DC vs RR Match preview | ಪಂತ್ ವರ್ಸಸ್ ಸಂಜು.. ಗೆಲುವು ಯಾರಿಗೆ..?
ಇಂಡಿಯನ್ ಪ್ರಿಮಿಯರ್ ಲೀಗ್ ನ 34ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳು ಮುಖಾಮುಖಿಯಾಗುತ್ತಿವೆ.
ಮುಂಬೈನ ವಾಂಖೆಡೆ ಮೈದಾನದಲ್ಲಿ ರಿಷಬ್ ಪಂತ್ ವರ್ಸಸ್ ಸಂಜು ಸ್ಯಾಮ್ಸನ್ ಕಾಳಗ ನಡೆಯಲಿದೆ.
ಐಪಿಎಲ್ ಅಂಕಪಟ್ಟಿಯಲ್ಲಿ ರಿಷಬ್ ಪಂತ್ ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್ ತಂಡ, ಆರನೇ ಸ್ಥಾನದಲ್ಲಿದೆ.
ಸಂಜು ಸ್ಯಾಮ್ಸನ್ ನಾಯಕತ್ವ ರಾಜಸ್ಥಾನ್ ರಾಯಲ್ಸ್ ತಂಡ ಮೂರನೇ ಸ್ಥಾನದಲ್ಲಿದೆ.
15ನೇ ಸೀಸನ್ ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಆರು ಪಂದ್ಯಗಳನ್ನಾಡಿದೆ. ಈ ಪೈಕಿ ಮೂರು ಪಂದ್ಯಗಳನ್ನು ಗೆದ್ದುಕೊಂಡಿದ್ದು, ಮೂರು ಪಂದ್ಯಗಳಲ್ಲಿ ಸೋಲು ಕಂಡಿದೆ.
ಇತ್ತ ರಾಜಸ್ಥಾನ್ ರಾಯಲ್ಸ್ ತಂಡ ಆರು ಪಂದ್ಯಗಳನ್ನಾಡಿದ್ದು, ನಾಲ್ಕು ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಎರಡು ಪಂದ್ಯಗಳಲ್ಲಿ ಸೋಲು ಕಂಡಿದೆ.
ಡೆಲ್ಲಿ ಕ್ಯಾಪಿಟಲ್ಸ್ ತಂಡ ಕಳೆದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ 9 ವಿಕೆಟ್ ಗಳಿಂದ ಗೆಲುವು ಕಂಡಿದೆ.
ರಾಜಸ್ಥಾನ್ ರಾಯಲ್ಸ್ ತಂಡ ಕಳೆದ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಸೆಣಸಾಟ ನಡೆಸಿದ್ದು, 7 ರನ್ ಗಳಿಂದ ಗೆಲುವು ಸಾಧಿಸಿದೆ.
ಇಂಡಿಯಲ್ ಪ್ರಿಮಿಯರ್ ಲೀಗ್ ಇತಿಹಾಸದಲ್ಲಿ ಈ ಎರಡು ತಂಡಗಳು ಈವರೆಗೂ 24 ಬಾರಿ ಮುಖಾಮುಖಿ ಆಗಿವೆ.
ಈ ಪೈಕಿ ಉಭಯ ತಂಡಗಳು ತಲಾ 12 ಬಾರಿ ಗೆಲುವು ಸಾಧಿಸಿವೆ.
ತಂಡಗಳ ಬಲಾಬಲ ವಿಚಾರಕ್ಕೆ ಬಂದ್ರೆ
ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಉತ್ತಮ ಆರಂಭ ಸಿಕ್ಕರೂ ಮಿಡಲ್ ಆರ್ಡರ್ ಸಮಸ್ಯೆ ಕಾಣುತ್ತಿದೆ.
ಆರಂಭಿಕರಾಗಿ ಬರುವ ಡೇವಿಡ್ ವಾರ್ನರ್, ಪೃಥ್ವಿ ಶಾ ಎದುರಾಳಿಗಳ ಮೇಲೆ ಸವಾರಿ ಮಾಡುತ್ತಿದ್ದಾರೆ.
ಆದ್ರೆ ನಂತರ ಬರುವ ನಾಯಕ ರಿಷಬ್ ಪಂತ್, ರೋವ್ ಮನ್ ಪೋವೆಲ್, ಲಲಿತ್ ಯಾದವ್, ಸರ್ಫರಾಜ್ ಖಾನ್ ತಂಡಕ್ಕೆ ನೆರವಾಗುತ್ತಿಲ್ಲ.
