ಸಾವನ್ನಪ್ಪಿವೆ.
ಈ ವಿಚಾರ ಗ್ರಾಮಸ್ಥರು ಪಿಡಿಓ ಮತ್ತು ತಾಲೂಕು ಆಡಿಳಿತಕ್ಕೆ ದೂರು ಸಲ್ಲಿಸಿದ್ದಾರೆ. Davangere: Fish, cattle die after drinking lake water – Suspected of mixing poison…