ಮುಂಬಯಿ: ಭೂಗತ ಪಾತಕಿ ದಾವೂದ್ ಇಬ್ರಾಹಿಂನ ಸಹಚರನನ್ನು ಬಂಧಿಸಿರುವ ಘಟನೆ ನಡೆದಿದೆ.
ದಾವೂದ್ ಇಬ್ರಾಹಿಂನ (Dawood Ibrahim) ಪ್ರಮುಖ ಸಹಚರ ದಾನಿಶ್ ಚಿಕ್ನಾ ಅಲಿಯಾಸ್ ಡ್ಯಾನಿಶ್ ಮರ್ಚೆಂಟ್ ನನ್ನು ಮಾದಕ ವಸ್ತು ಮಾರಾಟ ಜಾಲ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಬಂಧಿಸಿದ್ದಾರೆ.
ಮುಂಬೈ (Mumbai)ನಲ್ಲಿ ಸಹಚರನನ್ನು ಬಂಧಿಸಲಾಗಿದೆ. ಈತ ಡೋಂಗ್ರಿ ಪ್ರದೇಶದಲ್ಲಿ ದಾವೂದ್ನ ಮಾದಕ ವಸ್ತು ಕಾರ್ಯಾಚರಣೆಯನ್ನು ನಿರ್ವಹಿಸುತ್ತಿದ್ದ. ಡ್ಯಾನಿಶ್ ಜೊತೆ ಆತನ ಸಹಚರ ಕಾದರ್ ಗುಲಾಮ್ ಶೇಖ್ ನನ್ನು ಬಂಧಿಸಲಾಗಿದೆ. ಮರ್ಚೆಂಟ್ ಈ ಪ್ರಕರಣದಲ್ಲಿ ಬೇಕಾಗಿರುವ ಪ್ರಮುಖ ಆರೋಪಿ ಆಗಿದ್ದ ಎನ್ನಲಾಗಿದೆ.
ನವೆಂಬರ್ 8 ರಂದು 144 ಗ್ರಾಂ ಡ್ರಗ್ಸ್ನೊಂದಿಗೆ ಮೆರೈನ್ ಲೈನ್ಸ್ ಸ್ಟೇಷನ್ ಬಳಿ ರೆಹಮಾನ್ ಸಿಕ್ಕಿಬಿದ್ದಿದ್ದ. ವಿಚಾರಣೆ ವೇಳೆ, ಡೋಂಗ್ರಿಯಲ್ಲಿ ಅನ್ಸಾರಿಯಿಂದ ಡ್ರಗ್ಸ್ ಖರೀದಿಸಲಾಗಿದೆ ಎಂದು ಆತ ಬಾಯಿಬಿಟ್ಟಿದ್ದ. ಈ ಮಾಹಿತಿ ಆಧರಿಸಿ ಈಗ ಆರೋಪಿ ಬಂಧಿಸಲಾಗಿದೆ.
2019 ರಲ್ಲಿ, ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್ಸಿಬಿ) ಡೋಂಗ್ರಿಯಲ್ಲಿರುವ ದಾವೂದ್ನ ಡ್ರಗ್ ಫ್ಯಾಕ್ಟರಿಯನ್ನು ಕೆಡವಿತ್ತು. ಈ ವೇಳೆ ಕೋಟ್ಯಂತರ ರೂಪಾಯಿ ಮೌಲ್ಯದ ಮಾದಕವಸ್ತುಗಳನ್ನು ವಶಪಡಿಸಿಕೊಳ್ಳಲಾಗಿತ್ತು.