ಹೀಗಾಗಿ ಇಂದಿನ ಪಂದ್ಯದಲ್ಲಿ ಪ್ಲೇಯಿಂಗ್ ಇಲೆವೆನ್ ನಲ್ಲಿ ಬದಲಾವಣೆಗಳಾಗುವ ಸಾಧ್ಯತೆಗಳಿವೆ.
ಇತ್ತ ಕೆಳಕ್ರಮಾಂಕದ ಬ್ಯಾಟರ್ ಗಳಾದ ಅಕ್ಷರ್ ಪಟೇಲ್, ಶರ್ದೂಲ್ ಠಾಖೂರ್ ಕೊನೆಯಲ್ಲಿ ಉತ್ತಮವಾಟವಾಡುತ್ತಿದ್ದಾರೆ.
ಬೌಲಿಂಗ್ ನಲ್ಲಿ ಡೆಲ್ಲಿ ತಂಡ ಉತ್ತಮವಾಗಿದೆ. ಕುಲ್ ದೀಪ್ ಯಾದವ್ ತಂಡದ ಟ್ರಂಪ್ ಕಾರ್ಡ್ ಬೌಲರ್ ಆಗಿದ್ದಾರೆ.
ಖಲೀಲ್ ಅಹ್ಮದ್, ಮುಸ್ತಫೀಝರ್ ರೆಹಮಾನ್ ರನ್ ಗಳಿಗೆ ಕಡಿವಾಣ ಹಾಕಬೇಕಿದೆ.
ಮತ್ತೊಂಡೆದೆ ರಾಜಸ್ಥಾನ್ ರಾಯಲ್ಸ್ ತಂಡ ಈ ಬಾರಿ ಸಾಲಿಡ್ ಆಗಿ ಕಾಣುತ್ತಿದೆ.
ಮುಖ್ಯವಾಗಿ ಆರಂಭಿಕ ಜೋಸ್ ಬಟ್ಲರ್ ಫಾಮ್ ತಂಡಕ್ಕೆ ಪ್ಲಸ್ ಪಾಯಿಂಟ್ ಆಗುತ್ತಿದೆ.
ಈಗಾಗಲೇ ಈ ಆವೃತ್ತಿಯಲ್ಲಿ 2 ಶತಕ ಸಿಡಿಸಿರುವ ಬಟ್ಲರ್ ಎದುರಾಳಿಗೆ ದುಸ್ವಪ್ನ ಆಗೋದರಲ್ಲಿ ಯಾವುದೇ ಅನುಮಾನವಿಲ್ಲ.
ಇನ್ನು ಬ್ಯಾಟಿಂಗ್ ನಲ್ಲಿ ದೇವದತ್ ಪಡಿಕ್ಕಲ್, ಸಂಜು ಸ್ಯಾಮ್ಸನ್, ಕರುಣ್ ನಾಯರ್, ಶಿಮ್ರಾನ್ ಹಿಟ್ಮೇಯರ್, ಪರಗ್ ಸ್ಥಿರ ಆಟದ ಪ್ರದರ್ಶನ ನೀಡಬೇಕಿದೆ.
ಬೌಲಿಂಗ್ ನಲ್ಲೂ ರಾಜಸ್ಥಾನ್ ರಾಯಲ್ಸ್ ತಂಡ ಬಲಿಷ್ಠವಾಗಿದೆ. ಮುಖ್ಯವಾಗಿ ಯುಜಿ ಚಹಾಲ್ ಫಾರ್ಮ್ ತಂಡಕ್ಕೆ ಆನೆ ಬಲವಾಗಿದೆ.
ಟ್ರೆಂಟ್ ಬೋಲ್ಟ್ ವಿಕೆಟ್ ಬೇಟೆಯಾಡುತ್ತಿದ್ದಾರೆ. ಪ್ರಸಿಸ್ಧ್ ಕೃಷ್ಣ, ಅಶ್ವಿನ್, ಒಬೆಡ್ ಮೆಕಾಯ್ ಫಾರ್ಮ್ ಕೂಡ ಚೆನ್ನಾಗಿದೆ.
ಎರಡು ತಂಡಗಳನ್ನು ಹೋಲಿಕೆ ಮಾಡಿ ನೋಡಿದ್ರೆ ಡೆಲ್ಲಿ ತಂಡಕ್ಕಿಂತ ರಾಯಲ್ಸ್ ತಂಡ ಬಲಿಷ್ಠವಾಗಿದೆ.
ಹೀಗಾಗಿ ಇಂದಿನ ಪಂದ್ಯದಲ್ಲಿ ರಾಜಸ್ಥಾನ್ ಮೇಲು ಗೈ ಸಾಧಿಸುವ ಸಾಧ್ಯತೆಗಳಿವೆ. DC vs RR match Prediction