ಮಷಿನ್ ನಂತೆ ರನ್ ಗಳಿಸಲು ಕೊಹ್ಲಿ ರೋಬೋಟ್ ಅಲ್ಲ
ಟೀಂ ಇಂಡಿಯಾದ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ, ಸದ್ಯ ಬ್ಯಾಡ್ ಪಾರ್ಮ್ ನಲ್ಲಿದ್ದಾರೆ. ಸದ್ಯ ಅವರು 30-40 ರನ್ ಗಳಿಸುತ್ತಿದ್ದರೂ ಅವರ ಸಾಮರ್ಥ್ಯಕ್ಕೆ ತಕ್ಕಂತೆ ಆಟವಾಡುತ್ತಿಲ್ಲ ಎಂಬುದು ತಿಳಿದಿರುವ ವಿಚಾರ.
ಒಂದು ಕಾಲದಲ್ಲಿ ರನ್ ಗಳನ್ನ ನದಿಯಂತೆ ಹರಿಸುತ್ತಿದ್ದ ವಿರಾಟ್, ಸೆಂಚೂರಿಗಳ ಮೇಲೆ ಸೆಂಚೂರಿಗಳನ್ನು ಸಿಡಿಸಿ ದಾಖಲೆ ಬರೆದಿದ್ದರು. ಪ್ರತಿ ಪಂದ್ಯದಲ್ಲೂ ಒಂದಲ್ಲಾ ಒಂದು ಸಾಧನೆ ಮಾಡುತ್ತಿದ್ದರು.
ಆದ್ರೆ ಕಳೆದ ಎರಡು ವರ್ಷಗಳಿಂದ ವಿರಾಟ್ ಬ್ಯಾಟ್ ಸದ್ದು ಮಾಡಿದ್ದೇ ಕಡಿಮೆ. ಟೆಸ್ಟ್, ಏಕದಿನ, ಟಿ 20, ಐಪಿಎಲ್ ಹೀಗೆ ಎಲ್ಲಾ ಮಾದರಿಯ ಕ್ರಿಕೆಟ್ ನಲ್ಲಿ ವಿರಾಟ್ ಬ್ಯಾಟ್ ಶೈನ್ ಆಗುತ್ತಿಲ್ಲ. ಹೀಗಾಗಿ ಅವರ ವಿರುದ್ಧ ಸಾಕಷ್ಟು ಟೀಕೆಗಳು ಕೇಳಿಬರುತ್ತಿವೆ.
ಇದೀಗ ಈ ವಿಚಾರವಾಗಿ ಆಸ್ಟ್ರೇಲಿಯಾದ ಸ್ಟಾರ್ ಬ್ಯಾಟರ್ ಡೇವಿಡ್ ವಾರ್ನರ್ ಪ್ರಕ್ರಿಯೆ ನೀಡಿದ್ದು, ವಿರಾಟ್ ಪರ ನಿಂತಿದ್ದಾರೆ.
ಸದ್ಯ ರನ್ ಗಳಿಸಲು ಪರದಾಡುತ್ತಿರುವ ವಿರಾಟ್ ಕೊಹ್ಲಿ, ಬ್ಯಾಟಿಂಗ್ ವಿಚಾರದಲ್ಲಿ ಇದೀಗ ಮತ್ತೆ ಪ್ರತ್ಯೇಕವಾಗಿ ಸಾಬೀತುಪಡಿಸಿಕೊಳ್ಳುವ ಅವಶ್ಯಕತೆ ಇಲ್ಲ ಎಂದಿದ್ದಾರೆ.
ತಮ್ಮ ಬ್ಯಾಟಿಂಗ್ ಮೂಲಕ ಸಾಕಷ್ಟು ವ್ಯಕ್ತಿಗತ ದಾಖಲೆಗಳನ್ನು ನಿರ್ಮಿಸಿಕೊಂಡಿರುವ ವಿರಾಟ್, ಟೀಂ ಇಂಡಿಯಾಗೆ ಹಲವು ಅವಿಸ್ಮರಣೀಯ ಗೆಲುವುಗಳನ್ನು ತಂದುಕೊಟ್ಟಿದ್ದಾರೆ.
ಹೀಗಾಗಿ ಅವರಿಗೆ ಬ್ಯಾಟಿಂಗ್ ನಲ್ಲಿ ವಿಫಲವಾಗುವ ಹಕ್ಕು ಮತ್ತು ಅಧಿಕಾರು ಎರಡೂ ಇದೆ ಎಂದು ವಾರ್ನರ್ ಅಭಿಪ್ರಾಯಪಟ್ಟಿದ್ದಾರೆ.
ಆಟಗಾರ ಫಾರ್ಮ್ ಕಳೆದುಕೊಳ್ಳುವುದು ಸಹಜ ಎಂದಿರುವ ಡೇವಿಡ್, ಕೊಹ್ಲಿ ವಿಚಾರದಲ್ಲೂ ಅದೇ ನಡೆದಿದೆ, ಯಂತ್ರದಂತೆ ರನ್ ಗಳಿಸಲು ವಿರಾಟ್ ರೋಬೋಟ್ ಅಲ್ಲ ಎಂದಿದ್ದಾರೆ.
ಇನ್ನು ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಕೊಹ್ಲಿ ಶತಕ ಬಾರಿಸಿ ಎರಡು ವರ್ಷಗಳಾಗಿವೆ.
ಇದರ ಪರಿಣಾಮ ಎಂಬಂತೆ ವಿರಾಟ್ ಸೀಮಿತ ಓವರ್ ಗಳ ನಾಯಕತ್ವದಿಂದ ಕೆಳಗಿಳಿಯಬೇಕಾಯಿತು. ಅಲ್ಲದೇ ಐಸಿಸಿ ಶ್ರೇಯಾಂಕದಲ್ಲೂ ವಿರಾಟ್ ಕುಸಿಯಲಾರಂಭಿಸಿದ್ದಾರೆ.