ಪಾಕಿಸ್ತಾನ: ಉಗ್ರರ ನೆಲೆಬೀಡು ಎಂದೇ ಕುಖ್ಯಾತಿ ಪಡೆದಿರುವ ಪಾಕಿಸ್ತಾನ ಈ ಹಿಂದೆ ವಿಶ್ವಸಂಸ್ಥೆಗೆ ಭಯೋತ್ಪಾದಕರ ಪಟ್ಟಿಯನ್ನು ಸಲ್ಲಿಕೆ ಮಾಡಿತ್ತು. ಈ ಪಟ್ಟಿಯಲ್ಲಿ ದಾವೂದ್ ಇಬ್ರಾಹಿಂ ಹೆಸರೂ ಸಹ ಇತ್ತು. ಅಷ್ಟೇ ಅಲ್ಲ ಭೂಗತ ಪಾತಕಿ ದಾವೋದ್ ಪಾಕ್ ನಲ್ಲೇ ನೆಲೆಸಿದ್ದಾನೆ ಎಂದು ಹೇಳಿಕೊಂಡಿತ್ತು. ಇದೀಗ ಮತ್ತೆ ತನ್ನ ವರಸೆ ಬದಲಾಯಿಸಿರುವ ಪಾಕ್ ಅದ್ಯಾವ ರೀತಿ ಉಲ್ಟಾ ಹೊಡೆದಿದೆ ಗೊತ್ತಾ..?
ದಾವೂದ್ ಇಬ್ರಾಹಿಂ ಪಾಕಿಸ್ತಾನದ ಕರಾಚಿಯಲ್ಲಿದ್ದಾನೆ ಎಂದು ಹೇಳಿದ್ದ ಪಾಕಿಸ್ತಾನ ಇದೀಗ ಇದ್ದಕ್ಕಿದ್ದ ಹಾಗೆ ದಾವೂದ್ ಪಾಕಿಸ್ತಾನದಲ್ಲಿ ಇಲ್ಲ ಎಂದು ಹೇಳುವ ಮೂಲಕ ತನ್ನ ಚಾಳಿ ಮುಂದುವರೆಸಿದೆ. ಈ ಹಿಂದೆ ಕರಾಚಿಯಲ್ಲಿ ದಾವೋದ್ ವಾಸವಾಗಿದ್ದಾನೆ ಎಂದು ಎಂದು ಹೇಳಿ ಇದೀಗ ವರಸೆ ಬದಲಾಯಿಸಿರುವ ಪಾಕ್ ಆತ ತಮ್ಮ ನೆಲದಲ್ಲಿಲ್ಲ ಎಂದು ಹೇಳುವ ಮೂಲಕ ಮತ್ತೊಮ್ಮೆ ಟೀಕೆಗೆ ಗುರಿಯಾಗಿದೆ.