DC vs RR Match preview | ರಾಯಲ್ಸ್ ತಂಡ ಪ್ಲೇಯಿಂಗ್ 11 Prediction
15 ನೇ ಆವೃತ್ತಿಯ ಇಂಡಿಯಲ್ ಪ್ರಿಮಿಯರ್ ಲೀಗ್ ನ 34ನೇ ಪಂದ್ಯದಲ್ಲಿಡೆಲ್ಲಿ ಕ್ಯಾಪಿಟಲ್ಸ್ ವರ್ಸಸ್ ರಾಜಸ್ಥಾನ್ ರಾಯಲ್ಸ್ ತಂಡಗಳ ಗುದ್ದಾಟ ನಡೆಯಲಿದೆ.
ಮುಂಬೈನ ವಾಂಖೆಡೆ ಅಂಗಳದಲ್ಲಿ ರಿಷಬ್ ಪಂತ್ ನಾಯಕತ್ವ ಡೆಲ್ಲಿ ಕ್ಯಾಪಿಟಲ್ಸ್ ತಂಡ, ಸಂಜು ಸ್ಯಾಮ್ಸನ್ ಸಾರಥ್ಯದ ರಾಜಸ್ಥಾನ್ ರಾಯಲ್ಸ್ ತಂಡವನ್ನು ಎದುರಿಸಲುತ್ತಿದೆ.
ಸಂಜು ಸ್ಯಾಮ್ಸನ್ ನಾಯಕತ್ವ ರಾಜಸ್ಥಾನ್ ರಾಯಲ್ಸ್ ತಂಡ ಮೂರನೇ ಸ್ಥಾನದಲ್ಲಿದೆ.
ಇತ್ತ ರಾಜಸ್ಥಾನ್ ರಾಯಲ್ಸ್ ತಂಡ ಆರು ಪಂದ್ಯಗಳನ್ನಾಡಿದ್ದು, ನಾಲ್ಕು ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಎರಡು ಪಂದ್ಯಗಳಲ್ಲಿ ಸೋಲು ಕಂಡಿದೆ.
ರಾಜಸ್ಥಾನ್ ರಾಯಲ್ಸ್ ತಂಡ ಕಳೆದ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಸೆಣಸಾಟ ನಡೆಸಿದ್ದು, 7 ರನ್ ಗಳಿಂದ ಗೆಲುವು ಸಾಧಿಸಿದೆ.
ಇಂಡಿಯಲ್ ಪ್ರಿಮಿಯರ್ ಲೀಗ್ ಇತಿಹಾಸದಲ್ಲಿ ಈ ಎರಡು ತಂಡಗಳು ಈವರೆಗೂ 24 ಬಾರಿ ಮುಖಾಮುಖಿ ಆಗಿವೆ. ಈ ಪೈಕಿ ಉಭಯ ತಂಡಗಳು ತಲಾ 12 ಬಾರಿ ಗೆಲುವು ಸಾಧಿಸಿವೆ.
ರಾಜಸ್ಥಾನಕ್ಕೆ ಬ್ಯಾಟಿಂಗ್ ಭಯವಿಲ್ಲ. ಆರೇಂಜ್ ಕ್ಯಾಪ್ ವಿನ್ನರ್ ಜೋಸ್ ಬಟ್ಲರ್ ಪವರ್ ಪ್ಲೇ ಮತ್ತು ಮಧ್ಯಮ ಓವರ್ನಲ್ಲಿ ಪವರ್ ಹಿಟ್ ತೋರಿಸಿದ್ದಾರೆ.
ಶಿಮ್ರನ್ ಹೆಟ್ಮಾಯರ್ ಫೈನಲ್ ಟಚ್ ಮೂಲಕ ಫಿನಿಶಿಂಗ್ ತಂದಿದ್ದಾರೆ.
ಆದರೆ ದೇವದತ್ ಪಡಿಕಲ್, ಸಂಜು ಸ್ಯಾಮ್ಸನ್ ನಿಜವಾದ ಸಾಮರ್ಥ್ಯ ತೋರಿಸಿಲ್ಲ. ಕರುಣ್ ನಾಯರ್ ಗೆ ಅವಕಾಶ ಸಿಕ್ಕಿಲ್ಲ.
ರಿಯಾನ್ ಪರಾಗ್ ಕೊನೆಯಲ್ಲಿ ಸ್ಥಿರತೆ ತೋರಿಸಿಲ್ಲ.
ಬೌಲಿಂಗ್ನಲ್ಲಿ ರಾಯಲ್ಸ್ ಸೂಪರ್. ಟ್ರೆಂಟ್ ಬೋಲ್ಟ್ ಮತ್ತು ಪ್ರಸಿಧ್ ಕೃಷ್ಣ ಆರಂಭದಲ್ಲೇ ವಿಕೆಟ್ ಪಡೆದು ಒತ್ತಡ ಹಾಕುತ್ತಿದ್ದಾರೆ.
ಅಶ್ವಿನ್ ಮತ್ತು ಚಹಲ್ ಜೋಡಿ ರನ್ ಕೊಡುವುದಿಲ್ಲ, ಬ್ಯಾಟ್ಸ್ ಮನ್ ಗಳನ್ನು ಗಟ್ಟಿಯಾಗಿ ನಿಲ್ಲಲು ಬಿಡುವುದೂ ಇಲ್ಲ.
ಆದರೆ 5ನೇ ಬೌಲರ್ ಸಮಸ್ಯೆ ರಾಯಲ್ಸ್ಗೆ ಕಾಡುತ್ತಿದೆ. ಒಬೆಡ್ ಮೆಕಾಯ್ ಒಂದೇ ಪಂದ್ಯ ಆಡಿದ್ದರೂ ಇಂಪ್ರೆಸ್ ಮಾಡಿರುವುದು ಸತ್ಯ.
DC vs RR Match preview | ರಾಯಲ್ಸ್ ತಂಡ ಪ್ಲೇಯಿಂಗ್ 11 Prediction
ಜೋಸ್ ಬಟ್ಲರ್
ದೇವದತ್ ಪಡಿಕ್ಕಲ್
ಸಂಜು ಸ್ಯಾಮ್ಸನ್
ಶಿಮ್ರಾನ್ ಹೆಟ್ಮೆಯರ್
ರಿಯಾನ್ ಪರಾಗ್
ಕರುಣ್ ನಾಯರ್
ರವಿಚಂದ್ರನ್ ಅಶ್ವಿನ್
ಟ್ರೆಂಟ್ ಬೌಲ್ಟ್
ಒಬೆದ್ ಮೆಕಾಯ್
ಪ್ರಸಿದ್ಧ್ ಕೃಷ್ಣ
ಯುಜ್ವೇಂದ್ರ ಚಾಹಲ್
ವಾಂಖೆಡೆ ಮೈದಾನದಲ್ಲಿ ಪಂದ್ಯ ನಡೆಯುತ್ತಿರುವುದರಿಂದ ಬೌಲರ್ ಗಳು ಕೊಂಚ ನೆಮ್ಮದಿಯಾಗಿದ್ದಾರೆ. ಲೋ ಸ್ಕೋರ್ ಅಲ್ಲದೇ ಇದ್ದರೂ ಬಿಗ್ ಸ್ಕೋರ್ ಮಾಡುವುದು ಈ ಮೈದಾನದಲ್ಲಿ ಕೊಂಚ ಕಷ್ಟ.DC vs RR Match preview Royals Team Playing 11 Prediction