DC vs KKR Match | ಹೆಡ್ ಟು ಹೆಡ್ ರೆಕಾರ್ಡ್ ಹೀಗಿದೆ..
ಇಂಡಿಯನ್ ಪ್ರಿಮಿಯರ್ ಲೀಗ್ ನ 41 ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಕೊಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಮುಖಾಮುಖಿಯಾಗಲಿವೆ.
ಮುಂಬೈನ ವಾಂಖೆಡೆ ಮೈದಾನದಲ್ಲಿ ಇಂದಿನ ಪಂದ್ಯ ನಡೆಯಲಿದೆ.
ಸದ್ಯ ಅಂಕಪಟ್ಟಿಯಲ್ಲಿ ರಿಷಬ್ ಪಂತ್ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಏಳನೇ ಸ್ಥಾನದಲ್ಲಿದೆ.
ಶ್ರೇಯಸ್ ಅಯ್ಯರ್ ಸಾರಥ್ಯದ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಅಂಕಪಟ್ಟಿಯಲ್ಲಿ ಏಂಟನೇ ಸ್ಥಾನದಲ್ಲಿದೆ.
ಡೆಲ್ಲಿ ಕ್ಯಾಪಿಟಲ್ಸ್ ತಂಡ ಈವರೆಗೂ ಏಳು ಪಂದ್ಯಗಳನ್ನಾಡಿದ್ದು, ಮೂರು ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ.
ಕೆಕೆಆರ್ ಏಂಟು ಪಂದ್ಯಗಳಲ್ಲಿ ಮೂರಲ್ಲಿ ಗೆದ್ದಿದೆ. ಡೆಲ್ಲಿ ತಂಡ ಕಳೆದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವನ್ನು ಎದುರಿಸಿತ್ತು.
ಈ ಪಂದ್ಯದಲ್ಲಿ 15 ರನ್ ಗಳಿಂದ ಸೋಲು ಕಂಡಿದೆ. ಇತ್ತ ಕೆಕೆಆರ್ ತಂಡ ಕಳೆದ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡ 8 ರನ್ ಗಳಿಂದ ಸೋಲು ಕಂಡಿದೆ.
ಉಭಯ ತಂಡಗಳು ಈವರೆಗೂ ಐಪಿಎಲ್ ನಲ್ಲಿ 30 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, ಕೊಲ್ಕತ್ತಾ ನೈಟ್ ರೈಡರ್ಸ್ ತಂಡ 16 ಪಂದ್ಯಗಳಲ್ಲಿ, 14 ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಗೆಲುವು ಸಾಧಿಸಿದೆ.
ಯುಎಇ ನಲ್ಲಿ ಆಡಿರುವ 15 ಪಂದ್ಯದಲ್ಲಿ ಕೆಕೆಆರ್ 8, ಡೆಲ್ಲಿ ಕ್ಯಾಪಿಟಲ್ಸ್ ತಂಡ 7 ಮ್ಯಾಚ್ ಗಳಲ್ಲಿ ಗೆಲುವು ಸಾಧಿಸಿದೆ.
ಇಂಡಿಯಾದಲ್ಲಿ ಈ ಎರಡೂ ತಂಡಗಳು 23 ಪಂದ್ಯದಲ್ಲಿ ಕೆಕೆಆರ್ 23, ಡೆಲ್ಲಿ ಕ್ಯಾಪಿಟಲ್ಸ್ ತಂಡ 9 ಗೆದ್ದಿವೆ.
ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಕೆಕೆಆರ್ ಪರ ಗೌತಮ್ ಗಂಭೀರ್ 413 ರನ್ ಗಳಿಸಿದ್ದಾರೆ. ಡಿಸಿ ಪರ ಶಿಖರ್ ಧವನ್ ಕೆಕೆಆರ್ ವಿರುದ್ಧ 810 ರನ್ ಗಳಿಸಿದ್ದಾರೆ.
ಇನ್ನು ಕಳೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಎರಡು ಪಂದ್ಯಗಳಲ್ಲಿ, ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ 3 ಪಂದ್ಯಗಳಲ್ಲಿ ಗೆದ್ದಿವೆ.
DC vs KKR Head to Head Records









