DC vs KKR Match | ಕೆಕೆಆರ್ ತಂಡದ ಪ್ಲೇಯಿಂಗ್ ಇಲೆವೆನ್..
ಸತತ ಸೋಲುಗಳಿಂದ ಕಂಗೆಟ್ಟಿರುವ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಇಂದು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸೆಣಸಾಡಲಿದೆ. ಮುಂಬೈನ ವಾಂಖೆಡೆ ಮೈದಾನದಲ್ಲಿ ಇಂದಿನ ಪಂದ್ಯ ನಡೆಯಲಿದೆ. ಈ ಉಭಯ ತಂಡಗಳು ಈ ಸೀಸನ್ ನಲ್ಲಿ ಎರಡನೇ ಬಾರಿಗೆ ಸೆಣಸಾಡಲಿವೆ.
ಶ್ರೇಯಸ್ ಅಯ್ಯರ್ ನೇತೃತ್ವದ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಈ ಆವೃತ್ತಿಯಲ್ಲಿ 8 ಪಂದ್ಯಗಳನ್ನಾಡಿದೆ.
ಈ ಪೈಕಿ ಮೂರು ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಇನ್ನುಳಿದ ಪಂದ್ಯಗಳಲ್ಲಿ ಸೋಲುಕಂಡಿದೆ. ಹೀಗಾಗಿ ಅಂಕಪಟ್ಟಿಯಲ್ಲಿ ಕೆಕೆಆರ್ ಎಂಟನೇ ಸ್ಥಾನದಲ್ಲಿದೆ.
ಡೆಲ್ಲಿ ತಂಡ ಕಳೆದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವನ್ನು ಎದುರಿಸಿತ್ತು. ಈ ಪಂದ್ಯದಲ್ಲಿ 15 ರನ್ ಗಳಿಂದ ಸೋಲು ಕಂಡಿದೆ.
ಇತ್ತ ಕೆಕೆಆರ್ ತಂಡ ಕಳೆದ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡ 8 ರನ್ ಗಳಿಂದ ಸೋಲು ಕಂಡಿದೆ.
ಉಭಯ ತಂಡಗಳು ಈವರೆಗೂ ಐಪಿಎಲ್ ನಲ್ಲಿ 30 ಮ್ಯಾಚ್ ಗಳಲ್ಲಿ ಮುಖಾಮುಖಿಯಾಗಿದ್ದು, 14 ಪಂದ್ಯಗಳಲ್ಲಿ ಡೆಲ್ಲಿ ಕ್ಯಾಪಿಟಲ್ಸ್, 16 ಪಂದ್ಯದಲ್ಲಿ ಕೆಕೆಆರ್ ತಂಡ ಗೆದ್ದಿದೆ.
ತಂಡಗಳ ಬಲಾಬಲದ ವಿಚಾರಕ್ಕೆ ಬಂದರೇ

ಎರಡೂ ತಂಡದಲ್ಲಿ ಸ್ಥಿರ ಆಟದ ಕೊರತೆ ಎದ್ದು ಕಾಣುತ್ತಿದೆ. ಕೋಲ್ಕತ್ತಾ ತಂಡಕ್ಕೆ ಬ್ಯಾಟಿಂಗ್ ವಿಭಾಗ ತಲೆ ನೋವಾಗಿದೆ.
ಮುಖ್ಯವಾಗಿ ಆರಂಭಿಕರ ಕೊರತೆ ಕಾಡುತ್ತಿದೆ. ಹಲವು ಪ್ರಯೋಗಗಳನ್ನು ಮಾಡಿದ್ರೂ ಯಾವುದೇ ಪ್ರಯೋಜನೆ ಆಗುತ್ತಿಲ್ಲ.
ಹೀಗಾಗಿ ಇಂದಿನ ಪಂದ್ಯದಲ್ಲಿ ಸತತ ವಿಫಲರಾಗುತ್ತಿರುವ ವೆಂಕಟೇಶ್ ಅಯ್ಯರ್ ಬದಲಿಗೆ ಅಜಿಂಕ್ಯಾ ರಹಾನೆಗೆ ಪ್ಲೇಯಿಂಗ್ 11 ನಲ್ಲಿ ಅವಕಾಶ ಸಿಗಬಹುದು.
ಇನ್ನು ನಾಯಕ ಶ್ರೇಯಸ್ ಅಯ್ಯರ್, ರಸೆಲ್ ತಂಡದ ಬ್ಯಾಟಿಂಗ್ ಶಕ್ತಿಗಳಾಗಿದ್ದಾರೆ.
ಸ್ಯಾಮ್ ಬಿಲ್ಲಿಂಗ್ಸ್, ಆಲ್ ರೌಂಡರ್ ರೂಪದಲ್ಲಿ ಕಾಣಿಸಿಕೊಳ್ಳುವ ಸುನಿಲ್ ನರೈನ್, ಪ್ಯಾಟ್ ಕಮ್ಮಿನ್ಸ್ ಮಿಂಚುತ್ತಿಲ್ಲ.
ಬೌಲಿಂಗ್ ವಿಭಾಗದಲ್ಲಿ ಹೊಸ ಚೆಂಡನ್ನು ಉಮೇಶ್ ಯಾದವ್ ಹಾಗೂ ಟೀಮ್ ಸೌಥಿ ಹಂಚಿಕೊಂಡು ಬಿಗುವಿನ ದಾಳಿ ನಡೆಸುತ್ತಿದ್ದಾರೆ.
ಕೆಕೆಆರ್ ನ ಸಂಭಾವ್ಯ ಸಂಭಾವ್ಯ ತಂಡ ಹೀಗಿದೆ.
ವೆಂಕಟೇಶ್ ಅಯ್ಯರ್ ಅಥವಾ ಅಜಿಂಕ್ಯಾ ರಹಾನೆ
ಸುನಿಲ್ ನರೈನ್
ಶ್ರೇಯಸ್ ಅಯ್ಯರ್ (ಸಿ)
ನಿತೀಶ್ ರಾಣಾ
ರಿಂಕು ಸಿಂಗ್
ಆಂಡ್ರೆ ರಸೆಲ್
ಸ್ಯಾಮ್ ಬಿಲ್ಲಿಂಗ್ಸ್
ಟಿಮ್ ಸೌಥಿ
ಶಿವಂ ಮಾವಿ
ಉಮೇಶ್ ಯಾದವ್
ವರುಣ್ ಚಕ್ರವರ್ತಿ
DC vs KKR Match KKR Team Playing Eleven








